ಸಮಯೋಚಿತ ಶಸ್ತ್ರಚಿಕಿತ್ಸೆ ಯಿಂದ ಗರ್ಭಿಣಿ ಮಹಿಳೆಯ ಜೀವ ರಕ್ಷಣೆ.
ಏಳು ತಿಂಗಳು ಗರ್ಭಾವಸ್ಥೆಯಲ್ಲಿದ್ದ 28 ವರ್ಷದ ಮಹಿಳೆಯು ತೀವ್ರ ಮೂಗಿನ ರಕ್ತಸ್ರಾವದಿಂದ 25.10.22 ರಂದು ತುಮಕೂರಿನ ಗಾಣಧಾಳ್ ಕಿವಿ ಮೂಗು ಗಂಟಲು ಮತ್ತು ದಂತ ಆಸ್ಪತ್ರೆಗೆ ಬಂದರು. ಅವರನ್ನು ವಿಚಾರಿಸಿದಾಗ, ಮೂಗಿನ ರಕ್ತ ಸ್ರಾವವು ಆ ದಿನ ಬೆಳಿಗ್ಗೆ 7 ಗಂಟೆಗೆ ಶುರುವಾಗಿದೆ. ಒಂದು ಲೀಟರ್ ಗಿಂತ ಜಾಸ್ತಿ ರಕ್ತ ಹೋಗಿದೆ ಎಂದು ಹೇಳಿದರು. ಎರಡು ಬಾರಿ ವಾಂತಿ ಕೂಡ ಮಾಡಿದ್ದಾರೆ. ಆ ಮಹಿಳೆ ಮತ್ತು ಅವರ ಸಂಬಂಧಿಕರು ಜೀವ ಭಯದಿಂದ ಹೆದರಿದ್ದರು. ತಕ್ಷಣವೇ ವೈದ್ಯರ ತಂಡವು ಕಾರ್ಯಪ್ರವುರತ್ತರಾದರು. ರಕ್ತ ನಿಲ್ಲಲು ಔಷಧಿಗಳನ್ನು ನೀಡಿದರು. ಮೂಗನ್ನು ಎಂಡೋಸ್ಕೋಪ್ ಉಪಯೋಗಿಸಿ ಪರೀಕ್ಷೆ ಮಾಡಿದಾಗ ರಕ್ತವು ಹರಿಯುತ್ತಿರುವುದು ಗೋಚರಿಸುತ್ತದೆ. ಆ ರೋಗಿಯನ್ನು ತಕ್ಷಣವೇ ಶಸ್ತ್ರಚಿಕಿತ್ಸಾ ಕೊಠಡಿಗೆ ಕರೆದೊಯ್ಯಲಾಯಿತು. ಅರಿವಳಿಕೆ ಕೊಡಲ್ಪಟ್ಟಿತು. (General anaesthesia). ಮೂಗನ್ನು ಎಂಡೋಸ್ಕೋಪ್ ಉಪಯೋಗಿಸಿ ಪರೀಕ್ಷೆ ಮಾಡಿ, ರಕ್ತ ವು ಬರುತ್ತಿರುವ ಜಾಗವನ್ನು ಕಂಡು ಹಿಡಿದಿದ್ದಾರೆ. ಆ ರಕ್ತ ನಾಳವನ್ನು ಅಧುನಿಕ ಕಾಟರಿ ಬಳಸಿ ರಕ್ತ ಸ್ರಾವವನ್ನು ನಿಯಂತ್ರಿಸಲಾಯಿತು. ಅವಳ ಜೀವ ಉಳಿಯಿತು. ಅವಳ ಹೊಟ್ಟೆಯಲ್ಲಿರುವ ಮಗುವು ಆರೋಗ್ಯವಾಗಿದೆ. ಸಕಾಲದಲ್ಲಿ ಚಿಕಿತ್ಸೆ ನೀಡಿದ್ದರಿಂದ ಗರ್ಭಿಣಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಣಧಾಳ್ ಕಿವಿ ಮೂಗು ಗಂಟಲು ಮತ್ತು ದಂತ ಆಸ್ಪತ್ರೆಯ ವೈದ್ಯರಿಗೆ ಮತ್ತು ಸಿಬ್ಬಂದಿಗೆ ರೋಗಿಯ ಸಂಬಂಧಿಕರು ಕ್ರತಞ್ನತೆ ಸಲ್ಲಿಸಿದ್ದಾರೆ.

