ಎಂ ಎನ್ ಕೋಟೆ : ಜನವರಿ ತಿಂಗಳು ಕಳೆದು ಶಾಸಕ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿ ನನ್ನ ಮುಂದಿನ ನಿರ್ದಾರವನ್ನು ತೆಗೆದುಕೊಳುತ್ತೇನೆ ಎಂದು ಶಾಸಕ ಎಸ್ ಆರ್ ಶ್ರೀನಿವಾಸ್ ತಿಳಿಸಿದರು.
ಗುಬ್ಬಿ ತಾಲ್ಲೂಕಿನ ತಿಮ್ಮಪ್ಪನಹಟ್ಟಿ , ಕಡೆಗೌಡನಹಟ್ಟಿ ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶಾಲಾ ಕೊಠಡಿ ಕಾಮಾಗಾರಿಗೆ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದ ಅವರು ಕಾಂಗ್ರೆಸ್ ಸೇರುವುದು ಬಿಡುವುದು ನನ್ನ ಕಾರ್ಯಕರ್ತರ ನಿರ್ಧಾರ ಜನವರಿ ತಿಂಗಳು ಕಳೆದು ಮುಂದಿನ ನಿರ್ಧಾರ ಕೈಗೊಳುತ್ತೇನೆ ನಾನೇನು ಯಾವುದೇ ಅರ್ಜಿ ಹಾಕಿಲ್ಲ ಕಾಂಗ್ರೆಸ್ ಪಕ್ಷದ ನಿರ್ಣಯ ಇರಬೇಕು ಅದಕ್ಕೆ ಅಭ್ಯರ್ಥಿಗಳು ಅರ್ಜಿ ಹಾಕಿದಾರೆ ಎಂದ ಅವರು ಎಂ ಎನ್ ಕೋಟೆ ಅಳಿಲಘಟ್ಟ ರಸ್ತೆ ಕಾಮಾಗಾರಿ ಸ್ವಲ್ವ ವಿಳಂಬವಾಗಿತ್ತು.ಅಧಿಕಾರಿಗಳ ಜೂತೆ ಮಾತನಾಢಿದೇನೆ ಎಂ ಎನ್ ಕೋಟೆಯಲ್ಲಿ ಎರಡು ಕಡೆ ಬಾಕ್ಸ್ ಚರಂಡಿಗಳು ಮಾಡಬೇಕು ಎಂದು ಕಾಮಾಗಾರಿ ವಿಳಂಬ ಮಾಡಿದ್ದರು. ಪೈಪ್ ಲೈನ್ ಹಾಗೂ ಬಾಕ್ಸ್ ಚರಂಡಿಗೆ 25 ಲಕ್ಷ ಹಾಕಿದೇನೆ ಈ ವಾರದ ಒಳಗಡೆ ಕಾಮಾಗಾರಿ ಆರಂಭ ಮಾಡಿ ಬೇಗನೆ ರಸ್ತೆಯನ್ನು ಮುಗಿಸಿಕೊಡಬೇಕೆಂದು ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದು ತಿಳಿಸಿದರು.
ಚೇಳೂರು ಗ್ರಾಮ ಪಂಚಾಯಿತಿಯಲ್ಲಿ ಭ್ರಷ್ಠಚಾರ ನಡೆದಿರುವ ಪ್ರಶ್ನೇ ಕೇಳಿದ ಸುದ್ದಿಗಾರರಿಗೆ ಉತ್ತರಿಸಿದ ಶಾಸಕ ಎಸ್ ಆರ್ ಶ್ರೀನಿವಾಸ್ ಯಾವ ಪರ ವಿರೋಧವು ಇಲ್ಲ ತಪ್ಪೇ ಮಾಡಿದ್ರೆ ಅಧಿಕಾರಿಗಳು ಜೈಲು ಹೋಗುವುದು ಖಚಿತ ಗ್ರಾಮ ಪಂಚಾಯಿತಿಗೆ ಸಂಬಂಧಿಸಿದಂತೆ ಈಗಾಗಲೇ ತನಿಖೆ ಮಾಡುವುದಕ್ಕೆ ಅಧಿಕಾರಿಗಳ ತಂಡ ರಚನೆ ಮಾಡಿದೆ ತಪ್ಪು ಮಾಡಿದ್ರೆ ಕಾನೂನು ಕ್ರಮಕೈಗೊಳುತ್ತೇವೆ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಯೋಗೀಶ್ , ಬಿದರೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಯತೀಶ್ , ಬಿಓ ಸೋಮಶೇಖರ್ , ಗ್ರಾಮ ಪಂಚಾಯಿತಿ ಸದಸ್ಯರಾದ ಸಿದ್ದಗಂಗಯ್ಯ , ಯಶೋಧ ಲೋಕೇಶ್ , ಸಿದ್ದಗಂಗಮ್ಮ ಕಲ್ಲೇಶ್ , ಶಿವಪ್ಪ , ಭವ್ಯ ನಟರಾಜು ಮುಖ್ಯ ಶಿಕ್ಷಕ ಸುರೇಶ್ , ಎಇಇ ಇಂಜಿನಿಯರ್ ನಟರಾಜು , ಮುಖಂಡರಾದ ಶಿವರುದ್ರಪ್ಪ , ಮಂಜುನಾಥ್ , ಕಡೇಗೌಡನಹಟ್ಟಿ ಸಿದ್ದಲಿಂಗಪ್ಪ , ಲೋಕೇಶ್ ,ಗೀರೀಶ್ , ಗುತ್ತಿಗೆದಾರ ಹೊಸಹಳ್ಳಿ ಸಿದ್ದರಾಮಯ್ಯ , ಸಿದ್ದರಾಜು , ಕಿರಣ್ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.