ಹೊಸಕೆರೆ : ಶಾಸಕ ಎಸ್ ಆರ್ ಶ್ರೀ ನಿವಾಸ್ ಅವರು ಶಾಸಕರು ಆದ ಮೇಲೆ ಹಾಗಲವಾಡಿ ಹೋಬಳಿಗೆ 150 ಕೋಟಿ ಅನುದಾನ ತಂದು ಅಭಿವೃದ್ದಿಪಡಿಸಲಾಗಿದೆ ಎಂದು ಉಚ್ಚಾಟಿತ ಜೆಡಿಎಸ್ ಅಧ್ಯಕ್ಷ ಹೆಚ್ ಆರ್ ಗುರುರೇಣುಕರಾಧ್ಯ ತಿಳಿಸಿದರು.
ಗುಬ್ಬಿ ತಾಲ್ಲೂಕಿನ ಇರಕಸಂದ್ರ ಗ್ರಾಮ ಪಂಚಾಯತಿ ಯಲ್ಲಿ ಹಮ್ಮಿಕೊಂಡಿದ್ದ ಜೆಡಿಎಸ್ ರಾಜೀನಾಮೆ ಪರ್ವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಶಾಸಕರು ಗುಬ್ಬಿ ಕ್ಷೇತ್ರಕ್ಕೆ ಸಾಕಷ್ವು ಅನುದಾನ ತಂದು ಅಭಿವೃದ್ದಿ ಮಾಡಿದ್ದಾರೆ.ಆದರೆ ವಿರೋಧ ಪಕ್ಷದವರು ಅಭಿವೃದ್ಧಿ ಮಾಡಿಲ್ಲ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ.ಕ್ಷೇತ್ರಕ್ಕೆ ಅಭಿವೃದ್ದಿ ಮಾಡಿರುವುದಕ್ಕೆ ಕ್ಷೇತ್ರದ ಜನ ನಾಲ್ಕು ಭಾರಿ ಶಾಸಕರನ್ನಾಗಿ ಆಯ್ಕೆಮಾಡಿದ್ದಾರೆ ಮುಂದೇನು ಗುಬ್ಬಿ ಜನತೆಯ ಆರ್ಶಿವಾದ ವಾಸಣ್ಣ ಮೇಲೆ ಇದೆ ಯಾವ ಪಕ್ಷಕ್ಕೂ ಹೋದರೂ ಸಹ ಶಾಸಕರು ಗೆಲುವುದು ಶತ ಸಿದ್ದ ಕಾರ್ಯಕರ್ತರು ಈಗಿನಿಂದಲೇ ಬೂತ್ ಮಟ್ಟದಲ್ಲಿ ಸಭೆಕರೆದು ಒಗ್ಗಾಟಾಗಿ ಇರಬೇಕು ಎಂದ ಅವರು ಡಿಸೆಂಬರ್ ವೇಳೆ ಕಾರ್ಯಕರ್ತರ ಸಭೆ ಕರೆದು ನಿಮ್ಮ ಅಭಿಪ್ರಾಯ ಪಡೆದು ಮುಂದಿನ ತಿರ್ಮಾನವನ್ನು ತೆಗೆದುಕೊಳುತ್ತೇವೆ ಎಂದು ತಿಳಿಸಿದರು.
ಕೆ.ಆರ್ . ವೆಂಕಟೇಶ್ ಮಾತನಾಡಿ ಶಾಸಕರು ಕಾಂಗ್ರೆಸ್ ಸೇರುವುದು ಬಹುತೇಖ ಖಚಿತವಾಗಿದ್ದು ಮುಂದಿನ ದಿನಗಳಲ್ಲಿ ಕಾರ್ಯಕರ್ತರ ಸಭೆ ಕರೆದು ತಿರ್ಮಾನ ತೆಗೆದುಕೊಳುತ್ತೇವೆ ಮುಂಬರುವ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಮತವನ್ನು ಹಾಕಬೇಕು ಎಂದ ಅವರು
ಬಿಜೆಪಿಯವರು ದೇಶವನ್ನೇ ಲೂಟಿ ಹೊಡೆಯುತ್ತಿದ್ದಾರೆ ಜನ ಸಾಮಾನ್ಯರ ಮೇಲೆ ಬೆಲೆ ಏರಿಕೆಯ ಬಾರೆ ಎಳೆಯುತ್ತಿದ್ದು ಎಲ್ಲ ಪದಾರ್ಥಗಳು ಗಗನಕ್ಕೆ ಏರಿದೆ ಮೋಧಿ ಮೋಧಿ ಅಂಥ ಹೇಳಿ ದೇಶವನ್ನೇ ಲೂಟಿ ಮಾಡಿದ್ದಾರೆ ಮುಂದಿನ ದಿನಗಳಲ್ಲಿ ಶಾಸಕರು ಕಾಂಗ್ರೆಸ್ ಸೇರಿವುದು ಖಚಿತವಾಗಿದೆ ನಾವೆಲ್ಲರೂ ಸಹ ವಾಸಣ್ಣ ಅವರನ್ನು ಬೆಂಬಲಿಸಬೇಕು ಎಂದು ತಿಳಿಸಿದರು.
ಇದೇ ಸಂಧರ್ಭದಲ್ಲಿ ಕೋಟಿ ನಿಂಗಣ್ಣ, ಮಾಜಿ ಗ್ರಾಮಪಂಚಾಯಿತಿ ಅಧ್ಯಕ್ಷ ಮಂಜುನಾಥ್, ಅಧ್ಯಕ್ಷೆ ಮಹಾಲಕ್ಷ್ಮಿ, ಮಾಜಿ ಅಧ್ಯಕ್ಷೆ ಶಾರದಮ್ಮ, ಗ್ರಾಮಪಂಚಾಯಿತಿ ಸದಸ್ಯರಾದ ಹನುಮಂತರಾವ್, ಪುಟ್ಟರಾಜ್, ಬಸವರಾಜು, ಸಿದ್ದಪ್ಪ, ವಸಂತ್, ರವೀಶ್, ಚೈತ್ರ, ಮುಖಂಡರಾದ ನಾಗರಾಜು, ಮಂಜಣ್ಣ, ಪಾಲಣ್ಣ, ಶಿವರಾಜ್, ದಲಿತ ಗಂಗಣ್ಣ ಮೋಹನಕುಮಾರ್ ಮುಂತಾದವರು ಉಪಸ್ಥಿತರಿದ್ದರು.