ವಶಕ್ಕೆ ಪಡೆದಿದ್ದ ಅಕ್ರಮ ಮದ್ಯ ನಾಶ ಪಡಿಸಿದ ಗುಬ್ಬಿ ಅಬಕಾರಿ ಇಲಾಖೆ

ಗುಬ್ಬಿ: ತಾಲ್ಲೂಕಿನಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಮದ್ಯವನ್ನು ವಶಕ್ಕೆ ಪಡೆದಿದ್ದ ಅಬಕಾರಿ ಇಲಾಖೆ 16 ಪ್ರಕರಣದಲ್ಲಿ ಒಟ್ಟು 99.360 ಲೀಟರ್ ಮದ್ಯ ಹಾಗೂ 15 ಲೀಟರ್ ಬಿಯರ್ ನಾಶ ಪಡಿಸಲಾಯಿತು.

ಅಬಕಾರಿ ಇಲಾಖೆ ಗುಬ್ಬಿ ವಲಯದಲ್ಲಿ ಅಕ್ರಮ ಮದ್ಯ ಮಾರಾಟ ಹಾಗೂ ಸಾಗಾಣಿಕೆ ಸಂಬಂಧ ದಾಖಲಿಸಿದ 16 ಪ್ರಕರಣಗಳಲ್ಲಿ ಜಪ್ತಿ ಮಾಡಿ ಮುಟ್ಟುಗೋಲು ಹಾಕಿಕೊಂಡ 99.360 ಲೀಟರ್ ಮದ್ಯ ಮತ್ತು 15 ಲೀಟರ್ ಬಿಯರ್ ಇವುಗಳನ್ನು ನಾಶ ಪಡಿಸಲು ಜಿಲ್ಲೆಯ ಅಬಕಾರಿ ಉಪ ಆಯುಕ್ತರ ಆದೇಶದ ಮೇರೆಗೆ ತಹಶೀಲ್ದಾರ್ ಬಿ.ಆರತಿ ಅವರ ಸಮಕ್ಷಮದಲ್ಲಿ ಮದ್ಯವನ್ನು ನಾಶ ಪಡಿಸಲಾಯಿತು.

ಈ ಸಂದರ್ಭದಲ್ಲಿ ತುಮಕೂರು ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕ ಕೆ.ಸಿ.ಸಿದ್ದಲಿಂಗಸ್ವಾಮಿ, ಗುಬ್ಬಿ ವಲಯ ಅಬಕಾರಿ ನಿರೀಕ್ಷಕರಾದ ಎಸ್.ವನಜಾಕ್ಷಿ, ಕೆ.ಎಸ್.ಬಿ.ಸಿ.ಎಲ್ ಡಿಪೋ ನಾರಾಯಣ್ ಹಾಗೂ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.
ವರದಿ: ಜಿ.ಆರ್.ರಮೇಶ ಗೌಡ, ಗುಬ್ಬಿ.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!