ಕೊರಟಗೆರೆ ಕ್ಷೇತ್ರದ ಆಧುನಿಕ ಅಂತರ್ಜಲ ಭಗೀರಥ ಸರಳತೆಯ ಸ್ನೇಹಜೀವಿ ಸಾಹುಕಾರ. ವಿಶೇಷ ಚೇತನರಿಗೆ ಮಿಡಿವ ಹೃದಯ 2023ರ ಚುನಾವಣೆಯಲ್ಲಿ
ಸುಧಾಕರಲಾಲ್ ಗೆಲುವು ಖಚಿತ
2013ರಲ್ಲಿ ಗೆದ್ದಾಗ 72,229ಮತ..
2018ರಲ್ಲಿ ಸೋತಾಗ 73,979ಮತ
ಕೊರಟಗೆರೆ:- ವಿಶೇಷ ಚೇತನರ ಬಾಳಿನ ಭಾಗ್ಯದಾತ. ಗ್ರಾಮೀಣ ರೈತರ ಪಾಲಿನ ಕಾಮಧೇನು. ಅಭಿವೃದ್ದಿಯ ದೂರದೃಷ್ಟಿಯುಳ್ಳ ಜನನಾಯಕ. ಸರಳತೆಯ ಸ್ನೇಹಜೀವಿ ಸಾಹುಕಾರ.. ಹೇಮಾವತಿ ನೀರಿನ ಹರಿಕಾರ.. ಆಧುನಿಕ ಅಂರ್ತಜಲ ಭಗೀರಥ ಕೊರಟಗೆರೆಯ ಹೆಮ್ಮೆಯ ಮನೆಮಗ ಸುಧಾಕರಲಾಲ್‌ರವರೇ ಕೊರಟಗೆರೆ ಕ್ಷೇತ್ರದ 2023ರ ವಿಧಾನಸಭಾ ಚುನಾವಣೆಯ ಜೆಡಿಎಸ್ ಅಭ್ಯರ್ಥಿವೆಂದು ರಾಷ್ಟಿçಯ ಅಧ್ಯಕ್ಷರಾದ ಹೆಚ್.ಡಿ.ದೇವೇಗೌಡರು ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಘೋಷಣೆ ಮಾಡಿದ ಮರುಕ್ಷಣವೇ ಸುಧಾಕರಲಾಲ್ ಗೆಲುವು ಬಹುತೇಕ ಖಚಿತವಾಗಿದೆ.
ಬಯಲುಸೀಮೆ ಪ್ರದೇಶವಾದ ಕೊರಟಗೆರೆ ಕ್ಷೇತ್ರದಲ್ಲಿ ಹುಟ್ಟಿಬೆಳೆದ ಜನನಾಯಕ ಪಿ.ಆರ್.ಸುಧಾಕರಲಾಲ್‌ಗೆ ಗ್ರಾಮೀಣ ಜನರು ಚಿರಾಪರಿಚಿತ. 1ಗ್ರಾಮದ ಹೆಸರು ಹೇಳಿದ್ರೇ ಸಾಕು 10 ಜನರ ಹೇಳುವ ನಿಜವಾದ ಜನನಾಯಕ ಹಗಲುರಾತ್ರಿ ಎನ್ನದೇ ಬಡಜನರ ಸೇವೆಗೆ ಟೊಂಕಕಟ್ಟಿ ನಿಂತಿದ್ದಾರೆ. 15ವರ್ಷ ಜಿಪಂ ಸದಸ್ಯನಾಗಿ, 5ವರ್ಷ ಶಾಸಕನಾಗಿ ಸೇವೆ ಸಲ್ಲಿಸಿದ ನಂತರವು ಮತದಾರ ಪ್ರಭುಗಳ ಆಜ್ಞೆಯಂತೆ 2018ರಲ್ಲಿ ಸೋತ ನಂತರವು 1ದಿನವು ಕೊರಟಗೆರೆ ಕ್ಷೇತ್ರದಿಂದ ಹೊರಗೆ ಉಳಿಯದೇ ಜನರ ಸಂಕಷ್ಟಕ್ಕೆ ಜೊತೆಯಾಗಿ ಪ್ರತಿದಿನವು ಬಡಜನರ ಸೇವೆಯಲ್ಲಿ ತೊಡಗಿರುವುದೇ ಗೆಲುವಿಗೆ ಮತ್ತಷ್ಟು ಶಕ್ತಿಯಾಗಿದೆ. 