ವಿದ್ಯಾರ್ಥಿಗಳು ಉತ್ತಮ ಪ್ರಜೆಗಳಾಗಿ ತಂದೆತಾಯಿಗಳಿಗೆ ಕೀರ್ತಿಯನ್ನು ತನ್ನಿ

ಪಾವಗಡ: ” ಅರಸೀಕೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರುಗ ಳಿಂದ ವಿನೂತನವಾಗಿ ಮಕ್ಕಳ ದಿನಾಚರಣೆ”
ಸರ್ಕಾರಿ ಪ್ರೌಢಶಾಲೆ ಅರಸೀಕೆರೆಯಲ್ಲಿ ಶಾಲೆಯ ಎಲ್ಲಾ ಶಿಕ್ಷಕರುಗಳು ವಿನೂತನವಾಗಿ ವಿಶಿಷ್ಟವಾಗಿ ಅದ್ದೂರಿಯಾಗಿ ವಿದ್ಯಾರ್ಥಿಗಳ ಸಹಕಾರದಿಂದ ಬಲೂನ್ ಡೆಕೋರೇಷನ್ ಮಾಡಿಸುವ ಮೂಲಕ ಭಾರತದ ಮೊದಲ ಪ್ರಧಾನ ಮಂತ್ರಿಗಳು ಮತ್ತು ಮಕ್ಕಳ ಪ್ರೇಮಿಯಾದ ಚಾಚಾ ನೆಹರು ಎಂದು ಪ್ರಖ್ಯಾತಿಯಾದ ಭಾರತ ರತ್ನ ಜವಾಹರ ಲಾಲ್ ನೆಹರು ರವರ 133 ನೇ ಜನ್ಮದಿನಾಚರಣೆಯನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸುವ ಪ್ರಯುಕ್ತ ನೆಹರು ರವರಿಗೆ ಗೌರವವನ್ನು ಸೂಚಿಸಿಲು ಪುಷ್ಪಾರ್ಚನೆ ಯನ್ನು ಮತ್ತು ಪೂಜೆಯನ್ನು ನೆರವೇರಿಸುವ ಮೂಲಕ ಪ್ರಾರಂಭಿಸಲಾಯಿತು

ಹಾಗೆಯೇ ಪೂರ್ಣಪ್ರಮಾಣ ದಲ್ಲಿ ಶಾಲಾ ಸಂಸತ್ತಿನ ಎಲ್ಲಾ ಪ್ರತಿನಿಧಿಗಳನ್ನು ಸಭೆಯಲ್ಲಿ ಕೂರಿಸಿ ಅವರುಗಳಿಂದಲೇ ವಿನೂತನವಾಗಿ ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಲಾಗಿ ಶಿಕ್ಷಕರುಗಳಿಂದ ಪುಷ್ಪಗುಚ್ಚವನ್ನು ನೀಡಿ ಸ್ವಾಗತವನ್ನು ಕೋರಲಾಯಿತು ಮತ್ತು ನಂತರ ವಿದ್ಯಾರ್ಥಿಗಳಿಂದ ಜವಾಹರಲಾಲ್ ನೆಹರೂ ಬಗ್ಗೆ ಭಾಷಣ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನು ಆಯೋಜಿಸಲಾಯಿತು.
ಈ ಕಾರ್ಯಕ್ರಮದ ಹಿಂದಿನ ದಿನ ಶಿಕ್ಷಕರುಗಳಿಂದ
ವಿದ್ಯಾರ್ಥಿಗಳಿಗೆ ಕೆಲವು ಸ್ಪರ್ಧೆಗಳನ್ನು ಆಯೋಜಿಸ ಲಾಗಿತ್ತು ಅದರಲ್ಲಿ ಪ್ರಮುಖವಾಗಿ ಮ್ಯೂಜಿಕಲ್ ಚೇರ್, ನದಿ-ದಡ ಮತ್ತು ವಿವಿಧ ಖಂಡಗಳ ಆಟ ಸ್ಪರ್ಧೆಗಳನ್ನು ಆಯೋಜಿಸುವುದರ ಮೂಲಕ ಸಾರ್ಥಕವಾದ ಮಕ್ಕಳ ದಿನಾಚರಣೆಯನ್ನು ಆಚರಿಸಿ ಬಹುಮಾನಗಳನ್ನು ಕೊಡಲಾಯಿತು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ರೇಣುಕರಾಜ್ .ಜಿ.ಹೆಚ್ ರವರು ಮಾತನಾಡಿ ಮಕ್ಕಳ ದಿನಾಚರಣೆಯ ಮಹತ್ವ,ಹಿನ್ನೆಲೆ ಮತ್ತು ವಿದ್ಯಾರ್ಥಿಗಳಿಗೆ ಉತ್ತಮ ಪ್ರಜೆಗಳಾಗಿ ರೂಪುಗೊಂಡು ತಂದೆತಾಯಿಗಳಿಗೆ ಕೀರ್ತಿಯನ್ನು ತನ್ನಿ ಎಂಬ ಕಿವಿ ಮಾತನ್ನು ಹೇಳಿದರು ಹಾಗೆಯೇ ಕಾರ್ಯಕ್ರಮದ ಯಶಸ್ವಿಗೆ ಕಾರಣೀಕರ್ತರಾದ ಎಲ್ಲಾ ಶಿಕ್ಷಕರುಗಳಿಗೆ,ಹಳೆಯ ವಿದ್ಯಾರ್ಥಿಗಳಿಗೆ ಧನ್ಯವಾದಗಳನ್ನು ತಿಳಿಸಿದರು. ಕಾರ್ಯಕ್ರಮವನ್ನು ಶ್ರೀಮತಿ ವಿಮಲಾ.ಆರ್ ರವರು ನಿರೂಪಿಸಿದರು, ಮಾನಸ.ಎನ್ ಸ್ವಾಗತಿಸಿದರು ಮೋಹನ್ ಕುಮಾರ್.ಜಿ.ಕೆ ರವರು ವಂದನಾರ್ಪಣೆ ಮಾಡಿದರು.
ಇಂತಹ ವಿನೂತನ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರಾದ ಗೋವಿಂದಪ್ಪ.ಜಿ.ಎನ್. ಸಹಶಿಕ್ಷಕರಾದ ರೇಣುಕರಾಜ್. ಜಿ.ಹೆಚ್, ರವಿ.ಎಸ್,ಮೋಹನ್ ಕುಮಾರ್. ಜಿ.ಕೆ,ಅಭಿಷೇಕ್. ಎಂ.ವಿ,ಶಿಕ್ಷಕಿಯರಾದ ಶ್ರೀಮತಿ ವಿಮಲಾ.ಆರ್, ರಶ್ಮೀ.ಸಿ.ಎಸ್ , ಮಾನಸ.ಎಮ್ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಗುರುರಾಜ್ ಉಪಾಧ್ಯಕ್ಷಿಣಿಯಾದ ಲಕ್ಕಮ್ಮ ಸದಸ್ಯರಾದ ಶ್ರೀಮತಿ ಗೀತಮ್ಮ,ರತ್ನಮ್ಮ ಹಳೆಯ ವಿದ್ಯಾರ್ಥಿಗಳು ಹಾಗೂ ಪ್ರಸ್ತುತ ವಿದ್ಯಾರ್ಥಿಗಳು ಹಾಜರಿದ್ದು ಒಟ್ಟಿನಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!