ಅಕ್ರಮವಾಗಿ ಜಮೀನು ಕಬಳಿಸುವವರಿಗೆ ಕಡಿವಾಣ ಹಾಕಿ ತಾಲೂಕಿನ ರೈತರಿಗೆ ಜಮೀನು ಕೊಡಿಲಾಗುವುದು ಜಿ ಪರಮೇಶ್ವರ್ ಸ್ಪಷ್ಟನೆ

ಕೊರಟಗೆರೆ: ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ಅಕ್ಕಾಜಿಹಳ್ಳಿ ಗ್ರಾಮದ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ನುಸಿಳಿ ಬೇಲಿ ಹಾಕಿಕೊಂಡಿರುವ ಬೆಂಗಳೂರಿನ ಮೂಲದವರಿಗೆ
ಯಾವುದೇ ಕಾರಣಕ್ಕೂ ಜಮೀನು ಮಂಜೂರು ಮಾಡುವುದಿಲ್ಲ, ಅದನ್ನು ತಾಲ್ಲೂಕಿನ ರೈತರಿಗೆ ಕೊಡಿಸುವುದು ಶತ ಸಿದ್ದ ಮಾಜಿ ಡಿಸಿಎಂ ಹಾಗೂ ಶಾಸಕ ಡಾ. ಜಿ ಪರಮೇಶ್ ರ್ ಖಡಕ್ ಎಚ್ಚರಿಕೆ ಹಾಗೂ ಸಂದೇಶ ನೀಡಿದರು.

ಪಟ್ಟಣದ ಮಾರುತಿ ಕಲ್ಯಾಣ ಮಂಟಪದಲ್ಲಿ ತಾಲ್ಲೂಕು ಕಂದಾಯ ಇಲಾಖಾ ವತಿಯಿಂದ ಕೊರಟಗೆರೆ ತಾಲ್ಲೂಕಿನ ಬಗರ್ ಹುಕ್ಕುಂ ಸಾಗುವಳಿ ಮಾಡುತ್ತಿರುವ ರೈತರಿಗೆ ಸಾಗುವಳಿ ಪತ್ರ, ಪಹಣಿ, ಹಕ್ಕು ಪತ್ರ ದಾಖಲಾತಿಗಳು ಹಾಗೂ ಪಿಂಚಣಿ ಮಾಸಾಶನ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ದಾಖಲಾತಿ ಪತ್ರಗಳನ್ನು ವಿತರಿಸಿ ಮಾತನಾಡಿದರು.

ಕಂದಾಯ ಇಲಾಖೆಯು ೧೯೫೧ ರಿಂದ ಉಳುವವನಿಗೆ ಭೂಮಿ ಎನ್ನುವ ಆದೇಶ ತಂದು
ಜಮೀನಿಲ್ಲದ ರೈತರಿಗೆ ಜಮೀನನ್ನು ಮಂಜೂರು ಮಾಡಿಕೊಟ್ಟಿದೆ. ದೇವರಾಜು ಅರಸು ಅವರ ಕಾಲದಲ್ಲಿ ಪ್ರಾರಂಭವಾದ ಈ ಪ್ರಕ್ರಿಯೆ ಲಕ್ಷಾಂತರ ರೈತರು ಇದರ ಉಪಯೋಗ ಪಡೆದು ವ್ಯವಸಾಯ ಮಾಡುತ್ತಿದ್ದಾರೆ ಎಂದರು.

ತಾಲ್ಲೂಕಿನಲ್ಲಿ ಇಂದು ೧೨೧ ಸಾಗುವಳಿ ಹಕ್ಕುಪತ್ರ, ೩೦ ಸಾಗುವಳಿ ಪತ್ರ, ೧೬೨ ಪಿಂಚಣಿ
ಮಾಸಾಶನಗಳ ಪತ್ರಗಳನ್ನು ವಿತರಿಸಲು ತಾಲ್ಲೂಕು ದಂಡಾಧಿಕಾರಿಗಳ ಜೊತೆ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಕಮಿಟಿಯ ಸದಸ್ಯರುಗಳ ಸಹಕಾರದಿಂದ ತಾಲೂಕಿನ ರೈತರು ಇಂದು ನೆಮ್ಮದಿಯಿಂದ ಇರುವಂತಹ ಸಮಯ ಒದಗಿ ಬಂದಿದೆ ಎಂದು ಡಾಕ್ಟರ್ ಜಿ ಪರಮೇಶ್ವರ್ ತಿಳಿಸಿದರು.

ರೈತರಿಗೆ ಸಾಗುವಳಿಯೊಂದಿಗೆ ಹಕ್ಕುಪತ್ರಗಳನ್ನು ವಿತರಿಸುವ ಕೆಲಸ ರಾಜ್ಯದಲ್ಲೇ ಕೊರಟಗೆರೆ ತಾಲ್ಲೂಕಿನಲ್ಲಿ ವಿನೂತನವಾಗಿ ಮಾಡುತ್ತಿದ್ದೇವೆ, ಇದರಿಂದ ಸಾಗುವಳಿ ಪಡೆದ ರೈತರು ಹಕ್ಕುಪತ್ರಕ್ಕಾಗಿ ಕಂದಾಯ ಇಲಾಖೆಗೆ ಅಲೆಯುವುದು ತಪ್ಪಿದಂತೆ ಆಗುತ್ತದೆ. ಆ ಕೆಲಸವನ್ನು ನನ್ನ ಅಧ್ಯಕ್ಷತೆಯಲ್ಲಿ ಬಗರ್ ಹುಕ್ಕುಂ ಸಮಿತಿ, ತಹಶೀಲ್ದಾರ್ ಹಾಗೂ ಕಂದಾಯ ಅಧಿಕಾರಿಗಳು ಬಹಳ ಅಚ್ಚುಕಟ್ಟಾಗಿ ಮಾಡಿದ್ದಾರೆ, ಅದರೆ ರೈತರು ತಮಗೆ ಮಂಜೂರಾದ ಜಮೀನನ್ನು ೨೫ ವರ್ಷಗಳ ಕಾಲ ಪರಭಾರೆ ಮಾಡುವಂತ್ತಿಲ್ಲ ಎಂದರು.
ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಅಕ್ಕಾಜಿಹಳ್ಳಿ ಗ್ರಾಮ ಸರ್ಕಾರಿ ಜಮೀನಿನಲ್ಲಿ ಬೆಂಗಳೂರು ಮೂಲದವರು ನಕಲಿ ದಾಖಲೆಗಳನ್ನು ಸೃಷ್ಟಿಸಿ ನೂರಾರು ಎಕರೆ ಜಮೀನನ್ನು ನಮ್ಮ ರೈತರಿಂದ ತಪ್ಪಿಸಿ ಅಕ್ರಮವಾಗಿ ಬೇಲಿ ಹಾಕಿಕೊಂಡಿದ್ದಾರೆ. ಅವರಿಗೆ ಸಾಗುವಳಿ ಪತ್ರ ಮಾಡಿಕೊಡುವಂತೆ ನನ್ನ ಮೇಲೆ ಮತ್ತು ಅಧಿಕಾರಿಗಳ ಮೇಲೆ ಹಲವು ಒತ್ತಡಗಳನ್ನು ಹಾಕಿದ್ದಾರೆ. ಆದರೆ ಅವುಗಳಿಗೆ ಜಗ್ಗುವ ಪ್ರಶ್ನೆಯೇ ಇಲ್ಲ. ಯಾವುದೇ ಕಾರಣಕ್ಕು ಬೆಂಗಳೂರು ಮೂಲದವರಿಗೆ ಸಾಗುವಳಿ ಜಮೀನನ್ನು ನೀಡುವುದಿಲ್ಲ ಎಂದು ಜಮೀನು ಕಬಳಿಸಿರುವ ಬೆಂಗಳೂರು ಮೂಲದವರಿಗೆ ಕಡಕ್ ಎಚ್ಚರಿಕೆ ನೀಡಿದರು.

