ಗ್ರಾಮೀಣ ಅಭಿವೃದ್ಧಿಗೆ ಒಗ್ಗಟ್ಟು ಪ್ರದರ್ಶನ ಅತ್ಯಗತ್ಯ : ಜಿಪಂ ಮಾಜಿ ಸದಸ್ಯ ಪಿ.ಬಿ.ಚಂದ್ರಶೇಖರಬಾಬು

ಗುಬ್ಬಿ: ಗ್ರಾಮೀಣ ಭಾಗದಲ್ಲಿ ವಿಧಿವತ್ತಾಗಿ ನಡೆಯುವ ಧಾರ್ಮಿಕಾಚರಣೆ ಗ್ರಾಮಗಳ ಅಭಿವೃದ್ಧಿಗೆ ಪೂರಕ ವೇದಿಕೆ ಒದಗಿಸುತ್ತಿದೆ. ಇಡೀ ಗ್ರಾಮವೇ ಅಲ್ಲಿ ನೆರೆದು ನಡೆಸುವ ಕಾರ್ಯದಲ್ಲಿ ಪಾಲ್ಗೊಳ್ಳುವ ಜನ ಪ್ರತಿನಿಧಿಗಳು ಕೆಲಸ ಕಾರ್ಯಗಳ ಭರವಸೆ ನೀಡುವುದು ಒಂದು ರೀತಿ ಅಭಿವೃದ್ಧಿಗೆ ಪ್ರೇರಣೆಯಂತಾಗಿದೆ ಎಂದು ಜಿಪಂ ಮಾಜಿ ಸದಸ್ಯ ಪಿ.ಬಿ.ಚಂದ್ರಶೇಖರಬಾಬು ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲ್ಲೂಕಿನ ಕಡಬ ಹೋಬಳಿ ಕರೇಗೌಡನಹಳ್ಳಿ ಗ್ರಾಮದಲ್ಲಿ ನಿರ್ಮಾಣವಾದ ನೂತನ ಶ್ರೀದೇವಿ ಭೂದೇವಿ ಸಮೇತ ಬೇಟೆರಾಯಸ್ವಾಮಿ ಸ್ಥಿರ ಬಿಂಬ ಪ್ರತಿಷ್ಠಾಪನೆ ಹಾಗೂ ಗಣಪತಿ, ಆಂಜನೇಯಸ್ವಾಮಿ ವಿಗ್ರಹ ಪ್ರತಿಷ್ಠಾಪನೆ ಮತ್ತು ಗರುಡಗಂಭ, ಗೋಪುರ ಕಳಸ ಪ್ರತಿಷ್ಠಾಪನೆ, ಕುಂಭಾಭಿಷೇಕ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಜಾತ್ಯತೀತ ನಿಲುವು ಗ್ರಾಮದ ದೇವಾಲಯದಲ್ಲಿ ಕಾಣುತ್ತಿದೆ. ಮನಸ್ಸಿಗೆ ಶಾಂತಿ ನೀಡುವ ದೇವಾಲಯಗಳ ಬಗ್ಗೆ ಭಕ್ತಿ ತೋರುವ ಮಂದಿ ಗ್ರಾಮದ ಉದ್ದಾರ ಮಾಡುವ ಕೆಲಸಗಳ ಬಗ್ಗೆ ಕೂಡಾ ಚಿಂತನೆ ಮಾಡುವ ಕೆಲಸ ಮಾಡಬೇಕಿದೆ ಎಂದರು.

ಗ್ರಾಮದಲ್ಲಿ ಅವಶ್ಯ ಸಿಸಿ ರಸ್ತೆಗಳು ಈಗಾಗಲೇ ನಿರ್ಮಾಣವಾಗಿದೆ. ಚುನಾಯಿತ ಪ್ರತಿನಿಧಿಗಳ ಬಳಿ ಗ್ರಾಮಕ್ಕೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಒಕ್ಕೊರಲಿನಲ್ಲಿ ಕೇಳಿ ಪಡೆಯಬೇಕು. ಗ್ರಾಮದ ದೇವರ ಬಗ್ಗೆ ಇರುವ ಪ್ರೀತಿ ಕೆಲಸ ಕಾರ್ಯಗಳ ಮೇಲೂ ಇರಬೇಕು. ಪಕ್ಷಾತೀತ ನಿಲುವು ತಾಳಿ ಅಭಿವೃದ್ದಿ ಕೆಲಸ ಮಾಡಿಸಬೇಕು. ಗ್ರಾಮದಲ್ಲಿ ಯಾವುದೇ ಭಿನ್ನಾಭಿಪ್ರಾಯಕ್ಕೆ ಆಸ್ಪದ ನೀಡದೆ ಒಗ್ಗೂಡಿ ಕೆಲಸ ಮಾಡಿಕೊಳ್ಳಲು ಕರೆ ನೀಡಿದರು.

ಈ ಸಂದರ್ಭದಲ್ಲಿ ಕೆಎಂಎಫ್ ನಿರ್ದೇಶಕ ಸಾಗರನಹಳ್ಳಿ ವಿಜಯ್ ಕುಮಾರ್, ಮುಖಂಡ ಸುರೇಶ್ ಇತರರು ಇದ್ದರು.
ವರದಿ: ಜಿ.ಆರ್.ರಮೇಶ ಗೌಡ, ಗುಬ್ಬಿ.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!