ಸಮಸ್ಯೆಗಳಿಗೆ ಸ್ಪಂದಿಸಿ ತ್ವರಿತವಾಗಿ ಸಾರ್ವಜನಿಕರಿಗೆ ಸೌಲಭ್ಯಗಳ ಒದಗಿಸಲು ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ಆಯೋಜನೆ: ಜಿಲ್ಲಾಧಿಕಾರಿ ವೈ .ಎಸ್. ಪಾಟೀಲ್

ತುಮಕೂರು : ಗ್ರಾಮೀಣ ಜನರಮನೆಬಾಗಿಲಿಗೆ ಅಧಿಕಾರಿಗಳು ತೆರಳಿಸಮಸ್ಯೆ ಆಲಿಸಿಸ್ಥಳದಲ್ಲೇಸಮಸ್ಯೆಬಗೆಹರಿಸಿಸರ್ಕಾರದಸೌಲಭ್ಯಗಳನ್ನು ತ್ವರಿತವಾಗಿ ಸಾರ್ವಜನಿಕರಿಗೆ ಒದಗಿಸಿ ಕೊಡುವುದೇ ಈ ಕಾರ್ಯಕ್ರಮದಪ್ರಮುಖ ಉದ್ದೇಶ ಎಂದು ಜಿಲ್ಲಾಧಿಕಾರಿ ವೈ .ಎಸ್. ಪಾಟೀಲ್ಹೇಳಿದರು.

ಜಿಲ್ಲೆಯಮಧುಗಿರಿ ತಾಲೂಕ್ ದೊಡ್ಡೇರಿ ಹೋಬಳಿಯ ಗಿಡದಾಗಲಹಳ್ಳಿಯಲ್ಲಿ ಜಿಲ್ಲಾಡಳಿತಹಾಗೂ ಜಿಲ್ಲಾಪಂಚಾಯತ್ ಆಶ್ರಯದಲ್ಲಿ ಏರ್ಪಡಿಸಿದ್ದ” ಜಿಲ್ಲಾಧಿಕಾರಿಗಳನಡೆಹಳ್ಳಿಯ ಕಡೆ”ಕಾರ್ಯಕ್ರಮವನ್ನು ಉದ್ಘಾಟಿಸಿ ಅವರುಮಾತನಾಡಿದರು.

ಸರ್ಕಾರದ ಯೋಜನೆಗಳ ಕುರಿತು ಗ್ರಾಮೀಣ ಜನತೆಗೆ ಅರಿವು ಮೂಡಿಸುವುದು ಜೊತೆಗೆ ಸೌಲಭ್ಯಗಳನ್ನು ಜನತೆಗೆ ತಲುಪಿಸಲು ಗ್ರಾಮೀಣ ಪ್ರದೇಶದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಗ್ರಾಮೀಣ ಪ್ರದೇಶದ ಜನರು ಸರ್ಕಾರದ ಯೋಜನೆಗಳ ssಸೌಲಭ್ಯಗಳ ಪಡೆಯಲು ಕಚೇರಿಗಳಿಗೆ ಅಲೆಯುವುದರನ್ನ ತಪ್ಪಿಸಲು ಸರ್ಕಾರ ಈ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳು ಜನರಿಗೆ ಕರೆ ನೀಡಿದರು.

