ಮಾಜಿ ಶಾಸಕ ಗಂಗನುಮಯ್ಯನವರಿಗೆ ಟಿಕೆಟ್ ನೀಡುವಂತೆ ಒತ್ತಾಯ

:-

ಕೊರಟಗೆರೆ: 2023 ರ ಕೊರೆಟಗೆರೆ ವಿಧಾನ ಸಭಾ ಕ್ಷೇತ್ರ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಪಕ್ಷದಿಂದ ಮಾಜಿ ಶಾಸಕ‌ ಗಂಗನುಮಯ್ಯನವರಿಗೆ ಟಿಕೆಟ್ ನೀಡಬೇಕು ಎಂದು ಮಾದಿಗ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಕೆ.ಸಿ ಶಿವಣ್ಣ ಬಿಜೆಪಿ ಪಕ್ಷಕ್ಕೆ ಒತ್ತಾಯ ಮಾಡಿದರು.

ಭಾನುವಾರ ಪಟ್ಟಣದ ನವೀನ್ ಕಂಪರ್ಟ್ ನಲ್ಲಿ ಮಾದಿಗ ಜಾಗೃತಿ ಸಮಿತಿ ಸಮಿತಿಯಿಂದ ಏರ್ಪಡಿಸಲಾದ ಪತ್ರಿಕಾ ಗೋಷ್ಠಿ ಉದ್ದೇಶಿಸಿ ಮಾತನಾಡಿ, 2006 ರಿಂದಲೂ ಸಕ್ರೀಯವಾಗಿ ಬಿಜೆಪಿ ಪಕ್ಷವನ್ನು ಸಂಘಟಿಸುತ್ತಾ ಬಂದಿದ್ದು 2008ರ ಚುನಾವಣೆಯಲ್ಲಿ 33000 ಮತಗಳನ್ನ ಪಡೆದು ಶಾಸಕರಾಗಿದ್ದ ಸಮಯದಲ್ಲಿ ಮಧುಗಿರಿ ವಿಧಾನ ಸಭಾ ಕ್ಷೇತ್ರದಲ್ಲಿ ಅಭಿವೃದ್ಧಿಯ ಕೆಲಸಗನ್ನು ಮಾಡಿದ್ದು ಅವು ಇನ್ನೂ ಹಚ್ಚ ಹಸುರಾಗಿ ಇವೆ ಎಂದು ಹೇಳಿದರು.

ಕಳೆದ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹಾಲಿ ಸಂಸದರ ಜಿ.ಎಸ್ ಬಸವರಾಜು ರವರ ಗೆಲುವಿಗೆ ಗಂಗನುಮಯ್ಯನವರು ಪಾತ್ರ ಪ್ರಮುಖವಾಗಿದ್ದು ಮಧುಗಿರಿ ಮತ್ತು ಕೊರಟಗೆರೆ ಎರಡೂ ಕ್ಷೇತ್ರದದಲ್ಲೂ ಉತ್ತಮ ಸಂಘಟನೆಯನ್ನು ಮಾಡಿ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ದರು, ಆದ್ದರಿಂದ ಪಕ್ಷವು ಅವರ ಶ್ರಮಕ್ಕೆ ತಕ್ಕ ಪ್ರತಿಫಲವನ್ನ ನೀಡಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಾದಿಗ ದಂಡೋರದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೆ.ಬಿ. ಸೀಬಯ್ಯ, ದಲಿತ ಜಾಗೃತಿ ಸಮಿತಿಯ ರಾಜ್ಯ ಸಂಘಟನಾ ಕಾರ್ಯದರ್ಶಿ ಸಿ. ಕೃ಼‍ಷ್ಣಪ್ಪ, ಡಿಎಸ್ಎಸ್ ತಾಲೂಕು ಸಂಚಾಲಕ ಎಂ. ಶಿವರಾಜು ಮುಖಂಡರಾದ ತೋವಿನಕೆರೆ ಲಕ್ಷ್ಮಿಪತಿ, ಪುರವರ ರಂಗಪ್ಪ, ಕೋಡಿಹಳ್ಳಿ ಕೃಷ್ಣಮೂರ್ತಿ ಸೇರಿದಂತೆ ಇತರರು ಇದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!