*ಪ್ರಯಾಣಿಕರನ್ನು ಸುರಕ್ಷತೆಯಲ್ಲಿ ಕರೆದೊಯ್ಯುವ ಆಟೋ ಚಾಲಕರ ಕಾಯಕ ನಿಜವಾದ ಸೇವೆ : ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು.
ಗುಬ್ಬಿ: ನಿತ್ಯ ಖಾಕಿ ತೊಟ್ಟ ಆಟೋ ಚಾಲಕರು ಪ್ರಯಾಣಿಕರನ್ನು ಸುರಕ್ಷಿತವಾಗಿ ತಲುಪಿಸುವ ಕಾಯಕ ನಿಜ ಅರ್ಥದ ಸೇವೆ ಆಗಿದೆ ಎಂದು ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು ಶ್ಲಾಘಿಸಿದರು.
ಪಟ್ಟಣದ ಬಸ್ ನಿಲ್ದಾಣದಲ್ಲಿ ಜೈ ಭುವನೇಶ್ವರಿ ಆಟೋ ಚಾಲಕರ ಮತ್ತು ಮಾಲೀಕರ ಸಂಘ ಆಯೋಜಿಸಿದ್ದ 22 ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ರಸ ಮಂಜರಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನಮ್ಮಗಳ ಹಿತ ಕಾಯುವ ಆಟೋ ಚಾಲಕರ ಸುರಕ್ಷತೆಗೆ ಒತ್ತು ನೀಡಬೇಕಿದೆ. ಅವರ ಮೂರು ಚಕ್ರದ ವಾಹನದ ಸುಗಮ ಸಂಚಾರಕ್ಕೆ ಅಗತ್ಯ ರಸ್ತೆ ನಿರ್ಮಾಣ ಆಗಬೇಕಿದೆ ಎಂದರು.
ತಾಲ್ಲೂಕಿನಲ್ಲಿ ಅಭಿವೃದ್ದಿ ವಿಚಾರ ಪ್ರಸ್ತಾಪ ಮಾಡುವುದು ಅನಿವಾರ್ಯ. ಈಗಾಗಲೇ ಸಂಪೂರ್ಣ ಹದಗೆಟ್ಟ ರಸ್ತೆಗಳ ಬಗ್ಗೆ ಜನರೇ ಸಾಮಾಜಿಕ ಜಾಲತಾಣದಲ್ಲಿ ಚರ್ಚಿಸಿದ್ದಾರೆ. ಮೊದಲು ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ. ಮೂಲ ಸವಲತ್ತುಗಳಲ್ಲಿ ರಸ್ತೆಗೆ ಒತ್ತು ನೀಡುತ್ತೇನೆ. ಮತದಾರರು ನನಗೆ ಆಶೀರ್ವದಿಸಿದರು.
ಮಾಜಿ ಸಿಎಂ ಕುಮಾರಣ್ಣ ಅವರು ಬಡವರ ಪರ ಎನ್ನುವುದು ತಿಳಿದ ವಿಚಾರ. ಟ್ಯಾಕ್ಸಿ ಮತ್ತು ಆಟೋ ಚಾಲಕರ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಕುಮಾರಣ್ಣ ಪ್ರಣಾಳಿಕೆಯಲ್ಲಿ ಚಾಲಕರ ಯೋಗಕ್ಷೇಮಕ್ಕೆ ಗಮನ ನೀಡಿದ್ದಾರೆ. ಪಂಚರತ್ನ ಯೋಜನೆ ಬಡವರ ಪಾಲಿನ ಯೋಜನೆಗಳಾಗಿವೆ. ಇದರಲ್ಲಿ ಆರೋಗ್ಯ ಮತ್ತು ಶಿಕ್ಷಣ ಉಚಿತವಾಗಿ ನೀಡಲಿದ್ದಾರೆ. ಈ ನಿಟ್ಟಿನಲ್ಲಿ ಜೆಡಿಎಸ್ ಬೆಂಬಲಿಸಿ ಅಧಿಕಾರ ಕೊಡಿ. ಗುಬ್ಬಿಯಲ್ಲಿ ನನ್ನನ್ನು ಗೆಲ್ಲಿಸಿ ಅಭಿವೃದ್ದಿ ಕೆಲಸ ನೋಡಿ ಎಂದು ಮನವಿ ಮಾಡಿದರು.
ವೇದಿಕೆಯಲ್ಲಿ ಮುಖಂಡರಾದ ಬಿ.ಲೋಕೇಶ್, ಫಿರ್ದೊಸ್ ಆಲಿ, ನಾಗಸಂದ್ರ ವಿಜಯಕುಮಾರ್, ಆಟೋ ಚಾಲಕರ ಸಂಘದ ಅಧ್ಯಕ್ಷ ವಿಜಯ್ ಕುಮಾರ್, ಉಪಾಧ್ಯಕ್ಷರಾದ ಲೋಕೇಶ್, ಲಕ್ಕೇಗೌಡ, ಪ್ರಧಾನ ಕಾರ್ಯದರ್ಶಿ ಅಬ್ದುಲ್, ಸಹ ಕಾರ್ಯದರ್ಶಿಗಳಾದ ವೆಂಕಟೇಶ್, ಅನ್ನು, ಸಂಘಟನಾ ಕಾರ್ಯದರ್ಶಿಗಳಾದ ಗುರು, ಅಮ್ ಜು, ಖಜಾಂಚಿ ಮೋಹನ್ ಕುಮಾರ್, ಮಹಮದ್ ರಫಿ ಇತರರು ಇದ್ದರು.
ವರದಿ: ಜಿ.ಆರ್.ರಮೇಶ ಗೌಡ, ಗುಬ್ಬಿ.