ಎಲ್ಲಾ ಇಲಾಖೆಗಳ ಜಿಲ್ಲಾಮತ್ತು ತಾಲೂಕ್ಮಟ್ಟದ ಅಧಿಕಾರಿಗಳು ಗ್ರಾಮದಲ್ಲೇವಾಸ್ತವ್ಯಹೂಡಿ ಸಾರ್ವಜನಿಕರಿಂದ ಅರ್ಜಿಗಳನ್ನುಸ್ವೀಕರಿಸಿಸಮಸ್ಯೆಪರಿಹರಿಸಲಾಗುತ್ತಿದ್ದು, ಜಿಲ್ಲೆಯಲ್ಲಿ ೨೫೦೦ ಹೆಚ್ಚುಹಳ್ಳಿಗಳಿದ್ದು ಈಗ ೫೬೨ ಬೇಚರಾಕ್ಹಳ್ಳಿಗಳನ್ನು(ಹಾಡಿ, ಹಟ್ಟಿಗಳಂತಹ ಜನವಸತಿ ಪ್ರದೇಶಗಳು) ಕಂದಾಯ ಗ್ರಾಮಗಳನ್ನಾಗಿ ಮಾಡಲಾಗಿದೆ, ಮಧುಗಿರಿ ತಾಲೂಕಿನಲ್ಲಿ ೪೭ ಬೇಚರಾಕ್ ಗ್ರಾಮಗಳಲ್ಲಿ ೨೬ ಹಳ್ಳಿಗಳನ್ನು ಅಂತಿಮಗೊಳಿಸಲಾಗಿದೆ, ಜಿಲ್ಲೆಯಲ್ಲಿ ೧೯೫ ಹಳ್ಳಿಗಳಿಗೆ ಅಂತಿಮ ಅಧಿಸೂಚನೆಹೊರಡಿಸಲಾಗಿದೆ, ಈ ಎಲ್ಲಾಪ್ರಕ್ರಿಯೆಪೂರ್ಣವಾದರೆ ಜಿಲ್ಲೆಯಲ್ಲಿಹಳ್ಳಿಗಳಸಂಖ್ಯೆ ೩೨೦೦ ದಾಟಲಿದೆ. ಕೇಂದ್ರಹಾಗೂ ರಾಜ್ಯಸರ್ಕಾರದಸೌಲಭ್ಯಗಳನ್ನು ಸಾರ್ವಜನಿಕರಿಗೆ ಒದಗಿಸಲು ಸಿಗಲು ಇದರಿಂದ ಅನುಕೂಲವಾಗುತ್ತದೆ ಎಂದರು. ಒಂದೂವರೆ ವರ್ಷದಲ್ಲಿ ಸುಮಾರು ೨ ಲಕ್ಷ ಪಹಣಿಗಳನ್ನು ಪರಿಶೀಲಿಸಿ ಸರಿಪಡಿಸಲಾಗಿದ್ದು, ೨೩೦ ಪಹಣಿಗಳು ಬಾಕಿ ಉಳಿದಿವೆ ಇವುಗಳನ್ನು ತ್ವರಿತವಾಗಿ ಸರಿಪಡಿಸಲಾಗುವುದು, ೩ನೇ ಕಲಂನಲ್ಲಿ ಭೂಮಿ ವಿಸ್ತೀರ್ಣ, ೯ನೇ ಕಲಂನಲ್ಲಿ ಅನುಭವದಾರ, ಮಾಲೀಕರ ಹೆಸರು ಹಾಗೂ ವಿಸ್ತೀರ್ಣ ಹೊಂದಾಣಿಕೆ ಇರುತ್ತಿರಲಿಲ್ಲ ಅಂತಹ ಒಂದು ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಜಿಲ್ಲೆಯಲ್ಲಿದ್ದವು. ಅಂತಹ ಪ್ರಕರಣಗಳನ್ನು ಬಗೆಹರಿಸುವ ಕಾರ್ಯ ಭರದಿಂದ ಸಾಗಿದ್ದು, ಈಗ ಅಂತಹ ಪ್ರಕರಣಗಳ ಸಂಖ್ಯೆ ೬ ಸಾವಿರಕ್ಕಿಳಿದಿದೆ, ಜಿಲ್ಲೆಯ ಹಳ್ಳಿಗಳಲ್ಲಿ ಸ್ಮಶಾನಕ್ಕೆ ಮತ್ತು ಘನ ತ್ಯಾಜ್ಯ ಸಂಗ್ರಹಣ ಘಟಕಕ್ಕೆ ಜಾಗ ಒದಗಿಸಲಾಗಿದೆ, ಇಂದು ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಅಧಿಕಾರಿಗಳನ್ನು ಸ್ವಾಗತಿಸಿದ ರೀತಿ ಈ ಭಾಗದ ಸಂಸ್ಕೃತಿಯನ್ನು ಪರಿಚಯಿಸುತ್ತದೆ, ಗಿಡದಾಗಲಹಳ್ಳಿಯ ಜನತೆಯ ಉತ್ತಮ ನಡವಳಿಕೆ ಶ್ಲಾಘನೀಯ ಎಂದರು.

