ಕೊರಟಗೆರೆ : ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಮಲ್ಲೇಕಾವು ಗ್ರಾಮದಲ್ಲಿ ಇಂದು ಶ್ರೀ ಸಿದ್ದಗಂಗಾ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ತುಮಕೂರು, ಆರೋಗ್ಯ ಭಾರತಿ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಶ್ರೀಮತಿ ಸಾಕಮ್ಮ ಎಂ ಸಿ ನಂಜುಂಡ ಶೆಟ್ಟಿ ರವರ 90ನೇ ವರ್ಷದ ಹುಟ್ಟು ಹಬ್ಬದ ಸಲುವಾಗಿ ಅವರ ಕುಟುಂಬಸ್ಥರಿಂದ ಮಲ್ಲೇಕಾವು ಗ್ರಾಮದ ಶ್ರೀ ಅಭಯ ಆಂಜನೇಯ ಸ್ವಾಮಿಯ ದೇವಾಲಯದ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು..
ಈ ಶಿಬಿರದಲ್ಲಿ ಮಧುಮೇಹ ತಜ್ಞರು, ಮೂಳೆ ಮತ್ತು ಕೀಲು ತಜ್ಞರು, ಸ್ತ್ರೀ ರೋಗ ತಜ್ಞರು,ಇಸಿಜಿ ತಜ್ಞರು, ಜನರಲ್ ಸರ್ಜನ್ ಹಾಜರಿದ್ದರು.
ಬಿ.ಪಿ,ಬ್ಲಡ್ ಶುಗರ್, ವೈಟಲ್ಸ್ ಗಳ ತಪಾಸಣೆ ಮಾಡಲಾಯಿತು ಹಾಗೂ ಹಿರಿಯ ನಾಗರಿಕರಿಗೆ ಇಸಿಜಿ ಸೌಲಭ್ಯಗಳನ್ನು ಒದಗಿಸಲಾಗಿತ್ತು….
ಉಚಿತ ಆರೋಗ್ಯ ಶಿಬಿರದಲ್ಲಿ ಮಲ್ಲೇಕಾವು ಮತ್ತು ಅಕ್ಕಪಕ್ಕದ ಊರಿನ ಗ್ರಾಮಸ್ಥರು ಹಿರಿಯರು, ವೃದ್ಧರು,ನಿರ್ಗತಿಕರು,ಅಂಗವಿಕಲರು ಮತ್ತು ಮಲ್ಲೇಕಾವು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡು ಚಿಕಿತ್ಸೆ ಪಡೆದರು ಹಾಗೂ ಯಾವುದೇ ವೆಚ್ಚವಿಲ್ಲದೆ ಉಚಿತವಾಗಿ ಹೆಚ್ಚಿನ ಚಿಕಿತ್ಸೆಗಾಗಿ ಸಿದ್ದಗಂಗಾ ಆಸ್ಪತ್ರೆ ಕೆಲವು ರೋಗಿಗಳನ್ನು ಕಳುಹಿಸಿಕೊಡಲಾಯಿತು.
ಈ ಸಂದರ್ಭದಲ್ಲಿ ಶಿಬಿರವನ್ನು ಆಯೋಜಿಸಿದ್ದ ಶ್ರೀಮತಿ ಸಾಕಮ್ಮ ಎಂ ಸಿ ನಂಜುಂಡ ಶೆಟ್ಟಿ ರವರ ಕುಟುಂಬಸ್ಥರಿಂದ ಅನ್ನ ಸಂತರ್ಪಣೆಯನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ವಸಂತಿ ಗುಪ್ತ,ಕಾಂತರಾಜು ಎಸ್, ಶ್ರೀಕಂಠ ಗುಪ್ತ,ಸೋಮಶೇಖರ್ ಗುಪ್ತ, ಚಂದ್ರಶೇಖರ್ ಗುಪ್ತ, ಎಂ ಎನ್ ಈಶ್ವರ್ ಗುಪ್ತ ಹಾಗೂ ಆಯುರ್ವೇದಿಕ್ ವೈದ್ಯಾಧಿಕಾರಿಯಾದ ಭವ್ಯ,ಗ್ರಾಮ ಪಂಚಾಯತಿ ಸದಸ್ಯರುಗಳು ಗ್ರಾಮಸ್ಥರು,ಸಾರ್ವಜನಿಕರು ಹಾಜರಿದ್ದರು ..
ವರದಿ :- ಹರೀಶ್ ಬಾಬು ಬಿ. ಹೆಚ್ ಕೊರಟಗೆರೆ