ತುರುವೇಕೆರೆ ಕ್ಷೇತ್ರಕ್ಕೆ 350 ಕೋಟಿ ರೂಗಳ ಅಭಿವೃದ್ದಿ ಕೆಲಸ ಶೀಘ್ರದಲ್ಲಿ ಮಂಜೂರು : ತುರುವೇಕೆರೆ ಶಾಸಕ ಮಸಾಲಾ ಜಯರಾಮ್ ಭರವಸೆ

ಗುಬ್ಬಿ: ತುರುವೇಕೆರೆ ಕ್ಷೇತ್ರದಲ್ಲಿ ಈಗಾಗಲೇ ಸಾಕಷ್ಟು ಅಭಿವೃದ್ದಿ ಕೆಲಸ ಮಾಡಿದ್ದು, ಶೀಘ್ರದಲ್ಲಿ 350 ಕೋಟಿ ರೂಗಳ ವಿಶೇಷ ಅನುದಾನ ಸರ್ಕಾರದಿಂದ ಮಂಜೂರು ಮಾಡಿಸುವ ಭರವಸೆ ತುರುವೇಕೆರೆ ಶಾಸಕ ಮಸಾಲಾ ಜಯರಾಮ್ ತಿಳಿಸಿದರು ನೀಡಿದರು.

ತಾಲ್ಲೂಕಿನ ಸಿ.ಎಸ್.ಪುರ ಹೋಬಳಿ ಮಣೆಕುಪ್ಪೆ ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿ ದೇವಾಲಯ ಅಭಿವೃದ್ದಿ ಹಾಗೂ ಕುಣಿಗಲ್ ತಾಲ್ಲೂಕು ಗಡಿ ಸಿಂಗೋನಹಳ್ಳಿ ವರೆಗೆ ರಸ್ತೆ ಅಭಿವೃದ್ದಿ ಕಾಮಗಾರಿಗೆ ಪೂಜೆ ಸಲ್ಲಿಸಿ ಮಾತನಾಡಿದ ಅವರು ಕ್ಷೇತ್ರದಲ್ಲಿ 300 ಗ್ರಾಮದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಪಟ್ಟಿ ತರಿಸಲಾಗಿದೆ. ಮುಂದಿನ ಮಾರ್ಚ್ ಮಾಹೆಯಲ್ಲಿ ಸಂಪೂರ್ಣ ಕೆಲಸ ಮಾಡುವ ಮೂಲಕ ತಮ್ಮ ಸೇವೆ ಮಾಡುತ್ತೇನೆ ಎಂದರು

ಸಿ.ಎಸ್.ಪುರ ಹೋಬಳಿಯಲ್ಲಿ ಜನರಿಗೆ ಕೊಟ್ಟ ಮಾತಿನಂತೆ ಅಭಿವೃದ್ದಿ ಕೆಲಸ ಮಾಡಿದ್ದೇನೆ. ಜನರ ಅಪೇಕ್ಷೆಯಂತೆ ಕೆಲಸ ಮಾಡಿ ಮೆಚ್ಚುಗೆ ಪಾತ್ರವಾಗಿದ್ದೇನೆ ಎಂದ ಅವರು ಪಕ್ಕದ ತಾಲ್ಲೂಕು ಗಡಿ ಭಾಗದ ರಸ್ತೆಗಳು ಹಾಗೂ ಗಡಿ ಗ್ರಾಮದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿರುವ ಬಗ್ಗೆ ತಿಳಿಸಿದರು.