ಆಶ್ರಯ ಯೋಜನೆ, ಪಹಣಿ ತಿದ್ದುಪಡಿ, ಅರ್ಹ ಕುಟುಂಬಗಳಿಗೆಬಿಪಿಎಲ್ ಕಾರ್ಡ್ಹಂಚಿಕೆ, ಪೋಡಿ ಪ್ರಕರಣ ಇತ್ಯರ್ಥ, ರಸ್ತೆ, ವಸತಿ ಸೌಲಭ್ಯ, ಹಾನಿಯಾದಮನೆಗಳಿಗೆಪರಿಹಾರ, ವಿದ್ಯುತ್ಸಂಪರ್ಕ, ಸೇರಿದಂತೆವಿವಿಧ ರೀತಿಯಬೇಡಿಕೆಗಳನ್ನುಸುತ್ತಮುತ್ತಲಿನ ಗ್ರಾಮಸ್ಥರುಸಲ್ಲಿಸಿದರು. ಸಾರ್ವಜನಿಕರ ಹತ್ತು ಹಲವು ಕುಂದುಕೊರತೆಗಳನ್ನು ಸಮಾಧಾನದಿಂದ ಆಲಿಸುತ್ತಾ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಸ್ಥಳದಲ್ಲಿಯೇ ಸಾರ್ವಜನಿಕ ಸಮಸ್ಯೆಗಳಿಗೆ ಪರಿಹಾರ ಒದಗಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ವೀರಭದ್ರಯ್ಯ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮವು ಅತ್ಯಂತ ಉತ್ತಮವಾದ ಕಾರ್ಯಕ್ರಮವಾಗಿದ್ದು ಗ್ರಾಮ ಮಟ್ಟದಲ್ಲಿ ಜನರ ಅಲೆದಾಟವನ್ನು ತಪ್ಪಿಸಿ ಅವರಿಗೆ ಸ್ಥಳದಲ್ಲಿಯೆ ಪರಿಹಾರವನ್ನು ನೀಡುವಂತಹ ಕಾರ್ಯಕ್ರಮವಾಗಿದೆ, ಗ್ರಾಮೀಣ ಭಾಗದ ಜನರ ಸಮಸ್ಯೆಗಳನ್ನು ಬಗೆಹರಿಸಲು ಜಿಲ್ಲಾಡಳಿತವೇ ನಿಮ್ಮ ಬಳಿ ಬಂದಿದ್ದು, ಯಾವುದೇ ಸಮಸ್ಯೆ ಇದ್ದರೂ ಮುಕ್ತವಾಗಿ ನಮ್ಮ ಜೊತೆಗೆ ಚರ್ಚಿಸಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ, ನಿಮ್ಮ ಸಮಸ್ಯೆ ಆಲಿಸಲು ನಾವು ನಿಮ್ಮ ಊರಿಗೆ ಬಂದಿದ್ದೇವೆ ಎಂದು ತಿಳಿಸಿದರು. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳ ಮಾಹಿತಿಯನ್ನು ಶಾಸಕರು ನೀಡಿದರು

ಪ್ರಾಸ್ತಾವಿಕ ಭಾಷಣ ಮಾಡಿದ ಉಪ ವಿಭಾಗಾಧಿಕಾರಿ ರಿಷಿಆನಂದ್ ಅವರು ಆಡಳಿತವನ್ನು ಜನರ ಮನೆಬಾಗಿಲಿಗೆ ಕೊಂಡೊಯ್ಯಬೇಕು ಎನ್ನುವ ಸರಕಾರದ ಆಶಯದಂತೆ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಪ್ರತಿ ತಿಂಗಳ ಮೂರನೇಯ ಶನಿವಾರ ಅಯೋಜಿಸಲಾಗುತ್ತಿದೆ, ಗ್ರಾಮೀಣ ಭಾಗದ ಜನರಿಗೆ ಮಾಹಿತಿಯ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಮಹತ್ವಪೂರ್ಣವಾಗಿವೆ ಸರ್ಕಾರದ ಸೌಲಭ್ಯಗಳ ಮಾಹಿತಿಯನ್ನು ಪಡೆದಂತಹ ಪ್ರಜೆಯೂ ನಾಡಿಗೆ ಉತ್ತಮ ಪ್ರಜೆಯಾಗಿ ತನ್ನ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಜಿಲ್ಲಾಧಿಕಾರಿ ಒಂದು ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿಯೇ ಅವರು ವಾಸ್ತವ್ಯ ಇದ್ದು, ಜನರ ಸಮಸ್ಯೆಗಳನ್ನು ಪರಿಹರಿಸುವುದೇ ಈ ಕಾರ್ಯಕ್ರಮದ ವಿಶೇಷತೆಯಾಗಿದ್ದು, ಸಾರ್ವಜನಿಕರಿಗೆ ಇಲಾಖೆಯ ಸವಲತ್ತುಗಳನ್ನು ನೇರವಾಗಿ ತಮ್ಮ ಮನೆ ಬಾಗಿಲಿಗೆ ತಲುಪಿಸುವ ಕಾರ್ಯಕ್ರಮ ಇದಾಗಿದ್ದು ಎಲ್ಲರೂ ಸದ್ಬಳಕೆ ಮಾಡಿಕೊಳ್ಳಲು ತಿಳಿಸಿದರು,

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಮಾತನಾಡಿದರು.

