ಕೊರಟಗೆರೆ : ಶ್ರೀ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿದ್ದ ೧೧೨೦ನೇ ಮದ್ಯವರ್ಜನ ಶಿಬಿರವನ್ನು ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರಾದ ಮುರುಳೀಧರ ಹಾಲಪ್ಪ ಉದ್ಘಾಟಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಯಾವುದೇ ವ್ಯಕ್ತಿಗಳಾದರೂ ತಮ್ಮ ಕುಟುಂಬಕ್ಕೆ ಅಲ್ಲಿ ಬಡವ ಶ್ರೀಮಂತ ಎಂದು ಬರುವುದಿಲ್ಲ, ಮದ್ಯಪಾನ, ಧೂಮಪಾನ ಇತರೆ ದುಶ್ಚಟಗಳಿಗೆ ದಾಸರಾದರೆ ಅವರ ಕುಟುಂಬ ಬೀದಿ ಪಾಲಾಗುತ್ತದೆ. ಅದರಲ್ಲೂ ಬಡ ಕುಟುಂಬಗಳು ಪ್ರತಿನಿತ್ಯ ಕೂಲಿ ಮಾಡಿ ಜೀವನ ಸಾಗಿಸಬೇಕು, ಕೂಲಿ ಮಾಡಿ ಸಂಪಾದಿಸುವ ಹಣವನ್ನು ಮದ್ಯಪಾನ ಇನ್ನಿತರ ಚಟಗಳಿಗೆ ದಾಸರಾದರೆ, ಕುಟುಂಬದ ಪಾಡೇನು, ಆದ್ದರಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಪರಮ ಪೂಜ್ಯ ಶ್ರೀ ವೀರೇಂದ್ರ ಹೆಗಡೆಯವರ ಈ ಒಂದು ಮಧ್ಯವರ್ಜನ ಶಿಬಿರ ಕಾರ್ಯಕ್ರಮದ ಅಡಿಯಲ್ಲಿ ಇಲ್ಲಿ ಬಂದಿರುವ ಮದ್ಯ ವೇಸನಿಗಳು ತಮ್ಮ ದುಶ್ಚಟಗಳನ್ನು ಬಿಟ್ಟು ತಮ್ಮ ಕುಟುಂಬದ ಜೊತೆ ಆನಂದವಾಗಿರುವುದನ್ನ ಒಮ್ಮೆ ಆಲೋಚಿಸಿ ನೋಡಿ, ತಮ್ಮ ಕುಟುಂಬದ ಹೆಣ್ಣು ಮಕ್ಕಳ ಕಣ್ಣೀರನ್ನು ಒರೆಸಿ ಅವರ ಮುಖದಲ್ಲಿ ಮಂದಹಾಸ ಮೂಡುವಂತೆ ತಾವೆಲ್ಲರೂ ಬದಲಾಗಬೇಕು, ಅದುವೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶ, ತಾವೆಲ್ಲರೂ ಬದಲಾಗಿ ತಮ್ಮ ಕುಟುಂಬದ ಜೊತೆ ಆನಂದವಾಗಿರಿ ಎಂದು ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಸಂಸ್ಥೆಯ ಜಿಲ್ಲಾ ನಿರ್ದೇಶಕರಾದ ದಿನೇಶ್.ಡಿ ಅವರು ಮಾತನಾಡಿ, ಶ್ರೀ ಪರಮಪೂಜ್ಯರ ಕನಸು ಬಡ ಕುಟುಂಬಗಳು ಸಂತೋಷದಿಂದ ಜೀವನ ಸಾಗಿಸಬೇಕು, ಕುಟುಂಬದ ಸದಸ್ಯರು ಯಾವ ರೀತಿ ಇರಬೇಕು ಎನ್ನುವುದನ್ನು ಆಲೋಚಿಸಿದರು, ಅವರ ಆಲೋಚನೆಯಲ್ಲಿ ಮೊದಲು ಬಂದದ್ದೇ ಬಡ ಕುಟುಂಬದ ಅದೆಷ್ಟೊ ಮನೆಗಳ ಯಜಮಾನರು ಇತ್ತೀಚಿನ ಗಂಡು ಮಕ್ಕಳು ಮದ್ಯಪಾನ, ಧೂಮಪಾನ ಸೇರಿದಂತೆ ಇನ್ನಿತರ ದುಶ್ಚಟಗಳಿಗೆ ದಾಸರಾಗಿದ್ದಾರೆ.