65ಕೋಟಿ ವೆಚ್ಚದ ಚೆಕ್‌ಡ್ಯಾಂ ಕಂ ಬ್ರೀಡ್ಜ್ ಸಿದ್ದರಬೇಟ್ಟ ತಪ್ಪಲಿನಲ್ಲಿ ಹುಟ್ಟಿ ಹರಿಯುವ ಸುವರ್ಣಮುಖಿ ನದಿಗೆ ಅಡ್ಡಲಾಗಿ ಗುಂಡಿನಪಾಳ್ಯ, ಕತ್ತಿನಾಗೇನಹಳ್ಳಿ, ತಗ್ಗಿಹಳ್ಳಿ, ಕೊಡಗದಾಲ, ಚನ್ನಸಾಗರ, ಪುರವಾರ, ಬಡಚೌಡನಹಳ್ಳಿ ಬಳಿ 25ಕೋಟಿ ವೆಚ್ಚದ ಚೆಕ್‌ಡ್ಯಾಂ ಕಂ ಬ್ರೀಡ್ ನಿರ್ಮಾಣ. ಸುವರ್ಣಮುಖಿ ಮತ್ತು ಜಯಮಂಗಲಿ ನದಿಗೆ ಸೇರುವ ಮಳೆನೀರಿಗೆ ಅಡ್ಡಲಾಗಿ 40ಕೋಟಿ ವೆಚ್ಚದಲ್ಲಿ 65ಚೆಕ್‌ಡ್ಯಾಂಗಳ ನಿರ್ಮಾಣವಾಗಿದೆ. ಗಂಗಾಕಲ್ಯಾಣ ಯೋಜನೆಯಡಿ 5ವರ್ಷದ ಅವಧಿಯಲ್ಲಿ 760ಕ್ಕೂ ಹೆಚ್ಚು ರೈತರ ಜಮೀನಿನಲ್ಲಿ ಕೊಳವೆಬಾಯಿ ಕೊರೆಸಿ ರೈತರಿಗೆ ಮೋಟಾರು ಪಂಪು ವಿತರಿಸಿದ ರೈತನಾಯಕ. ಸಮಗ್ರ ಅಭಿವೃದ್ದಿ ದೂರದೃಷ್ಟಿಯುಳ್ಳ ಜನನಾಯಕ ಕೊರಟಗೆರೆ ಕ್ಷೇತ್ರದ 6 ಹೋಬಳಿಯ 356ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸುಮಾರು 160ಕೀಮೀ ರಸ್ತೆಗೆ 75ಕೋಟಿ ವೆಚ್ಚದ ಅಭಿವೃದ್ದಿಯ ಕಾಮಗಾರಿ ಆಗಿದೆ. ಗ್ರಾಮೀಣ ಪ್ರದೇಶದಲ್ಲಿ ಸಿಸಿರಸ್ತೆ,ಮತ್ತು ಚರಂಡಿ ನಿರ್ಮಾಣಕ್ಕಾಗಿ ಎತ್ತಿನಹೊಳೆ ಯೋಜನೆಯಡಿ 65ಕೋಟಿ ವೆಚ್ಚದ ಅನುಧಾನ ತಂದು ನೂರಾರು ಗ್ರಾಮದ ಅಭಿವೃದ್ದಿ ಕೆಲಸಗಳೇ ಇವರ ಹೆಸರನ್ನು ಹೇಳುತ್ತಿವೆ. ನೂರಾರು ಕೋಟಿ ವೆಚ್ಚದಲ್ಲಿ ಸರಕಾರಿ ಶಾಲೆ, ಕಾಲೇಜು, ಅಂಗನವಾಡಿ ಕೇಂದ್ರ, ಶುದ್ದ ಕುಡಿಯುವ ನೀರಿನ ಘಟಕ ಮತ್ತು ಸುಸರ್ಜಿತ ಶೌಚಾಲಯ ನಿರ್ಮಿಸಿ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಶ್ರಮಿಸಿದ್ದಾರೆ.

