ನ.25 ರಂದು ಶ್ರೀ ಕೆಂಪಮ್ಮ ದೇವಿಯ ಸಹಸ್ರ ದೀಪೋತ್ಸವ

ತುಮಕೂರು: ನ.25 ರಂದು ಶ್ರೀ ಕೆಂಪಮ್ಮ ದೇವಿಯವರ ಸಹಸ್ರ ದೀಪೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಹೋಬಳಿಯ ಯರೇಹಳ್ಳಿ ಗ್ರಾಮದ ಶ್ರೀ ಕೆಂಪಮ್ಮ ದೇವಿಯವರ ಕದಲಿ ಪೂಜೆ ಹಾಗೂ ದೀಪೋತ್ಸವ ಕಾರ್ಯಕ್ರಮವನ್ನು ನ.25 ರ ಶುಕ್ರವಾರ ಬೆಳಿಗ್ಗೆ 6-3೦ ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಿಗ್ಗೆ 1೦-30ಕ್ಕೆ ಶ್ರೀ ಕೆಂಪಮ್ಮ ದೇವಿಯವರ ಉತ್ಸವ ಮೂರ್ತಿಯು ಮೂಲಸ್ಥಾನಕ್ಕೆ ದಯಮಾಡಿಸುವುದು,ಮೂಲ ವಿಗ್ರಹಕ್ಕೆ ಅಭಿಷೇಕ ಮತ್ತು ಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿನಿಯೋಗ ನೆರವೇರಿಸಲಾಗುತ್ತದೆ.
ಸಹಸ್ರ ದೀಪೋತ್ಸವದ ನಂತರ ದೇವಿಯನ್ನು ಗ್ರಾಮದ ರಾಜಬೀದಿಗಳಲ್ಲಿ ಕಲಾ ತಂಡಗಳೊಂದಿಗೆ ಮೆರವಣಿಗೆ ನೆಡೆಸಲಾಗುತ್ತದೆ.ಮಂಗಳಾರತಿ,ತೀರ್ಥ ಪ್ರಸಾದ ವಿನಿಯೋಗ ಆದ ಬಳೀಕ ಸಕಲ ವಾದ್ಯಗೋಷ್ಠಿ ಹಾಗೂ ಮದಲಸಿಯೊಂದಿಗೆ ಅಮ್ಮನವರು ಸ್ವಗ್ರಾಮಕ್ಕೆ ಮರಳುತ್ತಾರೆ. ಅಂದು ಸಂಜೆ 7-30ಕ್ಕೆ ತುಮಕೂರಿನ ಕ್ರೇಜಿಸ್ಟಾರ್ ಆರ್ಕೆಸ್ಟ್ರಾ ತಂಡದವರಿಂದ ಮನರಂಜನೆ ಏರ್ಪಡಿಸಲಾಗಿದೆ. ಭಕ್ತಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ದೇಗುಲದ ಆಡಳಿತ ಮಂಡಳಿ,ಯರೇಹಳ್ಳಿ ಹಾಗೂ ಸುತ್ತಮ ಮುತ್ತಲ ಏಳುಹಳ್ಳಿ ಗ್ರಾಮಸ್ಥರು ಕರೆ ನೀಡಿದ್ದಾರೆ.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!