ವೈನ್ ಶಾಪ್, ಬಾರ್ ಗಳನ್ನು ಬಾಗಿಲು ಹಾಕಿಸಿದರೆ ಬದಲಾಗುತ್ತದೆ ಎನ್ನುವುದು ಕನಸಿನ ಮಾತಾಗುತ್ತದೆ, ಮದ್ಯಪಾನ ತ್ಯಜಿಸಿ ಇಂತಹವರನ್ನು ಮೊದಲು ತಿದ್ದಬೇಕು ಆಗ ಅಷ್ಟೇ ಬಡ ಕುಟುಂಬಗಳು ನೆಮ್ಮದಿಯಿಂದ ಜೀವನ ಸಾಗಿಸಲು ಸಾಧ್ಯ ಎಂದು ಸಂಕಲ್ಪ ಮಾಡಿದ ಶ್ರೀ ಪರಮ ಪೂಜ್ಯರು ಕರ್ನಾಟಕದಲ್ಲಿ ಇಲ್ಲಿಯವರೆಗೆ ಸುಮಾರು ಒಂದು ಲಕ್ಷದ ಮೂವತ್ತು ಸಾವಿರ ಜನರು ಮಧ್ಯ ವ್ಯಸನವನ್ನು ತ್ಯಜಿಸಿ ತಮ್ಮ ಕುಟುಂಬದ ಜೊತೆ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ, ತಮ್ಮ ಜೀವನ ಸಂತೋಷದಿಂದ ಇರಲು ಶ್ರೀಶ್ರೀ ಪರಮಪೂಜ್ಯ ವೀರೇಂದ್ರ ಹೆಗಡೆಯವರೇ ಕಾರಣ, ನಮ್ಮ ಕುಟುಂಬಕ್ಕೆ ದೇವರ ರೂಪ ಎಂದು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷರು ಹಾಗೂ ಮದ್ಯವರ್ಜನ ಶಿಬಿರದ ವ್ಯವಸ್ಥಾಪಕ ಪ್ರದೀಪ್ ಕುಮಾರ್ ಮಾತನಾಡಿ, ಬೆಳಗ್ಗಿನಿಂದ ಸಂಜೆವರೆಗೂ ಬಿಸಿಲು ಮಳೆ ಗಾಳಿ ಎನ್ನದೆ ದುಡಿಮೆಯನ್ನು ಮಾಡುತ್ತೀರಾ, ಕುಟುಂಬದವರನ್ನು ನೆನಪಿಸಿಕೊಳ್ಳದೆ ಬಂದ ಹಣದಲ್ಲಿ ಮದ್ಯಪಾನ ಮಾಡಿ ಮನೆಗೆ ಹೋಗುತ್ತೀರಾ, ಹೆಂಡತಿ ಮಕ್ಕಳ ಕಣ್ಣೀರಿಗೆ ಕಾರಣವಾಗುತ್ತೀರಾ, ನಿಮ್ಮನ್ನೇ ನಂಬಿಕೊಂಡು ಮನೆಲಿರುವ ಹೆಂಡತಿ ಮಕ್ಕಳ ಹೊಟ್ಟೆಯ ಮೇಲೆ ತಣ್ಣೀರ ಬಟ್ಟೆಯನ್ನು ಹಾಕಿಸುತ್ತೀರಾ, ಇದು ನಿಮಗೆ ಎಷ್ಟರ ಮಟ್ಟಿಗೆ ಸರಿ ಈ ಶಿಬಿರದಲ್ಲಿ ನೀವೇ ತಿಳಿದುಕೊಳ್ಳುತ್ತೀರಾ.
