ಬಿಜೆಪಿ ಸರ್ಕಾರ ಅಡ್ಡ ದಾರಿ ಹಿಡಿದಿದ್ದೆ ಅಭಿವೃದ್ದಿ ಮಾಡುವಲ್ಲಿ ಸಂಪೂರ್ಣ ವಿಫಲ: ಶಾಸಕ ಎಸ್ ಆರ್ ಶ್ರೀನಿವಾಸ್

ಎಂ ಎನ್ ಕೋಟೆ : ಮತದಾರರ ಪಟ್ಟಿಯಿಂದ ಮತದಾರರನ್ನು ಕೈಬಿಟ್ಟು ಕಮೀಷನ್ ಸರ್ಕಾರದಿಂದ ಹಣ ಹಂಚಿ ಅಧಿಕಾರಕ್ಕೆ ಬರುತ್ತೇವೆ ಎಂಬ ಭ್ರಮೇಯಲ್ಲಿ ಇರುವ ಬಿಜೆಪಿ ಸರ್ಕಾರಕ್ಕೆ ಮತದಾರರು 2023 ಚುನಾವಣೆಯಲ್ಲಿ ತಕ್ಕಪಾಠ ಕಲಿಸುತ್ತಾರೆ ಎಂದು ಶಾಸಕ ಎಸ್ ಆರ್ ಶ್ರೀನಿವಾಸ್ ತಿಳಿಸಿದರು.

ಗುಬ್ಬಿ ತಾಲ್ಲೂಕಿನ ಮುನಿಯಪ್ಪನ ಪಾಳ್ಯ ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಒಂದು ಕೋಟಿ ವೆಚ್ಚದ ರಸ್ತೆ ಕಾಮಾಗಾರಿ ಗುದ್ದಲಿ ಪೂಜೆ ಸಲ್ಲಿಸಿ ಮಾತನಾಡಿದ ಅವರು ಬಿಜೆಪಿ ಸರ್ಕಾರ ಅಡ್ಡ ದಾರಿ ಹಿಡಿದು ಅಧಿಕಾರಕ್ಕೆ ಬಂದು ಅಭಿವೃದ್ದಿ ಮಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಬಿಜೆಪಿಗೆ ಮತಹಾಕದವರನ್ನು ಗುರುತಿಸಿ ಮತಪಟ್ಟಿಯಿಂದ ಕೈಬಿಟ್ಟು ಮತ್ತೇ ಅಧಿಕಾರ ಹಿಡಿಯಲು ಹಗಲು ಕನಸು ಕಾಣುತ್ತಿದ್ದಾರೆ ಮತದಾರರು ಯಾರೇ ಹಣಕೊಟ್ಟರು ಪಡೆಯುತ್ತಾರೆ ಆದರೆ ಮತ ಚಲಾಯಿಸುವಾಗ ಯೋಚಿಸಿ ಮತ ಹಾಕುತ್ತಾರೆ.ಎಂದರು. ಅತಿಯಾದ ಮಳೆಯಿಂದ ರಸ್ತೆಗಳು ಸಂಪೂರ್ಣ ಹಾಳಾಗಿದ್ದು ಗುಂಡಿ ಮುಚ್ಚುವ ಸಣ್ಣ ಕೆಲಸವನ್ನು ಮಾಡದ ಬಿಜೆಪಿ ಸರ್ಕಾರಕ್ಕೆಮತದಾರರು ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತಾರೆ‌ ಎಂದು ತಿಳಿಸಿದರು

ಇದೇ ಸಂಧರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ನಾಗರಾಜು , ಉಪಾಧ್ಯಕ್ಷ ಯತೀಶ್ , ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಹಾಲಕ್ಷ್ಮೀ ನಟರಾಜು , ಸದಸ್ಯರಾದ ಜಗಧೀಶ್ , ಗುತ್ತಿಗೆದಾರ ಚೇಳೂರು ದಾಮು , ರಮೇಶ್ , ಕೃಷ್ಣಜೀರಾವ್ ,ರಾಜರಾವ್ ಮುಖಂಡರಾದ ಕೋಟಿ ಲಿಂಗಪ್ಪ , ಶಿವಲಿಂಗಪ್ಪ ,ನಟರಾಜು , ರಂಗನಾಥ್ ಉಮೇಶ್ ,ಪಾಂಡುರಂಗಯ್ಯ ,ಬಸವರಾಜು ,ಮಂಜುನಾಥ್ , ಶಿವನಂಜಪ್ಪ ಭಾಗವಹಿಸಿದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!