ಪಾವಗಡ ಗಡಿ ನಾಡಿಗೆ ಮತ್ತೊಂದು ಪ್ರಶಸ್ತಿ ಪಡೆದ ಕೀರ್ತಿ ಬುಡಕಟ್ಟು ವೈದ್ಯ ಕಾವಲಪ್ಪ ಸ್ವಾಮಿಗೆ ತಾಲೂಕಿಗೆ ಸಂತಸ

ಕರ್ನಾಟಕ ರಾಜ್ಯದ ಗಡಿ ತಾಲ್ಲೂಕು ಹಾಗೂ ಬರಪೀಡಿತ ಹಾಗೂ ಬಿಸಿಲು ನಾಡು ಎಂದು ಹೆಸರು ಹೊಂದಿರುವ ಪಾವಗಡ ತಾಲ್ಲೂಕು ವೈ ಏನ್ ಹೊಸಕೋಟೆ ಗೌಡತಿಮ್ಮನಹಳ್ಳಿ ಗ್ರಾಮದಲ್ಲಿ ಸುಮಾರು ಅರವತ್ತು ಎಪ್ಪತ್ತು ವರ್ಷಗಳಿಂದ ನಾಟಿ ಗಿಡಮೂಲಿಕೆ ಚಿಕಿತ್ಸೆ ಕೈ ಕಾಲು ಮುರಿದುಕೊಂಡವರಿಗೆ ಉಚಿತವಾಗಿ ಲಕ್ಷಾಂತರ ಜನರ ಪ್ರಾಣ ಉಳಿಸಿದ ವೈದ್ಯರಲ್ಲಿ ದೇವರ ರೂಪ ಕಂಡ ಕಾವಲಪ್ಪ ಸ್ವಾಮಿ ಎಂದು ಪ್ರಸಿದ್ಧಿ ಪಡೆದಿರುವ ಇವರು ಚಿಕಿತ್ಸೆ ಪಡೆದ ಅದೆಷ್ಟೋ ಮಂದಿ. ಇವರು ವೈದ್ಯ ಸೇವೆ ಸಲ್ಲಿಸಿದ್ದಾರೆ ಬಡತನ ಛಾಯೆ ಇದ್ದರು ಸಹ ತನ್ನ ಕುಟುಂಬದ ಪಾರಂಪರಿಕ ನಾಟಿ ಗಿಡಮೂಲಿಕೆ ಚಿಕಿತ್ಸೆ ಕೊಡುವ ಕಸುಬು ಬಿಡದೆ ತನ್ನ ತಂದೆಯಂತೆ ಇವಾಗ ಮಕ್ಕಳು ಕೂಡ ಈರಣ್ಣ ಗ್ರಾಮ ಪಂಚಾಯತ್ ಸದಸ್ಯ ಹಾಗೂ ಚಿಕ್ಕಮಗ ಮಂಜುನಾಥ್ ರವರು ಸಹ ತಂದೆಗೆ ಸಹಾಯ ಮಾಡುತ್ತ ಚಿಕಿತ್ಸೆ ಪಡೆಯಲು ಬಂದ ರೋಗಿಗಳಿಗೆ ತಂದೆ ಮಕ್ಕಳು ಕೈ ಮುರಿತ ಕಾಲು ಮುರಿತ ಸೊಂಟ ನೋವು ಮೊಣಕಾಲು ನೋವು ಮತ್ತು ಮತ್ತಿತರ ಮನುಷ್ಯನ ಭಾದೆಗಳಿಗೆ ಉಚಿತವಾಗಿ ಚಿಕಿತ್ಸೆ ಕೊಟ್ಟು ನಾಟಿ ಕಟ್ಟು ಕಟ್ಟಿ ಶಾಶ್ವತವಾಗಿ ಗುಣಮುಖವಾಗಲು ಕಾವಲಪ್ಪ ರವರು ಗಡಿನಾಡಿನ ವೈದ್ಯ ದೇವರಾಗಿದ್ದಾರೆ ಕರ್ನಾಟಕ ತಮಿಳುನಾಡು ಆಂಧ್ರಪದೇಶ ಕಡೆಗಳಿಂದ ಬಂದು ಜನ ಚಿಕಿತ್ಸೆ ಪಡೆಯುತ್ತಿದ್ದಾರೆ ಅಂತಹ ಕಾವಲಪ್ಪ ರವರ ಕಾರ್ಯವನ್ನು ಗಮನಿಸಿದ ಸರ್ಕಾರ ಮೊನ್ನೆ ನೆಡೆದ ಕನ್ನಡ ರಾಜ್ಯೋತ್ಸವದ ತಾಲ್ಲೂಕು ಪ್ರಶಸ್ತಿ ನೀಡಿ ಗೌರವಿಸಿದೆ ಮತ್ತು ತುಮಕೂರು ಗಾಜಿನ ಮನೆಯಲ್ಲಿ ಶನಿವಾರ ನೆಡೆದ ರಾಜ್ಯಮಟ್ಟದ ರಾಜವೀರ ಮದಕರಿ ನಾಯಕ ಜಯಂತಿಯ ಸಮಾವೇಶದಲ್ಲಿ ಬುಡಕಟ್ಟು ವೈದ್ಯಕೀಯ ಸೇವಾ ಕ್ಷೇತ್ರದಲ್ಲಿ ಅವರ ಸೇವೆಗಾಗಿ ರಾಜವೀರ ಮದಕರಿ ನಾಯಕ ಪ್ರಶಸ್ತಿ ನೀಡಿ ಗೌರವಿಸಿದೆ ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ .ಮಾಜಿ ಶಾಸಕ ಕೆ ಎನ್ ರಾಜಣ್ಣ ಶ್ರೀ ವಾಲ್ಮೀಕಿ ಸಂಜಯ್ ಕುಮಾರ್ ಸ್ವಾಮೀಜಿ . ಶಾಸಕ ಜ್ಯೋತಿ ಗಣೇಶ್ ಮಾಜಿ ಸಚಿವ ಜಯಚಂದ್ರ ಮುಂತಾದ ಗಣ್ಯರು ಪ್ರಶಸ್ತಿ ನೀಡಿ ಸನ್ಮಾನಿಸಿದರು. ಇಂತಹ ಸೇವಾ ಮನೋಭಾವ ಹೊಂದಿರುವ ಕಾವಲಪ್ಪ ರವರಿಗೆ ಸರ್ಕಾರ ಪ್ರೋತ್ಸಾಹ ಧನ ನೀಡಬೇಕು ಮತ್ತು ಮಸಶಾನ ನೀಡಿಬೇಕೆಂದು ತಾಲ್ಲೂಕಿನ ಜನತೆಯ ಹಾಗೂ ಜನಪ್ರತಿನಿಧಿಗಳು ಹರ್ಷ ವ್ಯಕ್ತಪಡಿಸಿದ್ದಾರೆ ಮಾಜಿ ಸಚಿವರು ಹಾಲಿ ಶಾಸಕರಾದ ಸನ್ಮಾನ್ಯ ಶ್ರೀ ವೆಂಕಟರಮಣಪ್ಪ ಮಾಜಿ ಶಾಸಕ ಕೆ.ಎಮ್. ತಿಮ್ಮರಾಯಪ್ಪ ಜಿಲ್ಲಾ ಪಂಚಾಯತ್ ಸದಸ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್ ವಿ ವೆಂಕಟೇಶ್ . ನಾಯಕ ನೌಕರ ಸಂಘದ ಅಧ್ಯಕ್ಷ ಎನ್ ಅನಿಲ್ ಕುಮಾರ್ .ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಗೌರಮ್ಮ ತಿಮ್ಮಯ್ಯ ಲೋಕೇಶ್ ಪಾಳೇಗಾರ ಸಾಹಿತಿ ಹೋಮನಾಗರಾಜ್ ಓಂಕಾರ್ ನಾಯಕ ಭಾಸ್ಕರ್ ನಾಯಕ ಬಲರಾಮ್ ಹಾಗೂ ಇನ್ನಿತರರು ಹರ್ಷ ವ್ಯಕ್ತಪಡಿಸಿ ಅಭಿನಂದನೆಗಳನ್ನು ತಿಳಿಸಿದ್ದಾರೆ

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!