ವಾಲ್ಮೀಕಿ ಸಮುದಾಯದವರು ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಿ: ಕೆ.ಎನ್ ರಾಜಣ್ಣ

ಪಾವಗಡ : ಸಾರ್ವಜನಿಕ ಜೀವನದಲ್ಲಿರುವ ಪ್ರತಿಯೊಬ್ಬರೂ ಸಹಾ ಯಾವುದೇ ಒಂದು ಜಾತಿಗೆ ಸೀಮಿತವಾಗದೆ ಎಲ್ಲಾ ಸಮುದಾಯಗಳ ಏಳಿಗೆಗಾಗಿ ದುಡಿಯಬೇಕು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾದ ಕೆ ಎನ್ ರಾಜಣ್ಣನವರು ತಿಳಿಸಿದರು.

ತಾಲ್ಲೂಕಿನ ನಿಡಗಲ್ ಹೋಬಳಿಯ ಸಿಕೆಪುರ ಗ್ರಾಮದಲ್ಲಿ ಶುಕ್ರವಾರ ಗ್ರಾಮದ  ವಾಲ್ಮೀಕಿ ಸಮುದಾಯದವರು ಆಯೋಜಿಸಿದ್ದ   ಶ್ರೀ ಮಹರ್ಷಿ ವಾಲ್ಮೀಕಿ ಪುಸ್ಥಳಿ ಪ್ರತಿಷ್ಠಾಪನೆ ಮತ್ತು ಜಯಂತೋತ್ಸವದ ಉದ್ಘಾಟಿನೆ ಹಾಗೂ ಪಟ್ಟಣದ ಡಿಸಿಸಿ ಬ್ಯಾಂಕಿನಲ್ಲಿ  ಎಟಿಎಂ ಸೆಂಟರ್ ಅನ್ನು ಉದ್ಘಾಟಿಸಿ  ನಂತರ ಸಿಕೆ ಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ  ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ , ಸಾರ್ವಜನಿಕ ಜೀವನದಲ್ಲಿರುವ ಪ್ರತಿಯೊಬ್ಬರು   ಅಧಿಕಾರದಲ್ಲಿದ್ದಾಗ ಅಧಿಕಾರವನ್ನು ಸ್ವಾರ್ಥಕ್ಕೆ ಬಳಸಿಕೊಳ್ಳದೆ ಸಮಾಜಮುಖಿ ಕೆಲಸವನ್ನು ಮಾಡಬೇಕು.  ನಮ್ಮ ಹೆಸರು ಜನರ ಮನಸ್ಸಿನಲ್ಲಿ ಸ್ಥಿರ ಸ್ಥಾಯಿಯಾಗಿ ಉಳಿಯಬೇಕೆಂದರೆ ನಾವು ಮಾಡಿದ ಜನ ಸೇವೆಯಿಂದ ಮಾತ್ರ ಸಾಧ್ಯ .

ವಾಲ್ಮೀಕಿ ಸಮಾಜದವರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಬೇಕು ಹಾಗೂ  ಸಂಘಟಿತವಾಗಬೇಕು. ಹಾಗಂತ ಬೇರೆ ಸಮುದಾಯಗಳ ಮೇಲೆ ದ್ವೇಷ ಸಾಧಿಸುವುದಲ್ಲ ಮುಂದುವರಿದ ಸಮಾಜವನ್ನು ನೋಡಿ ನಾವು ಸಹ ಅವರಂತೆ ಆರ್ಥಿಕವಾಗಿ ಕೆಲಸದೃಢವಾಗಬೇಕು ಸಮಾಜದಲ್ಲಿ ಸ್ವಾಭಿಮಾನ ಬದುಕನ್ನು ನಡೆಸಬೇಕು ಎಂಬ ನಿಟ್ಟಿನಲ್ಲಿ ನಮ್ಮಲ್ಲಿ ಛಲ ಬರಬೇಕು.