ರೈತರಿಗೆ ಜಮೀನು ನೀಡುವ ಜೊತೆಗೆ ಬೆಳೆದಂತ ಬೆಳೆಗೆ ಬೆಂಬಲ ಬೆಲೆ, ಅವರ ದವಸ ಧಾನ್ಯಗಳನ್ನು ಖರೀದಿಸಿದ ಸರ್ಕಾರದ ಸಂಸ್ಥೆಗಳು ಅವರಿಗೆ ಶೀಘ್ರ ಹಣಪಾವತಿ ಮಾಡುವ ಕೆಲಸ ಮಾಡಿದರೆ ರೈತರಿಗೆ ಅನುಕೂಲ ಮಾಡಿದಂತಾಗುತ್ತದೆ. ಇಲ್ಲದಿದ್ದಲ್ಲಿ ವ್ಯವಸಾಯ ಮಾಡಲು ಮುಂದೆ ಯಾರೊಬ್ಬರು ಬರುವುದಿಲ್ಲ ಎಂದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ನಾಹೀದಾ ಜಮ್ ಜಮ್, ಗ್ರೇಡ್-೨ ತಹಶೀಲ್ದಾರ್ ನರಸಿಂಹಮೂರ್ತಿ, ಅರಣ್ಯ ಅಧಿಕಾರಿ ಸುರೇಶ್, ಕೃಷಿ ಅಧಿಕಾರಿ ನಾಗರಾಜು, ಎಇಇ ರವಿಕುಮಾರ್, ಬಗರ್ ಹುಕ್ಕುಂ ಸಮಿತಿಯ ಸದಸ್ಯರಾದ ಹೇಮಲತಾ, ಹನುಮಂತರಾಜು, ದೇವರಾಜು ಉಪತಹಶೀಲ್ದಾರ್‌ಗಳಾದ ಮಧುಚಂದ್ರ, ಎ.ಜಿ. ರಾಜು, ಮಹೇಶ್, ಕಂದಾಯ
ಇಲಾಖಾಧಿಕಾರಿಗಳಾದ ಪ್ರತಾಪ್, ಅರುಣ್‌ಕುಮಾರ್, ಜಯಪ್ರಕಾಶ್, ಪವನ್‌ಕುಮಾರ್, ಬಸವರಾಜು, ರಾಖೇಶ್, ರಘು, ಮಾಜಿ ಜಿ.ಪಂ.ಸದಸ್ಯ ಪ್ರಸನ್ನಕುಮಾರ್, ಪ.ಪಂ ಸದಸ್ಯ ಎ ಡಿ ಬಲರಾಮಯ್ಯ, ಸೇರಿದಂತೆ ಇತರರು ಹಾಜರಿದ್ದರು.

ಹುಕ್ಕುಂ ಸಾಗುವಳಿದಾರರಿಗೆ ಸಾಗುವಳಿ ಮತ್ತು
ಹಕ್ಕುಪತ್ರಗಳನ್ನು ಶಾಸಕ ಡಾ.ಜಿ.ಪರಮೇಶ್ವರ್
ವಿತರಿಸಿದ್ದರು. ತಹಶೀಲ್ದಾರ್ ನಾಹೀದಾ ಜಮ್ ಜಮ್ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿ ವರ್ಗ ಹಾಗೂ ಸಾಗುವಳಿ ಪತ್ರ, ಪಿಂಚಣಿ ಪ್ರಮಾಣ ಪತ್ರ, ಪಡೆದುಕೊಳ್ಳುವ ಫಲಾನುಭವಿಗಳು ಹಾಜರಿದ್ದರು..

ವರದಿ ಹರೀಶ್ ಬಾಬು ಬಿ. ಹೆಚ್ ಕೊರಟಗೆರೆ

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!