ಯಾರೊಬ್ಬರೂ ಶಿಕ್ಷಣದಿಂದ ವಂಚಿತರಾಗಬಾರದು: ಶ್ರೀಸಿದ್ದಲಿಂಗ ಸ್ವಾಮೀಜಿ

ಶಿರಾ : ಯಾರೊಬ್ಬರೂ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಳಕಳಿಯಿಂದ ಶಿವಕುಮಾರ ಸ್ವಾಮೀಜಿ ಅವರು ಅದನ್ನು ವತ್ರದಂತೆ ಪಾಲಿಸಿ ನಮ್ಮ ಮುಂದೆ ಬಹುದೊಡ್ಡ ಜವಾಬ್ದಾರಿ ಇರಿಸಿದ್ದಾರೆ ಎಂದು ಸಿದ್ದಗಂಗಾ ಮಠದ ಪೀಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ಅವರು ತಾಲ್ಲೂಕಿನ ತರೂರು ಗ್ರಾಮದ ಸಿದ್ದಗಂಗಾ ಗ್ರಾಮಾಂತರ ಪ್ರೌಢಶಾಲಾ ಆವರಣದಲ್ಲಿ ಕೆ.ಅರ್.ರುದ್ರೇಶ್ ನಿರ್ಮಿಸಿರುವ ಡಾ.ಶಿವಕುಮಾರ ಸ್ವಾಮೀಜಿ ಅವರ ವಿಗ್ರಹ ಮೂರ್ತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಅನ್ನ,ಅಕ್ಷರ,ಅಶ್ರಯ ಎಂಬ ತ್ರಿವಿಧ ದಾಸೋಹದ ಮೂಲಕ ಇಡೀ ಜಗತ್ತಿಗೆ ಜ್ಞಾನಪೀಠ ಜ್ಯೋತಿಯನ್ನು ಒತ್ತಿಸಿ ಅದು ಸೂಸುವ ಕಿರಣದ ಮೂಲಕ ಸ್ವಾಮೀಜಿ ನಮ್ಮೊಟ್ಟಿಗೆ ಇದ್ದು ಅರ್ಶೀವದಿಸುತ್ತಿದ್ದಾರೆ ಎಂದು ಹೇಳಿದರು.
ಮಾಜಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ ಶಿಕ್ಷಣ ದೊರೆಯುವ ಮುನ್ನ ಮಾನವ ಶಿಲೆ ಅಗಿರುತ್ತಾನೆ ದೊರೆತ ನಂತರ ಶಿಲ್ಪಕಲೆಯಾಗಿ ಮಾರ್ಪಡುತ್ತಾನೆ ಇದೇ ಶಿಕ್ಷಣಕ್ಕಿರುವ ಶಕ್ತಿ ಎಂದರು.
ಸಿದ್ದರಬೆಟ್ಟದ ಬಾಳೇ ಹೊನ್ನುರು ಪೀಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಶಿವಕುಮಾರ ಸ್ವಾಮೀಜಿ ಬದುಕಿದ ಕಾಲಘಟ್ಟದಲ್ಲಿ ನಾವು ಅವರು ತೋರಿದ ಹಾದಿಯಲ್ಲಿ ಬಾಳುತ್ತಿರುವುದು ಸುಕೃತ ಎಂದರು.
ಕಾರದ ಮಠದ ಶಿವಯೋಗಿ ಸ್ವಾಮೀಜಿ, ತುಮುಲ್ ನಿರ್ದೇಶಕ ಎಸ್.ಅರ್.ಗೌಡ ಮಾತನಾಡಿದರು.
ಎಸ್.ಎಸ್.ಎಲ್.ಸಿ ಯಲ್ಲಿ ಅತಿಹೆಚ್ಚು ಅಂಕ ಪಡೆದ ಹಾಗೂ ಬಡ ವಿದ್ಯಾರ್ಥಿಗಳಿಗೆ ಕೆ‌.ಅರ್.ರುದ್ರೇಶ್ ಅವರು ವಿದ್ಯಾರ್ಥಿ ವೇತನ ನೀಡಿದರು. ತರೂರು ಗ್ರಾ.ಪಂ.ಅಧ್ಯಕ್ಷೆ ಲತಾದೇವಿ, ತಾಲ್ಲೂಕು ಜೆ.ಡಿ.ಎಸ್ ಅಧ್ಯಕ್ಷ ‌ಅರ್.ಉಗ್ರೇಶ್, ಬಿಜೆಪಿ ಗ್ರಾಮಾಂತರ ಅಧ್ಯಕ್ಷ ರಂಗಸ್ವಾಮಿ,
ಮಾಜಿ ಜಿ.ಪಂ.ಸದಸ್ಯರಾದ ಪರ್ವತಪ್ಪ, ಮುದಿಮಡು ರಂಗಸ್ವಾಮಿ, ಬೊಮ್ಮಣ್ಣ, ಮುಖಂಡರಾದ ಮುದಿಮಡು ಮಂಜುನಾಥ್, ತರೂರು ಬಸವರಾಜ್,ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ವೀರಭದ್ರಯ್ಯ, ಉದಯಶಂಕರ್, ತಾ.ಪಂ.ಇಓ ಅನಂತರಾಜ್, ಬಿ.ಇಓ ಶಂಕರಪ್ಪ, ಗ್ರಾ.ಪಂ.ಸದಸ್ಯರಾದ ಮಮತ, ನಾಗಮ್ಮ, ಪುಷ್ಪಲಕ್ಷ್ಮೀ, ತಿಪ್ಪೇಶ್, ಗಂಗಣ್ಣ, ನಾಗರಾಜ್, ಸತೀಶ್, ಗೀತಾ ,ಎಸ್.ಡಿ.ಎಂ.ಸಿ ಅಧ್ಯಕ್ಷ ನಾಗರಾಜ್, ಸುರೇಶ್ ಬಾಬು, ಪ್ರವೀಣ್ ಬಾಬು, ಮಹೇಶ್, ರಂಗನಾಥ್ ಯಾದವ್, ಪ್ರಮೀಳಾ ರಾಜಶೇಖರ್ ,ನಾಗರತ್ನಮ್ಮ, ಗಂಜಲಗುಂಟೆ ರಾಮಚಂದ್ರಪ್ಪ, ಸದಾನಂದಗೌಡ ಮತ್ತಿತರರು ಇದ್ದರು

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!