ನಮ್ಮ ಸಹಕಾರಿ ಸಂಘಗಳಲ್ಲಿ ಅನೇಕ ಜನಪರ ಯೋಜನೆಗಳಿದ್ದು ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಸಹಕಾರಿ ಸಂಘಗಳಲ್ಲಿ ಸದಸ್ಯರಾದರೆ ಸಾಕು ಅವರಿಗೆ ಯಶಸ್ವಿ ಯೋಜನೆಯ ಎಲ್ಲಾ ಸವಲತ್ತುಗಳು ದೊರೆಯುತ್ತವೆ. ಇವರು ಸರಕಾರಕ್ಕೆ ಯಾವುದೇ ವಂತಿಗೆ ನೀಡುವಂತಿಲ್ಲ ಆದ್ದರಿಂದ ನಮ್ಮ ಇಲಾಖೆಯಿಂದ ನಿಮ್ಮ ಮನೆ ಬಾಗಿಲಿಗೆ ಬರುವ ಅಧಿಕಾರಿಗಳು ಬಂದಾಗ ನಿಮ್ಮ ಹೆಸರನ್ನು ನೋಂದಾಯಿಸಿ ಇದರಿಂದ ಸುಮಾರು 5 ಲಕ್ಷದವರೆಗೂ ನಿಮಗೆ ಚಿಕಿತ್ಸೆ ವೆಚ್ಚ ಸಿಗಲಿದೆ ಎಂದು ತಿಳಿಸಿದರು.ಜಿಲ್ಲೆಯ ಯಾವುದೇ ಗ್ರಾಮಗಳಲ್ಲಾದರೂ ಸಹ ವಾಲ್ಮೀಕಿ  ವಿಗ್ರಹ ಪ್ರತಿಷ್ಠಾಪನೆಗೆ ಬೇಕೆಂದು ನನಗೆ ಮನವಿ ಸಲ್ಲಿಸಿದರೆ ಸಮುದಾಯದವರ ಸಹಕಾರದೊಂದಿಗೆ ವಿಗ್ರಹದ ಖರ್ಚನ್ನು ಬರಿಸಲಾಗುತ್ತದೆ ಎಂದು ತಿಳಿಸಿದರು.

ಶಾಸಕರಾದ ವೆಂಕಟರಮಣಪ್ಪನವರು ಮಾತನಾಡುತ್ತಾ , ವಾಲ್ಮೀಕಿ ಮಹರ್ಷಿಗಳು ಕೇವಲ ಒಂದು ಜಾತಿಗೆ ಸೀಮಿತರಾದವರಲ್ಲ
ಇವರ ತತ್ವ ಸಿದ್ಧಾಂತಗಳು  ಎಲ್ಲ ಜಾತಿ  ಸಮುದಾಯಗಳಿಗೂ ಸಹ ಆದರ್ಶವಾಗಿವೆ.
ವಾಲ್ಮೀಕಿ ಸಮುದಾಯದ ಎಲ್ಲರೂ ತಾಲೂಕಿನಲ್ಲಿ ಒಂದು ಕಡೆ ಸೇರಿ ವಾಲ್ಮೀಕಿ ಜಯಂತಿಯನ್ನು  ಆಚರಿಸಬೇಕು. ಈ ರೀತಿ ಪ್ರತಿ ಗ್ರಾಮಗಳಲ್ಲಿ  ಆಚರಿಸುವುದರಿಂದ ಹೆಚ್ಚು ಆರ್ಥಿಕ ಹೊರೆಯಾಗುತ್ತದೆ ಆದ್ದರಿಂದ  ನಿಮ್ಮ ಸಮುದಾಯದಲ್ಲಿ ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ನೀಡಿ ವಿದ್ಯಾವಂತರನ್ನಾಗಿ ಮಾಡಿದರೆ ನಿಮ್ಮ ಸಮುದಾಯವು ಸಹ  ಆರ್ಥಿಕವಾಗಿ ಶೈಕ್ಷಣಿಕವಾಗಿ ಮುಂದುವರೆಯುತ್ತದೆ ಎಂದು ತಿಳಿಸಿದರು.

