ಧರ್ಮಸ್ಥಳದಂತೆ ಗೊರವನಹಳ್ಳಿ ಮಹಾಲಕ್ಷ್ಮಿ ಕ್ಷೇತ್ರವು ಪ್ರಜ್ವಲಿಸಲಿ… ಲಕ್ಷದಿಪೋತ್ಸಕ್ಕೆ ಭಕ್ತರದಂಡು


ಕೊರಟಗೆರೆ:-ಧರ್ಮಸ್ಥಳ ಕ್ಷೇತ್ರದಂತೆ ಶ್ರೀ ಮಹಾಲಕ್ಷ್ಮಿಯ ಕ್ಷೇತ್ರವು ಬೆಳಗಲಿ.. ಶ್ರೀಕ್ಷೇತ್ರದಲ್ಲಿ ಅನ್ನದಾನ, ವಿಧ್ಯಾದಾನ ಮತ್ತು ಸಂಸ್ಕೃತಿದಾನ ನಿತ್ಯ ನಡೆಯಲಿ.. ವೈದ್ಯಕೀಯ ಮತ್ತು ಶೈಕ್ಷಣಿಕ ಕ್ಷೇತ್ರಕ್ಕೆ ಮಹಾಲಕ್ಷ್ಮಿ ಟ್ರಸ್ಟ್ ವಿಶೇಷ ಆಧ್ಯತೆ ನೀಡಬೇಕಿದೆ. ಗ್ರಾಮೀಣ ಪ್ರದೇಶದ ಬಡಮಕ್ಕಳ ಶಿಕ್ಷಣಕ್ಕೆ ಆಧ್ಯತೆ ನೀಡಿದಾಗ ಶ್ರೀಕ್ಷೇತ್ರವು ತಾನಾಗಿಯೇ ಪ್ರಜ್ವಸಲಿದೆ ಎಂದು ಮಧುಗಿರಿಯ ತಗ್ಗಿಹಳ್ಳಿ ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ರಾಮನಂದಜೀ ಮಹಾರಾಜ್ ತಿಳಿಸಿದರು.
ಕೊರಟಗೆರೆ ತಾಲೂಕಿನ ಸುಪ್ರಸಿದ್ದ ಪುಣ್ಯಕ್ಷೇತ್ರವಾದ ಗೊರವನಹಳ್ಳಿ ಶ್ರೀಮಹಾಲಕ್ಷ್ಮಿ ಕ್ಷೇತ್ರಟ್ರಸ್ಟ್ನಿಂದ ಶುಕ್ರವಾರ ಏರ್ಪಡಿಸಲಾಗಿದ್ದ ೧೯ನೇ ವರ್ಷದ ಬ್ರಹ್ಮ ರಥೋತ್ಸವ, ಲಕ್ಷದಿಪೋತ್ಸವ, ಆರತಿ ಉತ್ಸವ ಮತ್ತು ಬೆಳ್ಳಿ ಪಲ್ಲಕ್ಕಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗೊರವನಹಳ್ಳಿ ಮಹಾಲಕ್ಷ್ಮಿಯ ಶ್ರೀಕ್ಷೇತ್ರವು ಈಗಾಗಲೇ ಕರ್ನಾಟಕದಲ್ಲಿಯೇ ಸುಪ್ರಸಿದ್ದಿ ಪಡೆದಿದೆ.
ಮಾತೆ ಕಮಲಮ್ಮನ ಸರಳವಾದ ಪ್ರಾರ್ಥನೆ ಮತ್ತು ಸೇವೆಯಿಂದ ಶ್ರೀಕ್ಷೇತ್ರವು ಪರ್ವತದ ಎತ್ತರಕ್ಕೆ ಬೆಳೆದುನಿಂತಿದೆ.ಮಹಾಲಕ್ಷ್ಮಿ ದೇವಿಯ ಕಾಣಿಕೆಯು ಭಕ್ತರ ಆರೋಗ್ಯ ರಕ್ಷಣೆಗೆ ಬಳಕೆಯಾಗಲಿ. ಮಹಾಲಕ್ಷ್ಮಿ ಟ್ರಸ್ಟ್ನಿಂದ ಸೇವಾ ಕಾರ್ಯಕ್ರಮದ ಜೊತೆಯಲ್ಲಿ ಶೈಕ್ಷಣಿಕ ಕ್ರಾಂತಿಯು ಹೆಚ್ಚಾಗಿ ನಡೆಯಲಿ ಎಂದು ಸಲಹೆ ನೀಡಿದರು.
ಗೊರವನಹಳ್ಳಿ ಮಹಾಲಕ್ಷ್ಮಿ ಸೇವಾಟ್ರಸ್ಟ್ನ ಅಧ್ಯಕ್ಷ ಬಿ.ಜಿ.ವಾಸುದೇವ್ ಮಾತನಾಡಿ ಮಹಾಲಕ್ಷ್ಮಿ ದೇವಿಯ ಕೃಪೆಯಿಂದ ಪ್ರಸ್ತುತವರ್ಷ ವಿಜೃಂಭಣೆಯಿಂದ ಬ್ರಹ್ಮ ರಥೋತ್ಸವ ಮತ್ತು ಲಕ್ಷದಿಪೋತ್ಸವ ಕಾರ್ಯಕ್ರಮ ನಡೆದಿದೆ.