ಕೊರಟಗೆರೆ ಕ್ಷೇತ್ರಕ್ಕೆ ಹೇಮಾವತಿ ನೀರಿನ ಹರಿಕಾರ ವಿರೋಧ ಪಕ್ಷದ ಶಾಸಕನಾಗಿ ಹೇಮಾವತಿ ನೀರು ಕೊರಟಗೆರೆ ಕ್ಷೇತ್ರದ ಮಣುವಿನಕುರಿಕೆ ಮತ್ತು ಜೆಟ್ಟಿಅಗ್ರಹಾರ ಕೆರೆಗಳಿಗೆ ಹರಿಸುವಲ್ಲಿ ಪ್ರಮುಖಪಾತ್ರ ವಹಿಸಿರುವ ರೈತರ ಪಾಲಿನ ಕಾಮಧೇನು ಸುಧಾಕರಲಾಲ್. ಎಲೆಮರಿ ಕಾಯಿಯಂತಿರುವ ಲಾಲ್‌ರವರ ನೂರಾರು ಅಭಿವೃದ್ದಿ ಕೆಲಸಗಳೇ ಕನ್ನಡಿಯಂತಿವೆ. ಕೊರಟಗೆರೆ ಕ್ಷೇತ್ರದ ದೂರದೃಷ್ಟಿಯುಳ್ಳ ರೈತನಾಯಕನಾಗಿ ರೈತಪರ ಯೋಜನೆ, ರೈತರಿಗೆ ಸರಕಾರದ ಅನುಧಾನ ಮತ್ತು ಅಂತರ್ಜಲ ಅಭಿವೃದ್ದಿ ಪಡಿಸುವಲ್ಲಿ ಕೈಗೊಂಡ ಕೆಲಸಗಳೇ ಇಂದು ಸಾಕ್ಷಿಯಾಗಿ ಉಳಿದಿದೆ ಎಂದರೇ ತಪ್ಪಾಗದು.850ಜನ ರೈತರಿಗೆ ಜಮೀನು ಹಕ್ಕುಪತ್ರ..3 ಸಲ ಜಿಪಂ ಸದಸ್ಯನಾದ ವೇಳೆ ರೈತರ ಪ್ರಮುಖ ಬೇಡಿಕೆಯನ್ನು ಅರಿತ ಪಿ.ಆರ್.ಸುಧಾಕರಲಾಲ್ 2013-14ರಲ್ಲಿ ಶಾಸಕನಾಗಿ ಆಯ್ಕೆಯಾದ ಮರುಕ್ಷಣವೇ ಮಾಡಿದ ಕೆಲಸವೇ ರೈತರಿಗೆ ಸಾಗುವಳಿ ಚೀಟಿ ನಿಡೋದು.

ಕೊರಟಗೆರೆ, ಮಧುಗಿರಿ ಮತ್ತು ತುಮಕೂರು ಗ್ರಾಮಾಂತರದ ಅಧಿಕಾರಿಗಳ ಜೊತೆಗೂಡಿ ಪುರವಾರ, ಕೋಳಾಲ, ಹೊಳವನಹಳ್ಳಿ, ಕಸಬಾ, ಚನ್ನರಾಯನದುರ್ಗ, ಸಿ.ಟಿ.ಕೆರೆ ಜಿಪಂ ಕ್ಷೇತ್ರದ ಸುಮಾರು 900ಜನ ರೈತರ ಜಮೀನಿಗೆ ತೆರಳಿ ಜಮೀನಿನ ಸಾಗುವಳಿ ಪತ್ರ ನೀಡಿದ ಕೀರ್ತಿ ಲಾಲ್‌ರದ್ದು. ರೈತರ ಕೆಲಸಕ್ಕಾಗಿ ಮಧ್ಯರಾತ್ರಿ 10ಗಂಟೆವರೇಗೆ ಅಧಿಕಾರಿಗಳ ಬೆಂಬಿಡದೇ ಕೆಲಸ ಮಾಡಿಸಿರುವ ರೈತಪರ ನಾಯಕ.
