ಹೊಸಕೆರೆ : ಮುಂಬರುವ ಚುನಾವಣೆಯಲ್ಲಿ ಮತದಾರರ ಒಲವು ಕಾಂಗ್ರೆಸ್ ಪಕ್ಷಕ್ಕಾಗಿ ರುವುದರಿಂದ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಸೇರಲು ಮುಂದಾಗಿದ್ದು ನಮ್ಮಿಂದ ಅವರು ಬರುವುದಕ್ಕೆ ಸಂಪೂರ್ಣ ವಿರೋಧವಿದೆ ಎಂದು ಕಾಂಗ್ರೆಸ್ ಮುಖಂಡ ಹೊನ್ನಗಿರಿಗೌಡ ಕಿಡಿಕಾರಿದರು.
ಚೇಳೂರು ಹೋಬಳಿಯ ಬಿದರೆ ಗ್ರಾಮ ಪಂಚಾಯಿತಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಮಚಿತ್ತ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದರು. ಶಾಸಕ ಎಸ್ ಆರ್ ಶ್ರೀನಿವಾಸ್ ಕಾಂಗ್ರೆಸ್ ಬಂದ್ರೂ ನಾವು ಯಾರು ಕೊಡ ನಮ್ಮ ಪಕ್ಷಕ್ಕೆ ಸೇರಿಸಿಕೊಳಲು ತಯಾರಿಲ್ಲ ಗುಬ್ಬಿಯಲ್ಲಿ ಸುಮಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷ ಕಟ್ಟಿ ಹಗಲು ಇರುಳು ಪಕ್ಷಕ್ಕೆ ಸೇವೆಮಾಡಿದ್ದೇವೆ ನಮ್ಮ ಪಕ್ಷದಲ್ಲಿ ಅಭ್ಯರ್ಥಿಗಳು ಇದೇವೆ ಶಾಸಕರು ಬರುವ ಅಗತ್ಯವಿಲ್ಲ ಈಗಾಗಲೇ ಹೈಕಮಾಂಡ್ ಸೃಷ್ಠವಾಗಿ ಹೇಳಿದೆ ನಮ್ಮಲ್ಲಿ ಯಾರೇ ಅಭ್ಯರ್ಥಿಗಳು ಆದರೂ ಸಹ ಕಾಂಗ್ರೆಸ್ ಗೆಲುವುಗೆ ಪ್ರಾಮಾಣಿಕವಾಗಿ ಕೆಲಸ ಮಾಡಿ ಈ ಭಾರಿ ಗುಬ್ಬಿಯಲ್ಲಿ ಕಾಂಗ್ರೆಸ್ ಗೆಲುವಿಗೆ ಶ್ರಮಿಸುತ್ತೇವೆ ಎಂದು ತಿಳಿಸಿದರು.
ಕಾಂಗ್ರೆಸ್ ಮುಖಂಡ ಜಿ.ಎಸ್. ಪ್ರಸನ್ನ ಕುಮಾರು ಮಾತನಾಡಿ ಸತತ ನಾಲ್ಕು ಭಾರಿ ಗೆದಿರುವ ಶಾಸಕರು ತಾಲ್ಲೂಕಿನಲ್ಲಿ ಯಾವುದೇ ಅಭಿವೃದ್ದಿ ಮಾಡದೇ ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ ಸಾಕಷ್ವು ಗ್ರಾಮಗಳಲ್ಲಿ ರಸ್ತೆಯಿಲ್ಲ , ಚರಂಡಿಗಳು ಇಲ್ಲ ಅಭಿವೃದ್ದಿ ಮರಿಚೀಕೆಯಾಗಿದೆ ತಾಲ್ಲೂಕಿನಲ್ಲಿ ಸಾಕಷ್ವು ರಸ್ತೆಗಳು ಇಲ್ಲದಿರುವುದು ನಿಮ್ಮೆಗೆಲ್ಲ ಗೊತ್ತಿದೆ ತಾಲ್ಲೂಕಿನ ಮತದಾರರು ಬುದ್ದಿವಂತರಾಗಿದ್ದು ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲುವಿಗೆ ಶ್ರಮಿಸಬೇಕು ಎಂದ ಅವರು ಜೆಡಿಎಸ್ ಪಕ್ಷದಿಂದ ಶ್ರೀನಿವಾಸ್ ಅವರನ್ನು ಹೊರ ಹಾಕಿರುವುದು ಎಲ್ಲರಿಗೋ ಗೊತ್ತಿದೆ, ಕುಮಾರಸ್ವಾಮಿಯವರಿಗೆ ಮಾಡಿರುವ ದ್ರೋಹದಿಂದ ಕುಮಾರಣ್ಣ ಅವರು ಶ್ರೀನಿವಾಸ್ ಅವರನ್ನು ಉಚ್ಚಾಟನೆ ಮಾಡಿದ್ದಾರೆ.ಬೇರೆ ಉದ್ದೇಶವಿಲ್ಲ ಶಾಸಕರೇ ಸುಳ್ಳು ಹೇಳಿಕೊಂಡು ಕುಮಾರಣ್ಣ ಅವರೇ ನಮ್ಮನ್ನ ಬೇಕು ಅಂಥನೇ ಉಚ್ಚಾಟನೆ ಮಾಡಿದ್ದಾರೆ ಅಂಥ ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದ ಅವರು ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಗುಬ್ಬಿಯಲ್ಲಿ ಕಾಂಗ್ರೆಸ್ ಗೆಲ್ಲುವು ಖಚಿತ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ತಾತಯ್ಯ. ನರಸಿಂಹಯ್ಯ , ಜಯಣ್ಣ . ಶಿಶಿಕಿರಣ್. ಎಸ್,ಪುಟ್ಟಯ್ಯ.ಚೇಳೂರು ಗಂಗಣ್ಣ. ಶಿವಾನಂದ್. ಶಾರದಮ್ಮ.ಸೌಭಾಗ್ಯಮ್ಮ.ಡಿ,ಕೆ, ಗಂಗಾಧರ್. ಬಸವರಾಜು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.