ಡಿಸೆಂಬರ್ 3 ಮತ್ತು 4 ಕ್ಕೆ ಕಾರ್ ರೇಸ್


ಹಾಗಲವಾಡಿ : ಕರ್ನಾಟಕ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಕರ್ನಾಟಕ ಥೌಸಂಡ್ ಕಾರ್ ರೇಸ್ ಸುಮಾರು 46 ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ, ಅದರಲ್ಲಿ ಹೆಚ್ಚು ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕು ವ್ಯಾಪ್ತಿಯಲ್ಲಿ ನೆಡೆಸಿದ್ದೇವೆ, ಇಲ್ಲಿನ ಜನತೆಯ ಸಹಕಾರ ಚೆನ್ನಾಗಿದೆ ಈ ಬಾರಿಯೂ ಸಹಕಾರ ನೀಡುವಂತೆ ಕರ್ನಾಟಕ ಮೋಟರ್ಸ್ ಸ್ಪೋರ್ಟ್ಸ್ ಕ್ಲಬ್ ಉಪಾಧ್ಯಕ್ಷ ಭಾಸ್ಕರ್ ಗುಪ್ತ ಮನವಿ ಮಾಡಿದರು.
ಗುಬ್ಬಿ ತಾಲ್ಲೂಕಿನ ವಿರೋಪಾಕ್ಷಿ ಪುರದ ಎತ್ತಿನಹೊಳೆ ಆಪೀಸ್ ಆವರಣದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಅವರು ಡಿ.3 ಮತ್ತು 4 ಶನಿವಾರ ಭಾನುವಾರ ಎರಡು ದಿನಗಳ ಕಾಲ ಕಾರ್ ರೇಸ್ ನಡೆಯುತ್ತಿದ್ದು, ಸಾರ್ವಜನಿಕರು ಸಹಕಾರ ಕೊಡಬೇಕು ಈಗಾಗಲೇ ಪೋಲೀಸ್ ಇಲಾಖೆಗೂ ಮಾಹಿತಿ ನೀಡಿದ್ದು ಕಾರ್ ರ್ಯಾಲಿ ಮಾರ್ಗವಾಗಿ ಅಲ್ಲಲ್ಲಿ ಸೂಕ್ತ ಬಂದೂಬಸ್ತ್ ವಹಿಸಲಾಗಿದೆ. ತುಮಕೂರು ಜಿಲ್ಲೆಯಲ್ಲಿ 15 ವರ್ಷ ಈ ಕ್ರೀಡೆಯನ್ನು ನಡೆಸಿಕೊಂಡು ಬರುತ್ತಿದ್ದೇವೆ ಇದು ನ್ಯಾಷನಲ್ ಚಾಂಪಿಯನ್ ಶಿಪ್ ರ್ಯಾಲಿಯಾಗಿದೆ. ದೇಶದ ಹಲವಾರು ಭಾಗಗಳಿಂದ ಪ್ರತಿ ಸ್ಪರ್ಧೆಗಳು ಇದರಲ್ಲಿ ಭಾಗವಹಿಸುತ್ತಾರೆ ಇಡೀ ದೇಶದಲ್ಲಿ ಕರ್ನಾಟಕ ಥೌಸಂಡ್ ರ್ಯಾಲಿ ಎಂದರೆ ವಿಶೇಷವಾದ ಗೌರವವಿದೆ ಎಂದರು.ಕಾರ್ ರ್ಯಾಲಿಯಲ್ಲಿ ಸುಮಾರು 72 ಕಾರುಗಳು ಭಾಗವಹಿಸಲಿವೆ, ಮಹಿಳಾ ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಕೊಂಡ್ಲಿ , ಹತ್ಯಾಳ್ , ಶಿವಸಂದ್ರ , ಯಲ್ಲಾಪುರ , ಸಮುದ್ರನಕೋಟೆ , ನಾಗಲಾಪುರ , ಅದಲಗೆರೆ , ಗೊಲ್ಲರಹಟ್ಟಿ ಮಾರ್ಗವಾಗಿ ಕಾರ್ ರ್ಯಾಲಿ ಬರಲಿದ್ದು ಈ ಭಾಗಗಳಲ್ಲಿ ಸೂಕ್ತ ಬಂದೂಬಸ್ತ್ ವಹಿಸಲಾಗಿದೆ.ಎಂದು ತಿಳಿಸಿದರು.

ಇದೇ ಸಂಧರ್ಭದಲ್ಲಿ ಕ್ಲಬ್ ಸದಸ್ಯರಾದ ಸತ್ಯವೃತ್ತ ಗೌತಮ್ ಬುದ್ದ , ಪ್ರಕಾಶ್ , ಜಗಧೀಶ್ ಭಾಗವಹಿಸಿದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!