ಗುಬ್ಬಿತಾಲೋಕು ಸಾಹಿತ್ಯ ಸಮ್ಮೇಳನ ಅಧ್ಯಕ್ಷರನ್ನಾಗಿ ಡಾ.ಚಿಕ್ಕಣ್ಣ ಎಣ್ಣೆಕಟ್ಟೆ ಆಯ್ಕೆ

ಎಂ ಎನ್ ಕೋಟೆ : ಗ್ರಾಮದಲ್ಲಿ ಮುಂದಿನ ತಿಂಗಳು 22 ರಂದು ನಡೆಯಲಿರುವ ಗುಬ್ಬಿ ತಾಲೋಕಿನ 5 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ ಡಾ.ಚಿಕ್ಕಣ್ಣ ಎಣ್ಣೆಕಟ್ಟೆ ಅವರನ್ನು ಸರ್ವಾನುಮತದಿಂದ ಆಯ್ಕೆಮಾಡಲಾಯಿತು.
ಬುಧವಾರ ನಡೆದ ಸಂಜೆ ಶ್ರಿ ಮಲ್ಲಿಕಾರ್ಜುನ ಶಾಲಾ ಆವರಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ಯೋಗಾನಂದ ರಾಜ್ಯ ಕಂಡ ಜಾನಪದ ಕಲೆಯ ತಜ್ಞಾರಾಗಿರುವ ಡಾ.ಚಿಕ್ಕಣ್ಣ ಎಣ್ಣೆಕಟ್ಟೆ ಅವರು ನಿಮ್ಮ ಭಾಗದ ಉತ್ತಮ ಸಾಹಿತಿಯಾಗಿರುವ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮನ್ನಣೆಪಡೆದಿದ್ದು ಸುಮಾರು 69 ಪುಸ್ತಕಗಳನ್ನು ಪ್ರಕಟಿಸಿದ್ದಾರೆ.
ನೂರಾರು ಕಲಾವಿದರಿಗೆ ಮಾಸಾಶನ, ಪ್ರಶಸ್ತಿಗಳನ್ನು ಕೊಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಹಂಪಿ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪಿ.ಎಚ್.ಡಿ ಮತ್ತು ಎಂ.ಪಿಲ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸುತ್ತಿರುವ ಇವರಿಗೆ ರಾಷ್ಟ್ರಪತಿಅವರ ಬೆಳ್ಳಿ ಪದಕ ಪ್ರಶಸ್ತಿ, ರಾಜ್ಯದ ಸರ್ವೋತ್ತಮ ಸೇವಾ

ಪ್ರಶಸ್ತಿ ಸಿಕ್ಕಿದ್ದು, ಇಂತಹ ಸಾಹಿತಿಯನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ಈ ಭಾಗಕ್ಕೆ ಕೀರ್ತಿ ತರುತ್ತದೆ ಎಂದು ತಿಳಿಸಿದರು.
ತಾಲೋಕು ಕನ್ನಡ ಸಾಹಿತ್ಯ ಪರಷತ್ತಿನ ಅಧ್ಯಕ್ಷ ಯತೀಶ್ ಮಾತನಾಡಿ ಸುಮಾರು 9 ಸಮಿತಿಗಳನ್ನು ರಚನೆ ಮಾಡಿದ್ದು, ಈ ಸಮ್ಮೇಳನ ಯಶಸ್ವಿಗೆ ಕನ್ನಡ ಆಸಕ್ತರು, ಸಂಘ ಸಂಸ್ಥೆಗಳು, ಅಧಿಕಾರಿಗಳು ಸಾರ್ವಜನಿಕರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಹೋಬಳಿ ಅಧ್ಯಕ್ಷ ಹರೀಶ್, ಜಿಲ್ಲಾ ಕನ್ನಡ ರಾಜ್ಯೋತ್ಸವಪ್ರಶಸ್ತಿ ಪುರಸ್ಕೃತರ ಉಮಾ ಮಹೇಶ್, ಕುಮಾರ್ ಸ್ವಾಮಿ, ಮುಖಂಡರಾದ ವೆಂಕಟೇಶ್, ಮುಖ್ಯೋಪಾಧ್ಯಾಯರಾದ ಡಾ. ಕೃಷ್ಣಪ್ಪ, ಸಿ. ಎಂ ಹಿತೇಶ್, ಉಮೇಶ್, ಕಾರ್ತಿಕೇಯನ್, ಗುರುಲಿಂಗಯ್ಯ, ಸಿ ಎಸ್ ಶಿವಕುಮಾರ್, ನಟರಾಜು, ಮಲ್ಲಿಕಾರ್ಜುನಯ್ಯ, ಸಿದ್ದಪ್ಪ, ಸತೀಶ್, ಸೋಮಶೇಖರ್, ಡಾ.ಕಿರಣ್, ಸಿ.ವಿ ಎನ್ ಮೂರ್ತಿ, ಮುಖಂಡರು ಹಾಜರಿದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!