ಸಂಸ್ಕಾರ ಕಲಿಸಿದ ಗುರುಗಳಿಗೆ ಗುರುವಂದನೆ


ಹೊಸಕೆರೆ : ಗುರುವಿಗೆ ಗೌರವ ನೀಡುವುದು ಪರಮಾತ್ಮನಿಗೆ ಅರ್ಪಿತವಾದಂತದ್ದು, ಮಾನವನ್ನು ದೇವಮಾನವನಾಗಿ ಮಾಡುವುದೆ ಶಿಕ್ಷಕ ಅಂಥಹ ಗುರುವಿಗೆ ಗುರುವಂದನೆ ಶ್ಲಾಘನೀಯ ಎಂದು ಗವಿಮಠ ಬೆಟ್ಟದಹಳ್ಳಿ ಶ್ರೀ ಚಂದ್ರಶೇಖರಸ್ವಾಮಿಜಿ ಹೇಳಿದರು.
ಶ್ರೀ ಗವಿಮಠ ಬೆಟ್ಟದಹಳ್ಳಿ ಮಠದಲ್ಲಿ ಭಾನುವಾರ ನಡೆದ ಹಳೆ ವಿದ್ಯಾರ್ಥಿಗಳ ಸಮಾಗಮ ಹಾಗೂ ಗುರುವಂದನಾ ಕಾರ್ಯಕ್ರವನ್ನು ಉದ್ದೇಶಿಸಿ ಮಾತನಾಡಿದ ಅವರು ಶಿಕ್ಷಣ ಕ್ಷೇತ್ರವು ಪರಮ ಪವಿತ್ರವಾದ ಕ್ಷೇತ್ರವಾಗಿದ್ದು ಶಿಕ್ಷಣ ಎಂದರೆ ಸಂಸ್ಕಾರ, ಸಂಸ್ಕಾರ ದಿಂದ ಜ್ಞಾನ, ಜ್ಞಾನ ಜ್ಯೋತಿಯ ಜೊತೆಗೆ ಸಂಸ್ಕಾರ ವ್ಯಕ್ತಿಯನ್ನು ಶಕ್ತಿ ವಂತನಾಗಿಸುವುದು.
ಗುರುವನ್ನು ಸನ್ಮಾನಿಸುವುದು ಗೌರವಿಸುವುದು ಪರಮಾತ್ಮನಿಗೆ ಅರ್ಪಿತವಾದಂತದ್ದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ವ್ಯವಸ್ಥೆಯಲ್ಲಿ ಶ್ರದ್ಧೆಯಿಂದ ಪಡೆದ ಶಿಕ್ಷಣ ಪ್ರತಿಯೊಬ್ಬರೂ ಜೀವನದ ಅಂತಿಮ ಘಟ್ಟದವರೆಗೂ ನೆನೆಯುವುದನ್ನು ಕಾಣುತ್ತೇವೆ
ಆಧ್ಯಾತ್ಮಿಕ ಲೌಕಿಕ ಜ್ಞಾನ ಮಠಗಳಿಂದ ಮಾತ್ರ ಸಾಧ್ಯ ಪ್ರಪಂಚದಲ್ಲಿ ಗುರುವಿಲ್ಲದೆ ಸಾಧಿಸಿದ ವ್ಯಕ್ತಿಯನ್ನು ಕಾಣಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ಮೂರು ಶಾಲೆಗಳಿಂದ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು,
ಈ ಸಂದರ್ಭದಲ್ಲಿ ತೆವಡೇಹಳ್ಳಿ ಗೋಸಲ ಚನ್ನಬಸವೇಶ್ವರ ಮಹಾಸ್ವಾಮಿಗಳು ಗೊಲ್ಲಹಳ್ಳಿ ಮಠಾಧ್ಯಕ್ಷರಾದ ವಿಭವ ವಿದ್ಯಾಶಂಕರ ಮಹಾಸ್ವಾಮೀಜಿ. ಗವಿಮಠ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ನಿರಂಜನ ಮೂರ್ತಿ, ಖಜಾಂಚಿ ನಂಜುಂಡಪ್ಪ, ಮುಖ್ಯ ಶಿಕ್ಷಕ ಸೋಮಶೇಖರ್, ಹಳೆ ವಿದ್ಯಾರ್ಥಿಗಳ ಸಂಘದ ಮುಖಂಡ ಬಿ ಆರ್ ಜೀವನ್, ರವಿಕುಮಾರ್, ನಿತೇಶ್, ಶರತ್ ಬೆಟ್ಟದಹಳ್ಳಿ ಹಾಗೂ ಕಾರ್ಯಕಾರಿ ಮಂಡಳಿಯ ಎಲ್ಲಾ ಸದಸ್ಯರುಗಳು ಹಾಜರಿದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!