ಎಂ ಎನ್ ಕೋಟೆ : ಸಂಸದ ಜಿ.ಎಸ್.ಬಸವರಾಜುಗೆ ಅರಳು ಮರಳು ಅಗಿದೆ ಅದಕ್ಕೆ ಬಾಯಿಗೆ ಬಂದತೆ ಮಾತನಾಡುತ್ತಿದ್ದಾರೆ ಗುಬ್ಬಿ ತಾಲ್ಲೂಕಿಗೆ ಅವರ ಅಭಿವೃದ್ದಿ ಕೊಡುಗೆ ಶೂನ್ಯವಾಗಿದೆ ಎಂದು ಶಾಸಕ ಎಸ್ ಆರ್ ಶ್ರೀನಿವಾಸ್ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ಗುಬ್ಬಿ ತಾಲ್ಲೂಕಿನ ಬಂಡನಹಳ್ಳಿ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮನೆ ಮನೆ ನಳ ಸಂಪರ್ಕ ಕಾಮಾಗಾರಿಗೆ ಭೂಮಿಪೂಜೆ ಸಲ್ಲಿಸಿ ಮಾತನಾಡಿದ ಅವರು ಸಂಸದರ ಅಭಿವೃದ್ದಿ ನಮ್ಮ ತಾಲ್ಲೂಕಿನಲ್ಲಿ ಏನೀದೆ ಬಂದು ತೋರಿಸಲಿ ಅವರು ಅಭಿವೃದ್ದಿ ಮಾಡಿದ್ದಾರೆ ನಾನು ಮುಂದಿನ ಚುನಾವಣೆಯಲ್ಲಿ ಅರ್ಜಿ ಹಾಕುವುದಿಲ್ಲ ಎಂದು ಸಂಸದರ ವಿರುದ್ದ ಗುಡುಗಿದರು.
ಜೀವನದಲ್ಲಿ ಭಾರಿ ಸುಳು ಹೇಳಿಕೊಂಡು ಪ್ರಚಾರ ಮಾಡುತ್ತಿರುವುದು ನಾನು ಅಲ್ಲ ಸಂಸದರು ನಮ್ಮ ಜಿಲ್ಲೆಗೆ ,ತಾಲ್ಲೂಕಿಗೆ ಏನು ಮಾಡಿಲ್ಲ ಮೊದಲು ತಿಳಿದುಕೊಂಡು ಮಾತನಾಡಲಿ ನಾನು ಕ್ಷೇತ್ರದ ಶಾಸಕರಾಗಿ ಗುದ್ದಲಿ ಪೂಜೆ ಮಾಡುತ್ತಿದ್ದೇನೆ ನೀನು ಬಾ ಬಂದು ಮಾಡು ಯಾರು ಬೇಡ ಅಂದವರೇ ಎಂದು ಏಕವಚನದಲ್ಲಿ ಮಾತನಾಡಿದರು.
ನನ್ನನ ಕ್ಷೇತ್ರದ ಜನ ನಾಲ್ಕು ಭಾರಿ ಶಾಸಕರನ್ನಾಗಿ ಅಯ್ಕೆ ಮಾಡಿದ್ದಾರೆ ನಾನು ಕೆಲಸ ಮಾಡಿಲ್ಲ ಅಂದಿದ್ದಾರೆ ನಾನು ಎಂದು ಸೋತ್ತಿರುತ್ತಿದೆ ಜನ ಯಾರು ದಡ್ಡರಲ್ಲ ಎಲ್ಲವನ್ನೂ ಗಮನಹರಿಸುತ್ತಾರೆ ಮುಂದಿನ ಚುನಾವಣೆಯಲ್ಲಿ ಮತದಾರರು ಉತ್ತರ ಕೊಡುತ್ತಾರೆ ಎಂದ ಅವರು ಜೆಡಿಎಸ್ ಪಂಚರತ್ನ ರಥಯಾತ್ರೆ ಕುಮಾರಸ್ವಾಮಿನೇ ಬರಲಿ ದೇವೆಗೌಡರ ಬರಲಿ ಅದರ ಬಗ್ಗೆ ತಲೆಕೆಡಿಸಿಕೊಳಲ್ಲ ನನ್ನನ್ನು ಜೆಡಿಎಸ್ ಪಕ್ಷದಿಂದ ಹೊರಹಾಕಿದ ಮೇಲೆ ನಾನೇ ಯಾಕೆ ತಲೆ ಕೆಡಿಸಿಕೊಳಲ್ಲಿ ಅವರ ಪಕ್ಷ ಕಾರ್ಯಕ್ರಮ ಮಾಡಲಿ ಎಂದ ಅವರು ಜನವರಿ ತಿಂಗಳಿಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಕಾರ್ಯಕರ್ತರ ಸಭೆ ಕರೆದು ಮುಂದಿನ ನಿರ್ದಾರ ತೆಗೆದುಕೊಳುತ್ತೇನೆ ಎಂದು ತಿಳಿಸಿದರು.
ಇದೇ ಸಂಧರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರ್ವಮಂಗಳಮ್ಮ ಉಪಾಧ್ಯಕ್ಷ ಎಸ್ .ಕೆ.ಪ್ರಭಾಕರ್ , ಗ್ರಾಮ ಪಂಚಾಯಿತಿ ಸದಸ್ಯರಾದ ಎಸ್.ಶಂಕರಪ್ಪ, ಎಂ.ಡಿ.ದೊಡ್ಡಕೆಂಪಯ್ಯ , ಬಿ.ಆರ್. ಶಿವರಾಜು , ಬಿ.ಜಿ. ವೇಣುಗೋಪಾಲ್ , ಚಿದ್ದಾನಂದ್ , ಹೇಮಾವತಿ ಇಂಜಿನಿಯರ್ ಶಿವಣ್ಣ , ಪಿಡಿಓ ವಸಂತ್ , ಮುಖಂಡರಾದ ಮುರುಳಿಶೆಟ್ಟಿ , ಮೀಸೆ ನಾರಾಯಣಪ್ಪಪ, ಮಂಜಣ್ಣ , ಶಂಕರಪ್ಪ , ಕಿರಣ್ , ಗುತ್ತಿಗೆದಾರ ಮಹಾದೇವಯ್ಯ , ಹನುಮಂತರಾಜು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.