ಅಜ್ಞಾನದ ಕತ್ತಲೆಯನ್ನ ಕಳೆದು ಜ್ಞಾನದ ಬೆಳಕನ್ನು ಬೆಳಗುವುದೇ ದೀಪುತ್ಸವ ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ….

ಮಹಾಲಕ್ಷ್ಮಿಯ ಸನ್ನಿಧಾನದಲ್ಲಿ ಡಿಪೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀಗಳು..

ಅಜ್ಞಾನದ ಕತ್ತಲೆಯನ್ನ ಕಳೆದು ಜ್ಞಾನದ ಬೆಳಕನ್ನು ಬೆಳಗುವುದೇ ದೇವಿಯ ಸನ್ನಿಧಾನದಲ್ಲಿ ಸಹಸ್ರಾರು ಭಕ್ತಾದಿಗಳ ಸಮಕ್ಷಮದಲ್ಲಿ ತಾಯಿಯ ಸನ್ನಿಧಾನದಲ್ಲಿ ದೀಪವನ್ನು ಬೆಳಗಿ ಸಮಸ್ತ ಭಕ್ತಾದಿಗಳಿಗೆ ಸಕಲ ಸನ್ಮಂಗಳವನ್ನು ನೀಡಿ ಕಾಪಾಡಲಿ ಎಂದರು..


ಮಹಾಲಕ್ಷ್ಮಿ ಸೇವಾಟ್ರಸ್ಟ್ನಿಂದ ದಾಸೋಹದ ಜೊತೆಯಲ್ಲಿ ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತೇವೆ. ೯ಕೋಟಿ ವೆಚ್ಚದ ದಾಸೋಹ ಭವನವನ್ನು ತ್ವರಿತವಾಗಿ ಲೋಕಾರ್ಪಣೆ ಮಾಡುತ್ತೇವೆ ಎಂದು ಹೇಳಿದರು.
ಮಹಾಲಕ್ಷ್ಮಿ ಪುಣ್ಯ ಕ್ಷೇತ್ರದಲ್ಲಿ ಕಾರ್ತಿಕ ಮಾಸದ ಕಡೇ ಶುಭ ಶುಕ್ರವಾರ ಲಕ್ಷದಿಪೋತ್ಸವದ ಪ್ರಯುಕ್ತ ದೇವಾಲಯಕ್ಕೆ ಹೂವಿನ ಅಲಂಕಾರ, ವಿದ್ಯುತ್ದೀ ಪಾಲಂಕಾರ ಮಾಡಲಾಗಿತ್ತು. ಮಹಾಲಕ್ಷಿö್ಮÃ ದೇವಿಗೆ ಬೆಳಿಗ್ಗೆ ಪಂಚಾಮೃತ ಅಭಿಷೇಕ, ಹೋಮ-ಹವನ, ಮಧ್ಯಾಹ್ನ 12-35ಕ್ಕೆ ಬ್ರಹ್ಮರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. ದೇವಿಯ ದರ್ಶನಕ್ಕೆ ಆಗಮಿಸಿದ ಭಕ್ತರಿಗೆ
ಪ್ರಸಾದದ ವ್ಯವಸ್ಥೆಯನ್ನು ಟ್ರಸ್ಟ್ ವತಿಯಿಂದ ಮಾಡಲಾಗಿತ್ತು.
ಗೊರವನಹಳ್ಳಿ ಶ್ರೀಮಹಾಲಕ್ಷ್ಮಿದೇವಾಲಯದ ಪ್ರಧಾನ ಅರ್ಚಕ ಸುಬ್ರಹ್ಮಣ್ಯಶರ್ಮ, ಗಾಯಕಿ ಶ್ರೀಲಕ್ಷ್ಮಿಪ್ರಸಾದ್, ಚಾರಿಟಬಲ್ ಟ್ರಸ್ಟ್ ಕಾರ್ಯದರ್ಶಿ ಚಿಕ್ಕನರಸಯ್ಯ, ಖಜಾಂಚಿ ಮಂಜುನಾಥ, ಧರ್ಮದರ್ಶಿಗಳಾದ ಡಾ.ಲಕ್ಷ್ಮಿಕಾಂತ.ಟಿ.ಎಸ್, ನಟರಾಜು.ಟಿ.ಆರ್, ಶ್ರೀಪ್ರಸಾದ್.ಎಸ್, ರವಿರಾಜೇಅರಸ್, ಮುರಳೀಕೃಷ್ಣ.ಆರ್, ಓಂಕಾರೇಶ್, ಆರ್.ಜಗದೀಶ್, ರಾಮಲಿಂಗಯ್ಯ, ನರಸರಾಜು, ಲಕ್ಷಿö್ಮÃನರಸಯ್ಯ, ಎನ್.ಜಿ.ನಾಗರಾಜು ಮತ್ತು ಸಿಇಓ ಕೇಶವಮೂರ್ತಿ sssಸೇರಿದಂತೆ ಇತರರು ಇದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!