ಮೂಗಿನ ರಕ್ತ ಸ್ರಾವವನ್ನು ವೈದ್ಯಕೀಯ ಪರಿಭಾಷೆಯಲ್ಲಿ ಎಪಿಸ್ಟಾಕ್ಸಿಸ್ (Epistaxis) ಎಂದು ಕರೆಯುತ್ತಾರೆ. ಇದು ಮೂಗಿನ ಮುಂಭಾಗದಿಂದ ಅಥವಾ ಹಿಂಭಾಗದಿಂದ ಬರಬಹುದು. ಮೂಗಿನ ಹಿಂಭಾಗದಿಂದ ಆಗುವ ರಕ್ತ ಸ್ರಾವವು ಅಪಾಯಕಾರಿ. ಈ ಮೂಗಿನ ರಕ್ತ ಸ್ರಾವವು ಎಲ್ಲಾ ವಯಸ್ಸಿನ ಗಂಡಸರು ಮತ್ತು ಹೆಂಗಸರಿಗೆ ಆಗಬಹುದು. ಮೂಗಿನ ರಕ್ತ ಸ್ರಾವಕ್ಕೆ ಕಾರಣಗಳೇನೆಂದರೆ ಮೂಗಿಗೆ ಪದೇಪದೇ ಬೆರಳು ಇಡುವುದು, ಮೇಲ್ಬಾಗದ ಶ್ವಾಸೇಂದ್ರಿಯದ ಸೋಂಕು, ಸೈನುಸೈಟಿಸ್, ಮೂಗಿನಲ್ಲಿ ಕಲ್ಲು, ಕಡ್ಡಿ, ಬೀಜಗಳನ್ನು ಹಾಕಿಕೊಂಡಾಗ, ರಸ್ತೆ ಅಪಘಾತ, ಅಲರ್ಜಿಕ್ ರೈನೈಟಿಸ್ ಆಸ್ಪಿರಿನ್ ಅಥವಾ ವಾರ್ಫೆರಿನ್ ಔಷಧಿ ಸೇವಿಸುವುದರಿಂದ, ಮೂಗಿನ ಕಂಬವು ನೇರವಾಗಿಲ್ಲದಿದ್ದರೆ (dns). ಹೀಮೋಫಿಲಿಯ, ಫ್ಲೇಟಲೆಟ್ ಗಳ ಕೊರತೆ, ಅಧಿಕ ರಕ್ತದೊತ್ತಡ, ಮೂಗಿನದುರ್ಮಾಂಸ, ಗರ್ಭಾವಸ್ಥೆ ಮುಂತಾದವುಗಳು. ಹೀಗೆ ಅನೇಕ ಕಾರಣಗಳಿಂದ ಮೂಗಿನಿಂದ ರಕ್ತ ಸ್ರಾವವು ಆಗಬಹುದು.
ಹೀಗೆ ಮೂಗಿನಿಂದ ರಕ್ತ ಬಂದಾಗ ಭಯಪಡಬಾರದು.ರಕ್ತವು ಹೊಟ್ಟೆಗೆ ಹೋಗದಂತೆ ದೇಹವನ್ನು ಮುಂದಕ್ಕೆ ಬಾಗಿ ಕುಳಿತುಕೊಳ್ಳುವುದು. ರಕ್ತವು ಹೊಟ್ಟೆಗೆ ಹೋದರೆ ವಾಂತಿ ಆಗಬಹುದು. ಎರಡು ಬೆರಳುಗಳಿಂದ ಮೂಗನ್ನು ಹಿಸಿಕಿ ಇಡಿಯಬೇಕು. ಮೂಗಿನ ಮೇಲ್ಬಾಗದಲ್ಲಿ ಮಂಜುಗಡ್ಡೆಯನ್ನು ಇಡಬಹುದು. ಆದಷ್ಟು ಬೇಗ ವೈದ್ಯರ ಸಹಾಯ ಪಡೆಯಿರಿ.
