ಕೊರಟಗೆರೆ: ಕಾರ್ತಿಕ ಮಾಸದ ಅಂಗವಾಗಿ ವಿಶೇಷ ಪೂಜೆ ಹಾಗೂ ಲಕ್ಷದೀಪೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದ ಪತ್ರಕರ್ತರನ್ನು ಸಿದ್ಧರಬೆಟ್ಟದ ಬಾಳೆ ಹೊನ್ನೂರು ಖಾಸಾ ಶಾಖಾ ಮಠದಿಂದ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಾಲ್ಲೂಕು ಘಟಕದಿಂದ ಅಭಿನಂದನೆ ಕಾರ್ಯಕ್ರಮವನ್ನು ಶ್ರೀ ಮಠದಲ್ಲಿ ಆಯೋಜನೆ ಮಾಡಲಾಗಿತ್ತು.
ಈ ವೇಳೆ ಶ್ರೀ ಕ್ಷೇತ್ರ ಸಿದ್ದರಬೆಟ್ಟದ ಪರಮಪೂಜ್ಯರಾದ ಶ್ರೀ ವೀರಭಧ್ರಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ನಮ್ಮ ಕೊರಟಗೆರೆಯ ಕಾರ್ಯನಿರತ ಪತ್ರಕರ್ತರು ತಮ್ಮ ವೃತ್ತಿಯ ಜೊತೆಗೆ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದು ನಿಜಕ್ಕೂ ಸಂತೋಷದ ವಿಷಯ. ಕೋವಿಡ್ ಸಂದರ್ಭದಲ್ಲಿ ತಮ್ಮ ಮಾಧ್ಯಮ ವೃತ್ತಿಯ ಕರ್ತವ್ಯದ ಸಮಯದಲ್ಲಿ ರಾಜ್ಯ ಸೇರಿದಂತೆ ಜಿಲ್ಲೆಗಳಲ್ಲಿ ಅದೆಷ್ಟೋ ಪತ್ರಕರ್ತರಿಗೆ ಸೋಂಕು ತಗುಲಿ ನಿಧನರಾಗಿದ್ದಾರೆ. ಸರ್ಕಾರ ಮುಖ್ಯವಾಗಿ ಪತ್ರಕರ್ತರು ಮತ್ತು ಅವರ ಕುಟುಂಬದ ಆರೋಗ್ಯವನ್ನು ಕಾಪಾಡಲು ವಿಶೇಷ ಯೋಜನೆ ಜಾರಿ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಆದ್ದರಿಂದ ಇಂದು ನಮ್ಮ ಮಠದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದ ಪತ್ರಕರ್ತರನ್ನು ಕಾರ್ತೀಕ ಮಾಸದ ಲಕ್ಷದೀಪೋತ್ಸವ ಮತ್ತು ವಿಶೇಷ ಪೂಜೆಯ ದಿನದಂದು ಅಭಿನಂಧಿಸಲಾಗುತ್ತಿದೆ ಎಂದು ಹೇಳಿದರು.
ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ವಿ ಪುರುಷೋತ್ತಮ್ ಮಾತನಾಡಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಜಿಲ್ಲಾ ಹಾಗೂ ತಾಲ್ಲೂಕು ಆಡಳಿತದಿಂದ ಆಯ್ಕೆಯಾದ ಪತ್ರಕರ್ತರಿಗೆ ಸಿದ್ದರಬೆಟ್ಟ ಶ್ರೀಗಳ ಮಠದಿಂದ ಹಾಗೂ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದೊಂದಿಗೆ ರಾಜ್ಯೋತ್ಸವ ಪ್ರಶಸ್ತಿ ಸಾಧಕರಿಗೆ ಅಭಿನಂದಿಸಲಾಗುತ್ತಿದೆ ಎಂದು ಹೇಳಿದರು.
2021-22 ನೇ ಸಾಲಿನ ತಾಲ್ಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಪತ್ರಕರ್ತ ನರಸಿಂಹಮೂರ್ತಿ, ವಿಜಯ್ ಶಂಕರ್, 2022- 23 ನೇ ಸಾಲಿನ ಜಿಲ್ಲಾ ಪ್ರಶಸ್ತಿಗೆ ಟಿ.ಎಸ್ ಕೃಷ್ಣಮೂರ್ತಿ, ವಡ್ಡಗೆರೆ ಉಮಾಶಂಕರ್ ಹಾಗೂ ತಾಲ್ಲೂಕು ಮಟ್ಟದ ಪ್ರಶಸ್ತಿಗೆ ಆಯ್ಕೆಯಾದ ತೋವಿನಕೆರೆ ನಾಗೇಂದ್ರ, ಮತ್ತು ಸಿದ್ದರಾಜು ಇವರನ್ನು ಸಿದ್ಧರಬೆಟ್ಟದ ಮಠದಿಂದ ಮತ್ತು ತಾಲ್ಲೂಕು ಪತ್ರಕರ್ತರ ಸಂಘದಿಂದ ಗೌರವಿಸಲಾಯಿತು,
ಈ ಸಂದರ್ಭದಲ್ಲಿ ಪಪಂ ಸದಸ್ಯರಾದ ಕೆ.ಆರ್ ಓಬಳರಾಜು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಕಾರ್ಯದರ್ಶಿ ರಂಗಧಾಮಯ್ಯ, ನಿರ್ದೇಶಕರುಗಳಾದ ಟಿ.ಎಸ್. ಕೃಷ್ಣಮೂರ್ತಿ, ಎನ್.ಮೂರ್ತಿ, ಜೆಟ್ಟಿ ಅಗ್ರಹಾರ ನಾಗರಾಜು, ತಾಲ್ಲೂಕು ಘಟಕದ ಉಪಾಧ್ಯಕ್ಷ ಹೆಚ್.ಎನ್.ನಾಗರಾಜು, ಪ್ರಧಾನ ಕಾರ್ಯದರ್ಶಿ ಚಿದಂಬರ್, ಮಾಜಿ ಗೌರವಾಧ್ಯಕ್ಷ ಪದ್ಮನಾಭ್, ಮಾಜಿ ಅಧ್ಯಕ್ಷ ಶ್ರೀನಿವಾಸ್, ಶಿವಾನಂದ್, ಜಿಎಲ್ ಸುರೇಶ್, ಲೋಕೇಶ್, ಪದ್ಮರಾಜು, ನಾಗೇಂದ್ರ, ನವೀನ್ ಕುಮಾರ್, ದೇವರಾಜು, ಹರೀಶ್ ಬಾಬು, ನರಸಿಂಹಮೂರ್ತಿ, ಲಕ್ಷ್ಮೀಕಾಂತ, ವಿಜಯ್ ಶಂಕರ್, ಸಿದ್ದರಾಜು, ಸತೀಶ್, ಸೇರಿದಂತೆ ಮಠದ ವಿದ್ಯಾರ್ಥಿಗಳು ಹಾಜರಿದ್ದರು.