ಎಂ ಎನ್ ಕೋಟೆ : ಚುನಾವಣೆ ಹತ್ತಿರ ಬಂದಾಗ ರಾಜಕೀಯ ದ್ರುವೀಕರಣ ಆಗುವುದು ಸಾಮಾನ್ಯ ಎಂದು ಶಾಸಕ ಎಸ್ ಅರ್ ಶ್ರೀನಿವಾಸ್ ತಿಳಿಸಿದರು.
ಗುಬ್ಬಿ ತಾಲ್ಲೂಕಿನ ಎಂ.ಎನ್ ಕೋಟೆ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಶನಿವಾರ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು ನಾನು ಎಲ್ಲಿ ಹೋಗುತ್ತೇನೆ ಎಂಬುದೇ ಇನ್ನೂ ನನಗೆ ಗೊತ್ತಿಲ್ಲಾ ಸ್ವಾಭಿಮಾನ ಇರುವವರು ಅವರಿಗೆ ಗೌರವ ಸಿಗುವ ಕಡೆ ಹೋಗುತ್ತಾರೆ ಎಂದು ತಿಳಿಸಿದ ಅವರು
ಇನ್ನೂ ತಾಲ್ಲೂಕಿನಲ್ಲಿ ಭೂ ಹಗರಣ ವಿಚಾರದಲ್ಲಿ ಗ್ರೇಡ್ 2 ತಾಸೀಲ್ದಾರ್ ಗೆ ರೆಕಾರ್ಡ್ ರೂಮ್ ಬರುವುದರಿಂದ ಅವರೆ ಪೊಲೀಸ್ ಠಾಣೆಗೆ ದೂರುಕೊಡಬೇಕು ಈಗಾಗಲೇ ಒಮ್ಮೆ ಕೊಟ್ಟಿರುವುದರಿಂದ ಮತ್ತೊಮ್ಮೆ ಕೊಡಲು ವಕೀಲರರನ್ನು ಸಂಪರ್ಕ ಮಾಡಿ ನಂತರ ತಿಳಿಸುತ್ತೇನೆ ಎಂದು ತಿಳಿಸಿದ್ದಾರೆ. ಇನ್ನೂ 620 ಎಕರೆ ದಾಖಲೆಯಲ್ಲಿ ಸುಳ್ಳು ಸೃಷ್ಟಿಸಿರುವುದರಿಂದ ಅದರ ಬಗ್ಗೆ ಕಾನೂನು ಕ್ರಮ ತೆಗೆದು ಕೊಳ್ಳಲೆ ಬೇಕಾಗಿದೆ ಎಂದು ತಿಳಿಸಿದರು.
ತಾಲ್ಲೂಕಿನಲ್ಲಿ ಇನ್ನೂ 6 ಕೋಟಿಯಷ್ಟು ರಸ್ತೆ ಕಾಮಗಾರಿಗಳು ನಡೆಯಬೇಕಿದೆ ಈ ರಸ್ತೆ ಕೊಡ ವರ್ಷದ ಹಿಂದೆಯೇ ಆಗಬೇಕಿತ್ತು ಅಧಿಕಾರಿಗಳು ಮಾಡಿಸಿಲ್ಲ ಈಗಾಗಲೇ ಅವರ ಬಗ್ಗೆ ಸಹ ಕ್ರಮ ಕೈ ಗೊಂಡಿದೆ ಎಂದು ತಿಳಿಸಿದರು.
ಎಂ ಎನ್ ಕೋಟೆ ಹೊಸಕೆರೆ ರಸ್ತೆ ಕಾಮಾಗಾರಿ ಶೀಘ್ರವಾಗಿ ಮಾಡಬೇಕು ಎಂದು ಇಂಜಿನಿಯರ್ ಗೆ ಶಾಸಕ ಶ್ರೀನಿವಾಸ್ ತಾಕೀತ್ ಮಾಡಿದರು.ಸುಮಾರು ದಿನಗಳಿಂದ ರಸ್ತೆ ಕಾಮಾಗಾರಿ ಮಾಡದೆ ಅಧಿಕಾರಿಗಳ ನಿರ್ಲಕ್ಷ ವಹಿಸಿ ಜನ ಸಾಮಾನ್ಯರಿಗೆ ತೊಂದರೆಯಾಗಿತ್ತು.ಈ ವಾರದಲ್ಲಿ ರಸ್ತೆ ಕಾಮಾಗಾರಿ ಮಾಡಿ ಎಂದು ಇಂಜಿನಿಯರ್ ಗಳಿಗೆ ತಿಳಿಸಿದರು.
ಇದೆ ಸಂಧರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಯೋಗೀಶ್ , ಉಪಾಧ್ಯಕ್ಷ ದೀಲೀಪ್ ಕುಮಾರ್ ಗ್ರಾಮ ಪಂಚಾಯಿತಿ ಸದಸ್ಯರಾದ ಎಂ ಎನ್ ಭೀಮಶೆಟ್ಟಿ , ಸ ಎಂ.ವಿ.ರವೀಶ್ , ಸಿದ್ದಗಂಗಯ್ಯ ಕಾಂತರಾಜು , ಸಿದ್ದಗಂಗಮ್ಮ ಕಲ್ಲೇಶ್ , ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿದ್ದಲಿಂಗಪ್ಪ , ಮುಖಂಡರಾದ ಎಂ.ಎಸ್.ನಾಗರಾಜಗುಪ್ತ , ಎಂ ಎಲ್ ಶಿವಕುಮಾರ್ ದೇವರಾಜು , ತೇಜಯ್ಯ , ವಿಷ್ಣುವರ್ಧನ್ ಪಾಂಡುರಂಗಯ್ಯ , ಗುತ್ತಿಗೆದಾರ ಭೇಟೆಗೌಡ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.