ನ.26 ರಂದು ಕಲ್ಪೋತ್ಸವನಾಡಹಬ್ಬ, ಕಲ್ಪತರು ರತ್ನ ರಾಜ್ಯಮಟ್ಟದ ಪ್ರಶಸ್ತಿಪ್ರದಾನ ಸಮಾರಂಭ

ತುಮಕೂರು: ತಿಪಟೂರುಸಂಘಸಂಸ್ಥೆಗಳ ಒಕ್ಕೂಟ ಹಾಗೂ ಕಲ್ಪತರುನಾಡಹಬ್ಬ ಕಲ್ಪೋತ್ಸವ ಆಚರಣಾಸಮಿತಿ ವತಿಯಿಂದ ನ.26 ರಂದುಸಂಜೆ 6.30 ಗಂಟೆಗೆ ತಿಪಟೂರಿನ ಕೆ.ಆರ್.ಬಡಾವಣೆಯಬಯಲು ರಂಗಮಂದಿರದಲ್ಲಿ ಕಲ್ಪೋತ್ಸವನಾಡಹಬ್ಬ-2022, ಕಲ್ಪತರು ರತ್ನ ರಾಜ್ಯಮಟ್ಟದ ಪ್ರಶಸ್ತಿಪ್ರದಾನ ಸಮಾರಂಭಹಾಗೂ ಕನ್ನಡ ರಾಜ್ಯೋತ್ಸವಪ್ರ ಶಸ್ತಿಪುರಸ್ಕೃತರಿಗೆ ಅಭಿನಂದನೆ, ಹಾಸ್ಯಸಂಜೆ ಕಾರ್ಯಕ್ರಮಹಮ್ಮಿಕೊಳ್ಳಲಾಗಿದೆ ಎಂದುಸಮಿತಿಯಸಂಚಾಲಕ ತಿಪಟೂರು ಕೃಷ್ಣ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆರೆಗೋಡಿ ರಂಗಾಪುರ ಸುಕ್ಷೇತ್ರಾಧ್ಯಕ್ಷರಾದ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿ, ಬಳ್ಳೆಕಟ್ಟೆ-ಶಿಡ್ಲೆಹಳ್ಳಿ ಸಂಸ್ಥಾನ ಮಠಾಧ್ಯಕ್ಷರಾದ ಶ್ರೀ ಹಿಮ್ಮಡಿ ಕರಿಬಸವೇಶ್ವರದೇಶಿಕೇಂದ್ರ ಸ್ವಾಮೀಜಿ, ತಮ್ಮಡಿಹಳ್ಳಿ ವಿರಕ್ತ ಮಠದ ಶ್ರೀ ಡಾ. ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಸ್ವಾಮೀಜಿ ಇವರ ಸಾನ್ನಿಧ್ಯದಲ್ಲಿ ಆಯೋಜನೆಗೊಂಡಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ವಹಿಸುವರು ಎಂದರು.

ಮಾಜಿ ಶಾಸಕ ಕೆ.ಷಡಕ್ಷರಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ತಿಪಟೂರಿನ ಕುಮಾರ್ ಆಸ್ಪತ್ರೆಯ ವೈದ್ಯರಾದ ಡಾ. ಜಿ.ಎಸ್.ಶ್ರೀಧರ್ ಅವರಿಗೆ ಕಲ್ಪತರು ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ರಾಜ್ಯಾಧ್ಯಕ್ಷ ಡಾ. ಹುಲಿಕಲ್ ನಟರಾಜ್, ಬೆಂಗಳೂರಿನ ಹೆಸರಾಂತ ವೈದ್ಯ ಡಾ. ಆಂಜನಪ್ಪ, ಮಾಜಿ ಶಾಸಕ ಬಿ.ನಂಜಾಮರಿ, ನಿವೃತ್ತ ಎಸಿಪಿ ಲೋಕೇಶ್ವರ್, ಕಲ್ಪೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ಬಿ.ಎಸ್.ಶಿವಪ್ರಸಾದ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದರು.

ನಗರಸಭೆ ಅಧ್ಯಕ್ಷ ರಾಮಮೋಹನ್ ಜನಾರ್ಧನ್, ಉಪಾಧ್ಯಕ್ಷ ಸೊಪ್ಪು ಗಣೇಶ್, ಸಮಾಜ ಸೇವಕರಾದ ಕೆ.ಟಿ.ಶಾಂತಕುಮಾರ್, ಜನಸ್ಪಂದನ ಟ್ರಸ್ಟ್ ಅಧ್ಯಕ್ಷ ಟೂಡಾ ಶಶಿಧರ್ ಇವರು ಸಾಧಕರನ್ನು ಸನ್ಮಾನಿಸುವರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಪುಟ್ಟಸ್ವಾಮಿ, ಬಸವರಾಜು, ಸ್ವರ್ಣಗೌರಿ ಇವರನ್ನು ಸನ್ಮಾನಿಸುವರು ಎಂದರು.

ಇದೇಸಂದರ್ಭದಲ್ಲಿಸಾಂಸ್ಕೃತಿಕ ಕಾರ್ಯಕ್ರಮಹಮ್ಮಿಕೊಂಡಿದ್ದು, ಹಾಸ್ಯಸಂಜೆ, ನೃತ್ಯಸಂಜೆ, ಕಲರ್‍ಸ್ ಕನ್ನಡ, ಝೀ ಕನ್ನಡವಾಹಿನಿಗಳಮಜಾಭಾರತ, ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಕಿರುತೆರೆ ಕಲಾವಿದರಾದ ಜಗಣ್ಣ, ಕಾರ್ತಿಕ್ಹುಲಿ, ಮಾನಸಹಾಗೂ ಡ್ಯಾನ್ಸ್ ಕರ್ನಾಟಕ ತಂಡದಿಂದನೃತ್ಯ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ವಿಶೇಷ ಆಹ್ವಾನಿತರಾಗಿ ವಿವಿಧ ಕ್ಷೇತ್ರಗಳ ಗಣ್ಯರು, ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಆಗಮಿಸುವರು ಎಂದ ಅವರು, ಮುಂದಿನ ವರ್ಷದಿಂದ ಒಂದು ವಾರ ಕಾಲ ಕಲ್ಪೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದು,ವಿವಿಧ ಕ್ಷೇತ್ರಗಳ 10ಮಂದಿ ಸಾಧಕರಿಗೆ ಜಿಲ್ಲಾಮಟ್ಟದ ಪ್ರಶಸ್ತಿ ಹಾಗೂ ಒಬ್ಬರಿಗೆ ರಾಜ್ಯ ಪ್ರಶಸ್ತಿ ನೀಡಲು ಉದ್ದೇಶಿಸಿರುವುದಾಗಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ತಿಪಟೂರು ತಾಲೂಕು ಕಸಾಪ ಅಧ್ಯಕ್ಷಬಸವರಾಜು, ಕನ್ನಡ ರಕ್ಷಣಾವೇದಿಕೆ ರಾಜ್ಯಾಧ್ಯಕ್ಷವಿಜಯಕುಮಾರ್, ಕರ್ನಾಟಕ ರಾಜ್ಯವೈಜ್ಞಾನಿಕಸಂಶೋಧನಾಪರಿಷತ್ ಅಧ್ಯಕ್ಷ ಎಸ್.ಎಸ್.ಗಂಗಾಧರ್, ಪತ್ರಕರ್ತಶಿವರಾಜ್ಮುಂತಾದವರುಹಾಜರಿದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!