ಪಾವಗಡ ತಾಲೂಕಿನ ಕೆ ಟಿ ಹಳ್ಳಿ ಗ್ರಾಮ ಪಂಚಾಯಿತಿಯ ಹಿಂದೆ ಅಧ್ಯಕ್ಷರಾಗಿದ್ದ ಓಬಮ್ಮ ಹಾಗೂ ಉಪಾಧ್ಯಕ್ಷರಾಗಿದ್ದ ಸಂಜೀವ ರೆಡ್ಡಿ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಗಳಿಗೆ ಚುನಾವಣೆ ನಡೆಯಿತು ಚುನಾವಣೆ ಅಧಿಕಾರಿಯಾಗಿ ತಾಲೂಕು ದಂಡಾಧಿಕಾರಿಗಳಾದ ವರದರಾಜ ರವರು ಚುನಾವಣಾ ಅಧಿಕಾರಿಯಾಗಿ ಚುನಾವಣೆಯನ್ನು ನಡೆಸಿದರು.
ಜೆಡಿಎಸ್ ಬೆಂಬಲಿತ ಅಧ್ಯಕ್ಷರಾಗಿ ಶ್ರೀಮತಿ ಆದಿ ಲಕ್ಷ್ಮಿ ನರಸಿಂಹ ನಾಯಕ ಉಪಾಧ್ಯಕ್ಷರಾಗಿ ಕೆ .ಎಸ್. ಚಂದ್ರಶೇಖರ ಅವಿರೋಧವಾಗಿ ಆಯ್ಕೆಯಾದರು
ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 16 ಜನ ಸದಸ್ಯರಿದ್ದು 11 ಜನ ಜೆಡಿಎಸ್ ಬೆಂಬಲಿತರಾಗಿದ್ದು 5 ಜನ ಕಾಂಗ್ರೆಸ್ ಬೆಂಬಲಿತರಾಗಿರುತ್ತಾರೆ
ಈ ಸಂದರ್ಭದಲ್ಲಿ ಅಧಿಕಾರಿಗಳಾದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಡಿ ಮಂಜುನಾಥ್ ಕಾರ್ಯದರ್ಶಿ ಪರಮೇಶ್ವರ್ ಚುನಾವಣೆ ಪ್ರಕ್ರಿಯೆಯಲ್ಲಿ ಹಾಜರಿದ್ದರು
ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಎಮ್. ತಿಮ್ಮರಾಯಪ್ಪ ಅಧ್ಯಕ್ಷೆ. ಉಪಾಧ್ಯಕ್ಷರಿಗೆ ಶುಭ ಹಾರೈಸಿದರು
ಇದೇ ವೇಳೆ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ನರಸಿಂಹಮೂರ್ತಿ ಶ್ರೀನಿವಾಸ್ ನಾಯಕ ಮಹೇಶ್ ಸಂಜೀವ ರೆಡ್ಡಿ ಮಂಜುನಾಥ್ ಗೌಡ ಲಲಿತಮ್ಮ ಈರಣ್ಣ ಚಿಕ್ಕೇಗೌಡ ಮುಖಂಡರುಗಳಾದ ಪಾಳೇಗಾರ್ ಲೋಕೇಶ್ ಕರೇಗೌಡ ಹೊನ್ನೂರಪ್ಪ ಟಿ. ಪಿ. ಚಂದ್ರಣ್ಣ ಅಜಯ್ ಕುಮಾರ್ ಗಾಡಿಬಾವಿ ಸಿದ್ದೇಶ್ ಚಂದ್ರಣ್ಣ ನಾಗರಾಜು ನಾಗೇಶ್ ಭಾಸ್ಕರ್ ನಾಯಕ ಕರಿಯಮ್ಮನಪಾಳ್ಯ ಗೋಪಾಲ್ ಅಂಜನ್ ನಾಯಕ ತಿಪ್ಪೇಸ್ವಾಮಿ ಕೆ ಪಿ ಲಿಂಗಣ್ಣ ಜೀವಿಕ ಹನುಮಂತ್ರಾಯ ಮುಂತಾದವರು ಹಾಜರಿದ್ದರು