ಗ್ರಾಮವಾಸ್ತವ್ಯದಲ್ಲಿ ಜಿಲ್ಲಾಧಿಕಾರಿಗಳು, ತಹಸೀಲ್ದಾರರುಹಾಗೂವಿವಿಧ ಅಧಿಕಾರಿಗಳು ಜನರ ಅಹವಾಲುಗಳನ್ನು ಆಲಿಸಿದರು, ನಂತರ ಗ್ರಾಮೀಣ ಪ್ರತಿಭೆಗಳಹಾಗೂ ಕಲೆಗೆಪ್ರೋತ್ಸಾಹಿಸಲುಪೂರಕವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳುನಡೆದವು.

ಮೀನುಗಾರಿಕೆ ಇಲಾಖೆಯಿಂದ ವಸ್ತುಪ್ರದರ್ಶನ ಮಳಿಗೆ: ಮೀನುಗಾರಿಕೆ ಇಲಾಖೆಯಿಂದ ಇಲಾಖೆ ಯೋಜನೆಗಳ ಹಾಗೂ ಮೀನುಗಾರಿಕೆ ಬಗ್ಗೆ ಮಾಹಿತಿ ಒಳಗೊಂಡ ವಸ್ತು ಪ್ರದರ್ಶನದ ಮಳಿಗೆ ಸಾರ್ವಜನಿಕರ ಆಕರ್ಷಿಸಿತು, ಹಾಗೂ ಕೃಷಿ ಹೊಂಡಗಳ ಅನುಕೂಲ ಹೊಂದಿರುವ ರೈತರಿಗೆ ತಲಾ ೨೫೦ರಂತೆ ೧೦ ಜನ ಮೀನುಗಾರರಿಗೆ ಉಚಿತ ಮೀನು ಮರಿ ವಿತರಣೆ ಮಾಡಲಾಯಿತು, ತಾಲೂಕು ಹಿರಿಯ ಮೀನುಗಾರಿಕೆ ಇಲಾಖೆ ಅಧಿಕಾರಿ ರಂಗಸ್ವಾಮಿ ಆರ್, ಇಲಾಖೆಯ ವಿವಿಧ ಯೋಜನೆಗಳ ಸೌಲಭ್ಯ ಕುರಿತು ಗ್ರಾಮಸ್ಥರಿಗೆ ಜಾಗೃತಿ ಮೂಡಿಸಿದರು.

ಆರೋಗ್ಯ ಇಲಾಖೆಯವತಿಯಿಂದಸಾರ್ವಜನಿಕರ ಆರೋಗ್ಯ ತಪಾಸಣೆಮಾಡಿ, ವಿವಿಧಪರಿಕರಗಳವಿತರಿಸಲಾಯಿತು, ವಿವಿಧ ಇಲಾಖೆಗಳುವಸ್ತುಪ್ರದರ್ಶನಮಳಿಗೆ ತೆರದು, ಇಲಾಖೆಯವಿವಿಧ ಯೋಜನೆಗಳಸೌಲಭ್ಯ ಕುರಿತುಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.

ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಾಪುರವಾಡ್, ಡಿಡಿಎಲ್‌ಆರ್ ಜಿಲ್ಲಾಧಿಕಾರಿ ಸುಜಯ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಪ್ರೇಮ ಟಿ.ಎಲ್.ಎಸ್, ರೇಷ್ಮೇ ಇಲಾಖೆಯ ಉಪನಿರ್ದೇಶಕರಾದ ರಾಮಕೃಷ್ಣ, ತಾಲ್ಲೂಕು ಆರೋಗ್ಯಾಧಿಕಾರಿ ಮಹೇಶಬಾಬು, ಗ್ರಾಮ ಪಂಚಾಯತಿ ಅಧ್ಯಕ್ಷೆ ಜ್ಯೋತಿ, ಮುಖಂಡರಾದ ವಿಜಯ್, ಗ್ರಾಮ ಪಂಚಾಯತಿ ಸದ್ಯರು, ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಸ್ಥಳೀಯ ಮುಖಂಡರುಗಳು, ಇನ್ನಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!