ನಿಮ್ಮನ್ನು ನೋಡಿ ಅನೇಕ ಜನರು ನಿಮ್ಮನ್ನ ಆಡಿಕೊಳ್ಳುತ್ತಾರೆ, ನಿಮ್ಮ ಮಕ್ಕಳನ್ನು ಕುಡುಕನ ಮಕ್ಕಳು ಎಂದು ನಿಂದಿಸುತ್ತಾರೆ, ಆ ಮಕ್ಕಳ ಮನಸ್ಸು ಎಷ್ಟು ನೋಯುತ್ತದೆ ಎನ್ನುವುದನ್ನು ಯೋಚಿಸಿ, ಮುಂದೆ ನಿಮ್ಮ ಮಕ್ಕಳು ನಿಮ್ಮ ದಾರಿಯನ್ನು ಹಿಡಿದರೆ ಏನು ಮಾಡುತ್ತೀರಾ, ಮಧ್ಯವರ್ಜನ ಶಿಬಿರದಲ್ಲಿ ೮ ದಿನಗಳ ಕಾಲ ಸ್ವಲ್ಪ ಕಷ್ಟ ಎನಿಸಿದರು ನಿಮ್ಮ ಮುಂದಿನ ೮೦ ವರ್ಷಗಳ ಜೀವನ ಸುಖಮಯವಾಗಿರುತ್ತದೆ, ತಾವೆಲ್ಲರೂ ಸಹಕರಿಸಿ ಶಿಬಿರವನ್ನ ಯಶಸ್ವಿಗೊಳಿಸಿ ನಿಮ್ಮ ಕುಟುಂಬದ ಜೊತೆ ಸಂತೋಷವಾಗಿರಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಯೋಜನಾಧಿಕಾರಿ ಬಾಲಕೃಷ್ಣ ಎಂ, ಮೇಲ್ವಿಚಾರಕ ರವೀಂದ್ರ ಬಿ, ಸಂಘದ ಅಧ್ಯಕ್ಷ ಕೆ ವಿ ಪುರುಷೋತ್ತಮ್, ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ನಟರಾಜ್, ಬೆಸ್ಕಾಂ ನಿವೃತ್ತ ನೌಕರ ಪರ್ವತಯ್ಯ, ವೇದಿಕೆಯ ಸದಸ್ಯರಾದ ಎಲ್ ರಾಜಣ್ಣ, ಟಿ.ಕೆ ಜಗದೀಶ್, ನೂತನ ಸದಸ್ಯ ಮಮತಾ, ಸಿಬಿರಾಧಿಕಾರಿ ನಂದ ಕುಮಾರ್, ಆರೋಗ್ಯ ಸಹಾಯಕಿ ಶ್ರೀಮತಿ ಪ್ರೆಸಿಲ್ಲಾ ಡಿಸೋಜಾ, ಸಹ ಕಾರ್ಯದರ್ಶಿ ಜಗದೀಶ್ ಕೆ.ಬಿ, ಬೀದಿಬದಿ ವ್ಯಾಪಾರಿ ಸಂಘದ ಅಧ್ಯಕ್ಷ ಕಲೀಮ್ ಸೇರಿದಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಎಲ್ಲಾ ಮಹಿಳಾ ಸದಸ್ಯರು ಹಾಗೂ ಮದ್ಯವರ್ಜನ ತ್ಯಜಿಸಲು ಬಂದ ಸಹಸ್ರಾರು ಜನರು ಹಾಜರಿದ್ದರು.
ವರದಿ : ಹರೀಶ್ ಬಾಬು ಬಿಹೆಚ್. ಕೊರಟಗೆರೆ