ಹೊಸಕೆರೆ: ಗ್ರಾಮ ಪಂಚಾಯತಿಯಲ್ಲಿ ಕೋಟ್ಯಾಂತರ ರೂಪಾಯಿ ಅಕ್ರಮ ಕಾಮಗಾರಿಗಳು, ಹಾಗೂ ನಕಲಿ ರಸಿದಿಗಳು ಸೃಷ್ಟಿಯಾಗಿವೆ ನಡೆದಿರುವುದು ಎಂದು ಗ್ರಾಮಸ್ಥರು ಸ್ವಯಂ ಘೋಷಿತ ಬಂದ್ ಮಾಡಿ ಮೇಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಗ್ರಾಮ ಪಂಚಾಯಿತಿ ಅಧಿಕಾರಿಗಳು ಮೂರ್ನಾಲ್ಕು ವರ್ಷಗಳಿಂದ ಸರ್ಕಾರದಿಂದ ಬರುವ ಹಣವನ್ನು ಕಳಪೆ ಕಾಮಗಾರಿ, ಕಾಮಗಾರಿಗಳು ನಡೆಯದೆ ಬಿಲ್ ಮಾಡಿಕೊಂಡಿದ್ದು, ನಕಲಿ ರಸೀದಿಗಳನ್ನು ಸೃಷ್ಟಿಸಿಕೊಂಡು ಕೋಟ್ಯಾಂತರ ರೂಪಾಯಿ ಹವ್ಯವಹಾರ ಮಾಡಿರುವ ಬಗ್ಗೆ ಸಾರ್ವಜನಿಕರು ಆಕ್ರೋಶಗೊಂಡು ಸ್ವಯಂ ಪ್ರೇರಿತರಾಗಿ ಚೇಳೂರು ಗ್ರಾಮದ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಶ್ರೀ ಶಿವಕುಮಾರ ಸ್ವಾಮಿ ಸರ್ಕಲ್ ನಲ್ಲಿ ಪ್ರತಿಭಟನೆ ಮಾಡಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಜಯಕರ್ನಾಟಕ ಸಂಘಟನೆಯ ಅಧ್ಯಕ್ಷ ಕಾರ್ತಿಕೇಯನ್ ನಮ್ಮ ಗ್ರಾಮ ಪಂಚಾಯತಿಯಲ್ಲಿ ಮೂರು ನಾಲ್ಕು ವರ್ಷಗಳಿಂದ ಸಾಕಷ್ಟು ಅಕ್ರಮ ಕಾಮಗಾರಿಗಳು ನಡೆದಿರುವುದು ಮೇಲುನೋಟಕ್ಕೆ ಕಂಡು ಬಂದಿರುತ್ತದೆ. ಈ ಸಂಬಂಧ ಮೇಲಾಧಿಕಾರಿಗಳು ಸೂಕ್ತ ತನಿಖೆ ಕೈಗೊಂಡು ತಪ್ಪಿತಸ್ಥರನ್ನು ಜೈಲಿಗೆ ಕಳಿಸಬೇಕೆಂದು ಆಗ್ರಹಿಸಿದರು.
ಸಂದರ್ಭದಲ್ಲಿ ಮಾತನಾಡಿದ ವಕೀಲ ಪ್ರವೀಣ ಗೌಡ ಗ್ರಾಮ ಪಂಚಾಯತಿಯ ಅಧಿಕಾರಿಗಳೇ ಇ- ಗ್ರಾಮ ಸ್ವರಾಜ್ ದಾಖಲಿಸಿರುವ ಹಣಕಾಸು ವೆಚ್ಚಗಳನ್ನು ಹಾಗೂ ಕಾಮಗಾರಿಗಳು ನಡೆಯದೆ ನಕಲಿ ಬಿಲ್ ಸೃಷ್ಟಿಸಿಕೊಂಡ ಬಗ್ಗೆ ಎಳೆಹಳೆಯಾಗಿ ಬಿಚ್ಚಿಡುತ್ತಾ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಇ-ಸ್ವತ್ತು ಪಡೆಯಲು ಸಾವಿರಾರು ರೂಪಾಯಿಗಳನ್ನು ಕೊಡುವ ತನಕ ತಮ್ಮ ಕೆಲಸಗಳನ್ನು ಮಾಡಿಕೊಟ್ಟಿಲ್ಲ ಎಂದು ಸಿದ್ದಲಿಂಗಯ್ಯ ಆರೋಪ ಮಾಡಿದರು. ಅಲ್ಲದೆ ತಮಟೆ ನರಸಮ್ಮ ಗ್ರಾಮ ಪಂಚಾಯಿತಿಯ ಸದಸ್ಯರಾದ ಪದ್ಮ, ವಿಜಯ್ ಲಕ್ಷ್ಮಿ, ಜಯಮ್ಮ, ರಾಜಣ್ಣ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯೆ ಶಾರದಮ್ಮ ಪಾಲ್ಗೊಂಡು ಗ್ರಾಮ ಪಂಚಾಯತಿಯ ಅಕ್ರಮಗಳನ್ನು ಸಾರ್ವಜನಿಕರಿಗೆ ತಿಳಿಸಿದರು.
ಡಿವೈಎಸ್ಪಿ ನವೀನ್ ಕುಮಾರ್, ಸರ್ಕಲ್ ಇನ್ಸ್ಪೆಕ್ಟರ್ ನದಾಫ್, ಸಬ್ ಇನ್ಸ್ಪೆಕ್ಟರ್ ನವೀನ್, ತಾಲೂಕು ಪಂಚಾಯಿತಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ತನಿಖೆ ಮಾಡುವುದಾಗಿ ಭರವಸೆ ನೀಡಿದರು.
. ಮುಂದಿನ ದಿನಗಳಲ್ಲಿ ಮೇಲಾಧಿಕಾರಿಗಳು ಸೂಕ್ತ ತನಿಖೆ ಕೈಗೊಂಡು ತಪ್ಪಿತಸ್ಥರನ್ನು ಶಿಕ್ಷೆ ಕೊಡದೆ ಹೋದಲ್ಲಿ ಮತ್ತೊಮ್ಮೆ ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ನಿವೃತ್ತ ಶಿಕ್ಷಕರಾದ ಮಹಾಲಿಂಗಯ್ಯ, ಅನಿಲ್, ಈಶ್ವರ್, ರಂಗಸ್ವಾಮಿ, ಮಾರುತಿ, ಸುಮಿತ್ ಶೆಟ್ಟಿ, ಶರತ್, ಮಣಿ, ಮೋಹನ್, ಮೋಹನ್ ಜಿ, ಪುನೀತ್, ಶಶಿಕುಮಾರ್, ನಾಗರಾಜು, ಉದಯ್, ಸಂದೀಪ್ ತೇಜಾ, ಪೃತ್ವಿ, ಸುನಿಲ್, ಗಿರಿರಾಜು, ಸುಮನ್, ಗಂಗಾಧರ್, ನವೀನ್, ಬಸವರಾಜು, ಉಮೇಶ್, ಸಮೀರ್, ಬಕ್ಷಿ, ಎಚ್ಚರಿಸಿದ್ದಾರೆ
15 ದಿನಗಳಲ್ಲಿ ಅಧಿಕಾರಿಗಳ ತಂಡವನ್ನು ರಚಿಸಿ ಸೂಕ್ತ ತನಿಖೆ ಕೈಗೊಂಡು ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಲಾಗುವುದು
ಶಿವಪ್ರಕಾಶ್.
ಕಾರ್ಯನಿರ್ವಾಹಕ ಅಧಿಕಾರಿಗಳು ಗುಬ್ಬಿ.