ಸಂಚಾರ ನಿಯಮ ಜಾಗೃತಿ ಮೂಡಿಸಲು ರಸ್ತೆಗಿಳಿದ ನ್ಯಾಯಾಧೀಶರು : ದಂಡ ವಿಧಿಸಿ ಅರಿವು ಮೂಡಿಸಿದ್ದು ಸಾರ್ವಜನಿಕ ಪ್ರಶಂಸೆಗೆ ಪಾತ್ರ

ಗುಬ್ಬಿ: ಅಪ್ರಾಪ್ತ ವಯಸ್ಸಿನ ಮಕ್ಕಳು ಬೈಕ್ ಸವಾರಿ ಮಾಡಿದ್ದು ಹಾಗೂ ತ್ರಿಬಲ್ ರೈಡಿಂಗ್ ಕಂಡು ಜಾಗೃತಿಗೆ ಖುದ್ದು ನ್ಯಾಯಾಧೀಶರು ರಸ್ತೆಗಿಳಿದು ಸಂಚಾರ ನಿಯಮ ತಿಳಿ ಹೇಳಿ ತಪ್ಪಿತಸ್ಥರಿಗೆ ದಂಡ ವಿಧಿಸಿದ ಘಟನೆ ಪಟ್ಟಣದ ಬಸ್ ನಿಲ್ದಾಣದಲ್ಲಿ ಬುಧವಾರ ಬೆಳಿಗ್ಗೆ ನಡೆಯಿತು.

ಗುಬ್ಬಿ ಜೆಎಂಎಫ್ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಂಜುಳಾ ಉಂಡಿ ಶಿವಪ್ಪ ಅವರು ಹಲವು ರಸ್ತೆ ನಿಯಮ ಮೀರಿದ ಪ್ರಕರಣ ಕಂಡು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿ ಸಂಚಾರ ನಿಯಮ ಮೀರಿದವರ ವಿರುದ್ಧ ಕ್ರಮಕ್ಕೆ ತಿಳಿಸಿದ್ದರು. ಒಂದು ಕೇಸ್ ಪ್ರಕರಣ ಮಾಡುವಲ್ಲಿ ಒತ್ತಡ ಎದುರಿಸುವ ಬಗ್ಗೆ ತಿಳಿದು ಖುದ್ದು ರಸ್ತೆಗೆ ಇಳಿದು ನಿಯಮ ಮಿರಿದವರ ವಿರುದ್ದ ದಂಡ ವಿಧಿಸುವ ಕೆಲಸ ಮಾಡಿದರು.

ಬಸ್ ನಿಲ್ದಾಣ ಬಳಿ ನಿಂತು ಅಪ್ರಾಪ್ತ ವಯಸ್ಸಿನ ಮಕ್ಕಳು ಬೈಕ್ ನಲ್ಲಿ ಸಂಚರಿಸುವುದು ಅಪರಾಧ. ಪೋಷಕರಲ್ಲಿ ಈ ಬಗ್ಗೆ ಮೊದಲು ಅರಿವು ಮೂಡಿಸಬೇಕಿದೆ. ಮನಬಂದಂತೆ ಬೈಕ್ ಚಲಾಯಿಸುತ್ತಾರೆ. ಜೀವಕ್ಕೆ ಕುತ್ತು ತಂದುಕೊಂಡು ನಂತರ ಪರಿಹಾರಕ್ಕೆ ಅಲೆಯುತ್ತಾರೆ. ಪರವಾನಗಿ ಇಲ್ಲದೆ, ಮದ್ಯಪಾನ ಮಾಡಿ ಚಾಲನೆ, ತ್ರಿಬಲ್ ರೈಡಿಂಗ್, ಹೆಲ್ಮೆಟ್ ರಹಿತ ಸಂಚಾರ ಹೀಗೆ ಅನೇಕ ತಪ್ಪುಗಳು ಮಾಡಿ ವಿಮೆ ಹಣ ಬಾರದೆ ಕಂಗಾಲಾಗುತ್ತಾರೆ. ಈ ಬಗ್ಗೆ ತಿಳುವಳಿಕೆ ಮಾಡಬೇಕಿದೆ. ಪೊಲೀಸ್ ಇಲಾಖೆಗೆ ಸೂಚನೆ ನೀಡಿ ದಂಡ ವಿಧಿಸಿ ಕೇಸ್ ದಾಖಲಿಸಲು ತಿಳಿಸಿದ್ದೆ. ಆದರೆ ಪೊಲೀಸ್ ಇಲಾಖೆಗೆ ಒತ್ತಡ ತರುವ ಬಗ್ಗೆ ತಿಳಿಯಿತು. ಒಂದು ಲಘು ಪ್ರಕರಣ ದಾಖಲಿಸುವಲ್ಲಿ ಆಲೋಚನೆ ಮಾಡುವ ಸ್ಥಿತಿ ಕಂಡು ನಾನೇ ಖುದ್ದು ರಸ್ತೆಗಿಳಿದು ಜಾಗೃತಿ ಹಾಗೂ ದಂಡ ವಿಧಿಸುವ ಕೆಲಸ ಮಾದಿರುವುದಾಗಿ ನ್ಯಾಯಾಧೀಶರು ತಿಳಿಸಿದರು.

ವಕೀಲರಾದ ನಾಗರಾಜು, ಚಂದ್ರಮೌಳಿ, ಸಿಪಿಐ ನದಾಫ್ ಇತರರು ಇದ್ದರು.
ವರದಿ.ಜಿ.ಆರ್.ರಮೇಶ ಗೌಡ, ಗುಬ್ಬಿ.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!