ವೈದ್ಯರು ಮೂಗಿನ ರಕ್ತಸ್ರಾವಕ್ಕೆ ಕಾರಣವನ್ನು ಕಂಡುಹಿಡಿದು, ಚಿಕಿತ್ಸೆ ನೀಡುತ್ತಾರೆ. ರಕ್ತ ಪರೀಕ್ಷೆ, ಮೂಗಿನ ಎಂಡೋಸ್ಕೋಪಿ ಮತ್ತು ಸಿ ಟಿ ಸ್ಕಾನಿಂಗ್ ಹೀಗೆ ಹಲವಾರು ಪರೀಕ್ಷೆಗಳನ್ನು ಮಾಡಿ ಕಾರಣವನ್ನು ಕಂಡುಹಿಡಿಯುತ್ತಾರೆ. ರಕ್ತ ಸ್ರಾವವನ್ನು ನಿಲ್ಲಿಸಲು ಚುಚ್ಚುಮದ್ದು ನೀಡಲಾಗುವುದು. ಮೂಗಿನಲ್ಲಿ ಹತ್ತಿಯನ್ನು ತುರುಕಿ ರಕ್ತ ಸ್ರಾವವನ್ನು ನಿಲ್ಲಿಸಬಹುದು. ಇತ್ತೀಚೆಗೆ ಬಂದಿರುವ ಆಧುನಿಕ ತಂತ್ರಜ್ಞಾನವೆಂದರೆ ಮೂಗಿನ ಎಂಡೋಸ್ಕೋಪಿ. ಮೂಗನ್ನು ಎಂಡೋಸ್ಕೋಪ್ ಉಪಯೋಗಿಸಿ ಪರೀಕ್ಷೆ ಮಾಡಿ, ಕಾಟರಿ ಎಂಬ ಉಪಕರಣವನ್ನು ಬಳಸಿ ತಕ್ಷಣ ರಕ್ತ ಸ್ರಾವವನ್ನು ನಿಲ್ಲಿಸಬಹುದು. ಮೂಗಿನ ರಕ್ತಸ್ರಾವದಿಂದ ಜೀವಕ್ಕೆ ಅಪಾಯ ಖಚಿತ. ಆದ್ದರಿಂದ ರೋಗಿಯು ಆದಷ್ಟು ಬೇಗ ಆಸ್ಪತ್ರೆಗೆ ಹೋಗುವುದು ಕ್ಷೇಮ. ನಮ್ಮ ಆಸ್ಪತ್ರೆಗೆ ಬಂದ ರೋಗಿಯ ವಿಶೇಷತೆ ಏನೆಂದರೆ ಅವರು ಗರ್ಭಿಣಿಯಾಗಿದ್ದರು. ಈ ಪರಿಸ್ಥಿತಿಯಲ್ಲಿ ಮಹಿಳೆಗೆ ಮತ್ತು ಮಗುವಿಗೆ ಅಪಾಯ ಆಗುವ ಸಂಭವವಿದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಿದ್ದರಿಂದ ಅಪಾಯ ತಪ್ಪಿದೆ. ಮೂಗಿನಿಂದ ರಕ್ತಸ್ರಾವ ಆಗಬಾರದೆಂದರೆ… ರಕ್ತದಒತ್ತಡವನ್ನು ನಿಯಂತ್ರಣದಲ್ಲಿ ಇಡಿ. ಸೈನುಸೈಟಿಸ್ ಮತ್ತು ಮೂಗಿನ ಅಲರ್ಜಿಗೆ ಚಿಕಿತ್ಸೆ ತೆಗೆದುಕೊಳ್ಳಿ. ರಕ್ತವನ್ನು ತೆಳುಗೊಳಿಸುವ ಔಷಧಗಳಿಂದ ರಕ್ತ ಸ್ರಾವ ಆಗುವ ಸಂಭವವಿದೆ. ಮುಖ್ಯವಾಗಿ E N T ವೈದ್ಯರ ಸಲಹೆ ಪಡೆಯುವುದು. ಈ ಯಶಸ್ವಿ ಶಸ್ತ್ರಚಿಕಿತ್ಸೆಗೆ ಇ. ಎನ್. ಟಿ. ವೈದ್ಯರು, ಅರಿವಳಿಕೆ ತಜ್ಞರು ಮತ್ತು ಸ್ತ್ರೀ ರೋಗ ತಜ್ಞರು ಭಾಗವಹಿಸಿ ರೋಗಿಯ ಪ್ರಾಣವನ್ನು ಉಳಿಸಿರುತ್ತಾರೆ.