ಮೀಸಲಾತಿಗಾಗಿ ಹೋರಾಟ ಅನಿವಾರ್ಯ


ಹೊಸಕೆರೆ : ಬುಡಕಟ್ಟು ಜನಾಂಗವಾದ ಕಾಡುಗೊಲ್ಲ ಸಮುದಾಯ ಪರಿಶಿಷ್ಠ ಪಂಗಡಕ್ಕೆ ಸೇರಲು ರಾಜ್ಯದಂತ ಹೋರಾಟ ಮಾಡಲಾಗುತ್ತಿದೆ ಎಂದು ಕಾಡುಗೊಲ್ಲ ಸಂಘದ ರಾಜ್ಯಧ್ಯಕ್ಷರಾದ ರಾಜಣ್ಣ ತಿಳಿಸಿದರು.

ಗುಬ್ಬಿ ತಾಲ್ಲೂಕಿನ ಹಾಗಲವಾಡಿ ಹೋಬಳಿಯ ಜುಂಜುಪನಹಟ್ಟಿ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜುಂಜಪ್ಪಸ್ವಾಮಿಯ ಕಾರ್ತಿಕ ದೀಪೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈಗಾಗಲೇ ಸುಮಾರು ಗೊಲ್ಲರಹಟ್ಟಿಗಳಲ್ಲಿ ಭೇಟಿ ನೀಡಿ ಗೊಲ್ಲರಹಟ್ಟಿಗಳ ಅಭಿವೃದ್ದಿಯ ಬಗ್ಗೆ ಗಮನಹರಿಸಲಾಗಿದೆ ಜತಗೆ ನಮ್ಮ ಸಮುದಾಯ ದೊಡ್ಡ ಪ್ರಮಾಣದಲ್ಲಿ ಹಿಂದೂಳಿದೆ ಆದ್ದರಿಂದ ಮುಂಬರುವ ಚುನಾಚಣೆಯ ದೃಷ್ಠಿಯಿಂದ ಕಾಡುಗೊಲ್ಲ ಜನಾಂಗವನ್ನು st ಮೀಸಲಾತಿಗೆ ಸೇರಿಸಬೇಕು ಆರ್ಥಿಕವಾಗಿ , ಶೈಕ್ಷಣಿಕವಾಗಿ, ರಾಜಕೀಯವಾಗಿ ಸಮುದಾಯ ಹಿಂದೂಳಿದೆ ಕಾಡುಗೊಲ್ಲರನ್ನು ಪರಿಶಿಷ್ಟ ಜನಾಂಗಕ್ಕೆ ಸೇರ್ಪಡೆ ಮಾಡುವುದು ನಮ್ಮ ಉದ್ದೇಶವಾಗಿದೆ ನಮ್ಮ ಗುರಿ ಮುಟ್ಟುವ ವರೆಗೂ ಹೋರಾಡಬೇಕು ಹೋರಾಟ ಸುಲಭದ ಮಾತಲ್ಲ ಸಂಘಟಿತ ಹೋರಾಟವನ್ನು ನಮ್ಮ ಸಮುದಾಯ ಮಾಡಿದರೆ ಮಾತ್ರ ಎಸ್ ಟಿಗೆ ಸೇರಿಸಲು ಸಾಧ್ಯವಾಗುತ್ತದೆ ಎಂದ ಅವರು ಗೊಲ್ಲರಹಟ್ಟಿಗಳಿಗೆ ಭೇಟಿ ನೀಡಿ ಅರಿವು ಕಾರ್ಯಕ್ರಮ ಮಾಡಲಾಗುತ್ತಿದ್ದು ಕಾಡುಗೊಲ್ಲರು ಸಂಘಟಿತರಾದರೆ ಮಾತ್ರ ಗೊಲ್ಲರಹಟ್ಟಿಗಳು ಅಭಿವೃದ್ದಿಯಾಗುತ್ತೇವೆ ಜತೆಗೆ ಎಸ್ ಟಿ ಸೇರಿಸುವ ವಿಚಾರವಾಗಿ ಶಿರಾದಿಂದ ಬೆಂಗಳೂರು ವರೆಗೂ ಪಾದಯಾತ್ರೆ ಮಾಡುವ ಮೂಲಕ ಎಸ್ ಟಿ ಸೇರಿಸುವುದಕ್ಕೆ ಹೋರಾಟ ಮಾಡಬೇಕಿದೆ ಆದ್ದರಿಂದ ನಾವೆಲ್ಲರೂ ಸಹ ಸಂಘಟಿತರಾಗಬೇಕು ಎಂದು ತಿಳಿಸಿದರು.

ಕಾಡುಗೊಲ್ಲ ಸಂಘದ ತಾಲ್ಲೂಕ್ ಅಧ್ಯಕ್ಷ ದೇವರಾಜು ಮಾತನಾಡಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಸಮುದಾಯದ ಪರ ಎಸ್ ಟಿ ಮೀಸಲಾತಿಗೆ ಸೇರಿಸುವ ವಿಚಾರವನ್ನು ಯಾವ ಪಕ್ಷ ಪ್ರಸ್ಥಾಪ ಮಾಡುತ್ತದೆ ಅವರ ಪರವಾಗಿ ನಮ್ಮ ಕಾಡುಗೊಲ್ಲ ಸಮುದಾಯ ನಿಲ್ಲುತ್ತದೆ. ರಾಜ್ಯದ್ಯಕ್ಷರಾದ ರಾಜಣ್ಣ ನೇತೃತ್ವದಲ್ಲಿ ಎಸ್ ಟಿ‌ ಮೀಸಲಾತಿ ಪರ ಹೋರಾಟ ಮಾಡುತ್ತಿದ್ದಾರೆ ನಾವೆಲ್ಲರೂ ಸಹ ರಾಜಣ್ಣ ಅವರ ಕೈಬಲಪಡಿಸಿಕೊಳಬೇಕು ಎಂದ ಅವರು ನಮ್ಮ ಉದ್ದೇಶ ಎಸ್ ಟಿ ಮೀಸಲಾತಿಗೆ ಸೇರಿಸಬೇಕು ಕಾಡುಗೊಲ್ಲ ಸಮುದಾಯ ಒಗ್ಗಾಟಾಗಿ ಎಸ್ ಟಿ ಮೀಸಲಾತಿಗೆ ಹೋರಾಡಬೇಕಿದೆ ಎಂದು ತಿಳಿಸಿದರು.

ಇದೇ ಸಂಧರ್ಭದಲ್ಲಿ ಮುಖಂಡರಾದ ಗುಡ್ಡದಹಳ್ಳಿ ಬಸವರಾಜು , ತಿಮ್ಮಪ್ಪನಹಟ್ಟಿ ತಿಮ್ಮಯ್ಯ , ಡಿವೈಎಸ್ ಪಿ ಬಸವರಾಜು , ಗಂಗಾಧರ್ , ಜಯಣ್ಣ , ಮಂಜಣ್ಣ ಕಕ್ಕೇನಹಳ್ಳಿ ಜುಂಜೇಗೌಡ , ಶ್ರೀನಿವಾಸ್ ,ಹಾಲೇಗೌಡ , ಉಮೇಶ್ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!