ಸಿಡ್ಲೆಕೋಣ ಹಾಗೂ ನಿಡಗಲ್  ವಾಲ್ಮೀಕಿ ಮಹಾ ಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ವಾಲ್ಮೀಕಿ ಸಂಜಯ್ ಕುಮಾರ್ ಸ್ವಾಮೀಜಿಯವರು ದಿವ್ಯ ಸಾನಿಧ್ಯ ವಹಿಸಿದ್ದರು.

ಈ ಸಂದರ್ಭದಲ್ಲಿ  ನೌಕರರ ಘಟಕ ವಾಲ್ಮೀಕಿ ನಾಯಕ ಮಹಾಸಭಾ ಹಾಗೂ 2021ರ ಶ್ರೀ ಮಹರ್ಷಿ ವಾಲ್ಮೀಕಿ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಕೆ ಸಿ ನಾಗರಾಜು , ನಿಕಟ ಪೂರ್ವ ಬಿಬಿಎಂಪಿ ಸದಸ್ಯರು ಕೆ ನರಸಿಂಹ ನಾಯಕ, ಡಿಸಿಸಿ ಬ್ಯಾಂಕ್ ಸೀನಪ್ಪ ,  ಸಿ. ಇ. ಓ. ನಾರಾಯಣ ಮೂರ್ತಿ ಸಿಕೆಪುರ ಗೋಪಾಲ್ ರಾವ್, ಆನಂದ ರಾವ್, ಬಿಂದು ಮಾಧವ ರಾವ್, ಯಾರಪ್ಪ , ಕೊತೊರು ಹನುಮಂತರಾಯಪ್ಪ , ಕೊಂಡಪ್ಪ , ವಾಲ್ಮೀಕಿ ಜಾಗೃತಿ ವೇದಿಕೆಯ  ಲೋಕೇಶ್ ಪಾಳೆಗಾರ್, ಚಿತ್ತಗನಹಳ್ಳಿ ಚಂದ್ರು , ಓಂಕಾರ ನಾಯಕ್ ಹಾಗೂ ನಿಮ್ಮ ಮುಂತಾದ ಉಪಸ್ಥಿತರಿದ್ದರು.

ಶಾಸಕರಾದ ವೆಂಕಟರಮಣಪ್ಪನವರು ಮಾತನಾಡುತ್ತಾ , ವಾಲ್ಮೀಕಿ ಮಹರ್ಷಿಗಳು ಕೇವಲ ಒಂದು ಜಾತಿಗೆ ಸೀಮಿತರಾದವರಲ್ಲ
ಇವರ ತತ್ವ ಸಿದ್ಧಾಂತಗಳು  ಎಲ್ಲ ಜಾತಿ  ಸಮುದಾಯಗಳಿಗೂ ಸಹ ಆದರ್ಶವಾಗಿವೆ.
ವಾಲ್ಮೀಕಿ ಸಮುದಾಯದ ಎಲ್ಲರೂ ತಾಲೂಕಿನಲ್ಲಿ ಒಂದು ಕಡೆ ಸೇರಿ ವಾಲ್ಮೀಕಿ ಜಯಂತಿಯನ್ನು  ಆಚರಿಸಬೇಕು. ಈ ರೀತಿ ಪ್ರತಿ ಗ್ರಾಮಗಳಲ್ಲಿ  ಆಚರಿಸುವುದರಿಂದ ಹೆಚ್ಚು ಆರ್ಥಿಕ ಹೊರೆಯಾಗುತ್ತದೆ ಆದ್ದರಿಂದ  ನಿಮ್ಮ ಸಮುದಾಯದಲ್ಲಿ ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ನೀಡಿ ವಿದ್ಯಾವಂತರನ್ನಾಗಿ ಮಾಡಿದರೆ ನಿಮ್ಮ ಸಮುದಾಯವು ಸಹ  ಆರ್ಥಿಕವಾಗಿ ಶೈಕ್ಷಣಿಕವಾಗಿ ಮುಂದುವರೆಯುತ್ತದೆ ಎಂದು ತಿಳಿಸಿದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!