ಕಾಂಗ್ರೆಸ್ ಟಿಕೆಟ್ ಗಾಗಿ ಕೆಸಿಆರ್ ಅರ್ಜಿ ,; ಎಲ್ಲರ ಬಂಡವಾಳ ಬಯಲು ಮಾಡ್ತೇನೆ ; KCR.
ಮಧುಗಿರಿ ; ಮಧುಗಿರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಇಲ್ಲಿಯವರೆಗೂ KNR ಹೊರತುಪಡಿಸಿ ಯಾರೂ ಮುಂದೆ ಬಂದಿರಲಿಲ್ಲ. ಆದರೆ ಅವರ ಒಂದು ಕಾಲದ ಶಿಷ್ಯ ಮಾಜಿ ತುಮುಲ್ ಅಧ್ಯಕ್ಷ ಹಾಲಿ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್ ಈ ಬಾರಿ ಅವರಿಗೆ ವಿರುದ್ದವಾಗಿ ಟಿಕೆಟ್ ಪಡೆಯಲು ಅರ್ಜಿ ಸಲ್ಲಿಸಿದ್ದು ತಾಲೂಕು ಕಾಂಗ್ರೆಸ್ ಇಬ್ಬಾಗವಾಗಿದೆ ಎಂಬುದು ಸ್ಪಷ್ಟವಾಗಿದೆ.
ಈ ಬಗ್ಗೆ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಕೆಸಿಆರ್ ಮಧುಗಿರಿ ಸಾಮನ್ಯ ಕ್ಷೇತ್ರ. ಇಲ್ಲಿ ಸ್ಥಳೀಯರು ಆಯ್ಕೆಯಾಗಲು ಜನರು ಒಲವು ವ್ಯಕ್ತ ಪಡಿಸಿದ್ದಾರೆ. ನಾನು ಕಾಂಗ್ರೆಸ್ ಕಾರ್ಯಕತ್ರ. ತುಮುಲ್ ಅಧ್ಯಕ್ಷನಾಗಿ 5 ವರ್ಷ ಸೇವೆ ಸಲ್ಲಿಸಿದ್ದು, ರೈತ ಕಲ್ಯಾಣ ಟ್ರಸ್ಟ್ ಸ್ಥಾಪಿಸಿ ರೈತರ ನೆರವಿಗೆ ಬಂದಿದ್ದು, ನಷ್ಟದಲ್ಲಿದ್ದ ಒಕ್ಕೂಟವನ್ನು ಲಾಭದೆಡೆಗೆ ಕೊಂಡೊಯ್ದು 100 ಕೋಟಿ ಠೇವಣಿ ಇಟ್ಟಿದ್ದೇನೆ. ತಾಲೂಕಿನ ರೈತರು ಈ ಬಗ್ಗೆ ಒಳ್ಳೆಯ ಭಾವನೆ ಹೊಂದಿದ್ದು ಚುನಾವಣೆಯಲ್ಲಿ ಸ್ಪರ್ಧಿಸಲು ಹಸಿರು ನಿಶಾನೆ ನೀಡಿದ್ದಾರೆ. ಅದಕ್ಕಾಗಿ ಟಿಕೆಟ್ ಬೇಕೆಂದು ಅರ್ಜಿ ಸಲ್ಲಿಸಿದ್ದೇನೆ. ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರ ಬೆಂಬಲವಿದ್ದರೂ ಆ ಪಕ್ಷದ ಬಳಿ ಹೋಗಲ್ಲ. ಒಂದು ವೇಳೆ ಟಿಕೆಟ್ ಸಿಗಲಿಲ್ಲವೆಂದರೆ ತಟಸ್ಥವಾಗಿರುತ್ತೇನೆ ಹೊರತು ಬಂಡಾಯ ಅಭ್ಯರ್ಥಿ ಆಗಲ್ಲ ಎಂದು ಸ್ಪಷ್ಟಪಡಿಸಿದರು.
ಇಲ್ಲಿಯವರೆಗೂ ಸ್ಪರ್ಧಿಸಿದವರ ಬಳಿ ಅಪಾರ ಹಣವಿದೆ. ನನ್ನ ಬಳಿ ಹಣವಿಲ್ಲ ಜನರ ಪ್ರೀತಿಯಿದ್ದು ಸಮರ್ಥವಾಗಿ ಚುನಾವಣೆ ಎದುರಿಸುತ್ತೇನೆ. ಕೆಲವರ ಬಳಿಯಿರುವ ಕಪ್ಪು ಹಣವು ಹೇಗೆ ಬಂತು ಎಂಬುದು ನನಗೆ ತಿಳಿದಿದ್ದು ಮುಂದೆ ಬಹಿರಂಗ ಮಾಡುತ್ತೇನೆ.
ಮಾಜಿ ಶಾಸಕ ಕೆ.ಎನ್.ರಾಜಣ್ಣ 4 ಬಾರಿ ಟಿಕೆಟ್ ಪಡೆದು ಒಮ್ಮೆ ಮಾತ್ರ ಗೆದ್ದಿದ್ದಾರೆ. ಈ ಬಾರಿ ಸ್ಥಳೀಯತೆಗೆ ಜನ ಬೆಂಬಲ ವ್ಯಕ್ತವಾಗಿದೆ. ನಾನು ಟಿಕೆಟ್ ಬಿಟ್ಟುಕೊಡುವಂತೆ ಕೆಎನ್ಆರ್ ಬಳಿ ಯಾವುದೇ ಚರ್ಚೆ ಮಾಡಿಲ್ಲ ಎಂದ ಕೆಸಿಆರ್ ನನ್ನ ಸೇವೆ ಹಾಗೂ ಸಮುದಾಯ ನೋಡಿ ಕಾಂಗ್ರೆಸ್ ವರಿಷ್ಟರು ಟಿಕೆಟ್ ನೀಡುವ ವಿಶ್ವಾಸವಿದೆ ಎಂದರು.