ಹೇಮಾವತಿ ನೀರು ಹರಿಸುವ ವಿಚಾರದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಕಳೆದ ಹದಿನೈದು ವರ್ಷದಿಂದ ತುಂಬಿರದ ಎಲ್ಲಾ ಕೆರೆಗಳು ಭರ್ತಿಯಾಗಿವೆ. ಮಳೆಯು ಸಹ ನಮಗೆ ಆಶೀರ್ವಾದ ಮಾಡಿದೆ. ಸತತ ಮೂರು ವರ್ಷದಿಂದ ಸುರಿದ ಮಳೆ ಈ ಬಾರಿ ರೈತರಲ್ಲಿ ಹರ್ಷ ತಂದಿದೆ. ಕೃಷಿ ಚಟುವಟಿಕೆ ನಡೆಸಲು ಬೇಸಿಗೆಯಲ್ಲಿ ನೀರು ಬಿಡುವ ಚಿಂತನೆ ಸರ್ಕಾರದ ಮುಂದಿದೆ. ಮುಂದಿನ ಬೇಸಿಗೆಯಲ್ಲಿ ರೈತರು ನೀರು ಮಿತವಾಗಿ ಬಳಸಿ ಅಲ್ಪಾವಧಿಯ ಬೆಳೆ ಬೆಳೆಯಲು ಮನವಿ ಮಾಡಿದರು.

ಗ್ರಾಮೀಣ ಭಾಗದ ಕಷ್ಟದ ಬಗ್ಗೆ ಅರಿವು ಇದ್ದ ಕಾರಣ ಜನರ ಬೇಡಿಕೆಗೆ ಮುನ್ನ ಕೆಲಸ ಮಾಡಿದ್ದೇನೆ. ಗಡಿ ಗ್ರಾಮ ಮಣೆಕುಪ್ಪೆಯಲ್ಲಿ ಅಗತ್ಯ ಸಿಸಿ ರಸ್ತೆ ಹಾಗೂ ಕುಣಿಗಲ್ ಸಂಪರ್ಕಿಸುವ ರಸ್ತೆ ಅಭಿವೃದ್ದಿಗೆ ಹೆಚ್ಚು ಗಮನ ನೀಡಿದ್ದು 85 ಲಕ್ಷ ರೂಗಳ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಹೋಬಳಿಯಲ್ಲಿ 5 ಕೋಟಿ ರೂಗಳ ಕೆಲಸ ಈಗಾಗಲೇ ಚಾಲನೆ ನೀಡಿ ಹೋಬಳಿಯಲ್ಲಿ 35 ಕೋಟಿ ಕೆಲಸಕ್ಕೆ ಚಾಲನೆ ಸಿಗಲಿದೆ. ಈ ನಿಟ್ಟಿನಲ್ಲಿ ಬಹುತೇಕ ಗ್ರಾಮದಲ್ಲಿ ಸಿಸಿ ರಸ್ತೆ ನಿರ್ಮಿಸಲಾಗಿದೆ ಎಂದರು.

ಮಾವಿನಹಳ್ಳಿ ಗ್ರಾಪಂ ಅಧ್ಯಕ್ಷ ಲೋಕೇಶ್, ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ವೆಂಕಟೇಶ್, ತಾಪಂ ಮಾಜಿ ಸದಸ್ಯರಾದ ಭಾನುಪ್ರಕಾಶ್, ಚಂದ್ರೇಗೌಡ, ತಾ.ಪಂ ಮಾಜಿ ಅಧ್ಯಕ್ಷ ಗೋವಿಂದರಾಜು, ಗುತ್ತಿಗೆದಾರ ರಾಮಲಿಂಗೇಗೌಡ, ತಾಪಂ ಇಓ ಶಿವಪ್ರಕಾಶ್, ಪಿ ಡಿ ಓ ಮಂಜುಳಾ, ಗ್ರಾ.ಪಂ ಸದಸ್ಯ ಜನಾರ್ದನ್, ಮುಖಂಡರಾದ ಗೋವಿಂದೇಗೌಡ, ವಸಂತ್, ರಾಜೇನಹಳ್ಳಿ, ಜಾಲಿಹಳ್ಳಿ ಪ್ರಕಾಶ್, ಗೋಪಾಲ್ ಇನ್ನಿತರರು ಇದ್ದರು.
ವರದಿ: ಜಿ.ಆರ್.ರಮೇಶ ಗೌಡ, ಗುಬ್ಬಿ.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!