ಗ್ರಾಮದ ಗೋಮಾಳ ಜಮೀನು ಉಳಿಸಿಕೊಡುವಂತೆ : ಚಿಂದಿಗೆರೆ ಗ್ರಾಮಸ್ಥರಿಂದ ತಹಶೀಲ್ದಾರ್ ಬಿ.ಆರತಿ ಅವರಿಗೆ ಮನವಿ

ಗುಬ್ಬಿ: ತಾಲ್ಲೂಕಿನ ಚಿಂದಿಗೆರೆ ಗ್ರಾಮದ ಸರ್ವೆ ನಂಬರ್ 63/2 ರಲ್ಲಿ ಇರುವ 13.09 ಎಕರೆ ಪ್ರದೇಶದಲ್ಲಿ 6 ಎಕರೆ ವಸತಿ ಯೋಜನೆಗೆ, 2 ಎಕರೆ ಸ್ಮಶಾನಕ್ಕೆ ಮಂಜೂರಾಗಿ ಉಳಿದ 5.09 ಎಕರೆ ಜಮೀನು ಕಬಳಿಕೆ ಆಗಲಿದೆ. ಈ ನಿಟ್ಟಿನಲ್ಲಿ ಗ್ರಾಮಕ್ಕೆ ಈ ಗೋಮಾಳ ಉಳಿಸಿ ಸಾರ್ವಜನಿಕ ಕೆಲಸಕ್ಕೆ ಅನುವು ಮಾಡಬೇಕು ಎಂದು ಚಿಂದಿಗೆರೆ, ಕಗ್ಗರೆ, ಎಂಎಂಎ ಕಾವಲ್, ಬೋರಗೊಂಡನಹಳ್ಳಿ ಸುತ್ತಲಿನ ಗ್ರಾಮಸ್ಥರು ತಹಶೀಲ್ದಾರ್ ಬಿ.ಆರತಿ ಆವರಿಗೆ ಮನವಿ ಸಲ್ಲಿಸಿದರು.

ತಾಲ್ಲೂಕಿನ ಚೇಳೂರು ಗ್ರಾಮದಲ್ಲಿ ತಹಶೀಲ್ದಾರ್ ಅವರನ್ನು ಭೇಟಿ ಮಾಡಿದ ಗ್ರಾಮಸ್ಥರು ಉಳಿದ ಗೋಮಾಳ ಜಮೀನು ಸ್ಥಳೀಯ ದನಕರುಗಳಿಗೆ ಮೇವು ಒದಗಿಸುವ ಸ್ಥಳವಾಗಿದೆ. ಊರಿನ ಜನ ಇದನ್ನು ಉಳಿಸಿಕೊಳ್ಳಲು ಮಾವಿನ ಗಿಡವನ್ನು ನೆಟ್ಟು ಪೋಷಿಸಿದ್ದರೆ, ಕಳೆದ ಒಂದು ವರ್ಷದಿಂದ ನಾಲ್ಕೈದು ಮಂದಿ ಪ್ರಭಾವಿಗಳು ಈ ಜಮೀನು ನಮ್ಮದು ಎನ್ನುತ್ತಾ ಊರಿನವರನ್ನು ಬೆದರಿಸಿ ಕಬಳಿಕೆಗೆ ಮುಂದಾಗಿದ್ದಾರೆ. ಈ ಬಗ್ಗೆ ಎಲ್ಲಾ ಗ್ರಾಮಸ್ಥರ ವಿರೋಧವಿದೆ. ಈ ಜಮೀನು ಸಾರ್ವಜನಿಕ ಕೆಲಸಕ್ಕೆ ಬಳಕೆ ಮಾಡಲು ತಾಲ್ಲೂಕು ಆಡಳಿತ ನಿರ್ಧರಿಸಿ ಗ್ರಾಮಕ್ಕೆ ಮೀಸಲು ಇಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಧರಣೇಶ್, ಬಸವರಾಜು, ಸ್ಥಳೀಯರಾದ ಸಿದ್ದಪ್ಪ, ನರಸಿಂಹಯ್ಯ, ಗುರುಬಸವಣ್ಣ, ಚಿಕ್ಕತಿಮ್ಮಯ್ಯ, ನಾಗರಾಜು, ಕಂದಾಯ ನಿರೀಕ್ಷಕ ಆರ್.ಜಿ. ನಾಗಭೂಷಣ ಇತರರು ಇದ್ದರು.
ವರದಿ: ಜಿ.ಆರ್.ರಮೇಶ ಗೌಡ, ಗುಬ್ಬಿ.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!