ತುಮಕೂರು: ಸಾರ್ವಜನಿಕರ ಆರೋಗ್ಯ, ಸುರಕ್ಷೆ ಆದ್ಯತೆ ನೀಡುವ ನಿಟ್ಟಿನಲ್ಲಿ ಜಿಲ್ಲಾ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ದೃಷ್ಠಿಯಿಂದ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಎನ್‌ಹೆಚ್‌ಎಂ ಫಂಡ್‌ನಿಂದ ತುಮಕೂರಿಗೆ 76 ಕೋಟಿ ರೂ.ಗಳ ಆಡಳಿತಾತ್ಮಕ ಅನುಮೋದನೆ ನೀಡಿರುವುದನ್ನು ಬಿಜೆಪಿ ತುಮಕೂರು ಜಿಲ್ಲಾ ಘಟಕ ವಕ್ತಾರ ಕೆ.ಪಿ.ಮಹೇಶ ಅಭಿನಂದಿಸಿದ್ದಾರೆ. ರಾಜ್ಯ ಸಚಿವ ಸಂಪುಟದ ಸಭೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರ ನೇತೃತ್ವದಲ್ಲಿ ಗುರುವಾರ ನಡೆದ ಸಂಧರ್ಭದಲ್ಲಿ, ತುಮಕೂರಿನಲ್ಲಿ 55 ಕೋಟಿ ರೂ. ವೆಚ್ಚದಲ್ಲಿ 100ಹಾಸಿಗೆ ಸಾಮರ್ಥ್ಯವುಳ್ಳ ತೀವ್ರ ನಿಗಾ ಘಟಕ (ಕ್ರಿಟಿಕಲ್ ಕೇರ್ ಆಸ್ಪತ್ರೆ) ಹಾಗೂ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಸರ್ಕಾರಿ ನರ್ಸಿಂಗ್ ಕಾಲೇಜ್ ಮತ್ತು ಹಾಸ್ಟೆಲ್ ನಿರ್ಮಾಣಕ್ಕೆ 120 ಕೋಟಿ ರೂ.ಗಳ ಆಡಳಿತಾತ್ಮಕ ಅನುಮೋದನೆ ನೀಡಿರುವುದನ್ನು ಕೆ.ಪಿ.ಮಹೇಶ ಸ್ವಾಗತಿಸಿದ್ದಾರೆ.
ಟಿ ಎಸ್ ಕೃಷ್ಣಮೂರ್ತಿ
ಸಂಪಾದಕ ತುಮಕೂರು 9743340694
You May Also Like
ತುಮಕೂರು ಹಾಲು ಒಕ್ಕೂಟದಿಂದ ಹೈದ್ರಬಾದ್, ಜಮ್ಮು ಕಾಶ್ಮಿರಕ್ಕೆ ಹಾಲು ಸರಬರಾಜು
ಪ್ರಜಾಮನ ನ್ಯೂಸ್ ಡೆಸ್ಕ್.
Comments Off on ತುಮಕೂರು ಹಾಲು ಒಕ್ಕೂಟದಿಂದ ಹೈದ್ರಬಾದ್, ಜಮ್ಮು ಕಾಶ್ಮಿರಕ್ಕೆ ಹಾಲು ಸರಬರಾಜು