35ಸಾವಿರ ಜನರಿಗೆ ಆರೋಗ್ಯ ಸೇವೆ ಬಡಜನರ ಆರೋಗ್ಯ ರಕ್ಷಣೆಯ ವಿಚಾರದಲ್ಲಿ ಮಾಜಿ ಶಾಸಕರಾದ ಸುಧಾಕರಲಾಲ್‌ಗಿಂತ ಕಾಳಜಿ ವಹಿಸಿದವರು ಮತ್ತೋಬ್ಬರಿಲ್ಲ ಎನ್ನುವುದಕ್ಕೆ 35ಸಾವಿರಕ್ಕೂ ಅಧಿಕ ಜನರಿಗೆ ಅವರು ನೀಡಿರುವ ಆರೋಗ್ಯ ಸೇವೆಯೇ ಸಾಕ್ಷಿ. 13ವರ್ಷ ಜಿಪಂ ಸದಸ್ಯ ಮತ್ತು 5ವರ್ಷ ಶಾಸಕನಾಗಿ 350ಕ್ಕೂ ಅಧಿಕ ಆರೋಗ್ಯ ಶಿಭಿರಗಳನ್ನು ಆಯೋಜಿಸಿ 15ಸಾವಿರಕ್ಕೂ ಅಧಿಕ ಜನರ ಕಣ್ಣಿನ ಶಸ್ತçಚಿಕಿತ್ಸೆ ಮತ್ತು 20ಸಾವಿರಕ್ಕೂ ಅಧಿಕ ಜನರಿಗೆ ಆರೋಗ್ಯ ಶಿಭಿರದಲ್ಲಿ ಗರ್ಭಕೋಶ, ಕಿಡ್ನಿದೋಷ, ಹೃದಯ ಸಂಬAಧಿ ಚಿಕಿತ್ಸೆ. ಪಟ್ಟಣ ಮತ್ತು ಗ್ರಾಮೀಣದಲ್ಲಿ ಪ್ರತಿ ತಿಂಗಳು ಆರೋಗ್ಯ ಶಿಭಿರ ಆಯೋಜಿಸಿ ಬಡಜನರ ಸೇವೆಯ ಪ್ರತಿಫಲವಾಗಿ ರಾಜ್ಯ ಮಟ್ಟದ ಉತ್ತಮ ಸೇವಾ ಪ್ರಶಸ್ತಿಗೆ ಭಾಜನರಾದ ಹೆಮ್ಮ ಇವರದ್ದಾಗಿದೆ.
170ಜನ ವಿಶೇಷ ಚೇತನರಿಗೆ ತ್ರೀಚಕ್ರ ವಾಹನ ಕೊರಟಗೆರೆ ಕ್ಷೇತ್ರದ ಮನೆಮಾತಾಗಿರುವ ಸುಧಾಕರಲಾಲ್ ಶಾಸಕರ ೫ವರ್ಷದ ಅವಧಿಯಲ್ಲಿ ತಮ್ಮ ವಿಶೇಷ ಅನುಧಾನ ಬಳಸಿ ವಿಶೇಷ ಚೇತನರ ಅನುಕೂಲಕ್ಕಾಗಿ ವಿಶೇಷ ಆಧ್ಯತೆ ನೀಡುವ ಮೂಲಕ 170ಕ್ಕೂ ಅಧಿಕ ವಿಶೇಷ ಚೇತನರಿಗೆ ತ್ರಿಚಕ್ರ ವಾಹನ ವಿತರಣೆ ಮಾಡಿದ ರಾಜ್ಯದ ಮೊದಲ ಶಾಸಕ. ಇದಲ್ಲದೇ ಕೊರಟಗೆರೆ ಕ್ಷೇತ್ರದ ಪ್ರತಿಯೊಂದು ಗ್ರಾಮದಲ್ಲಿಯು ಹಿರಿಯ ನಾಗರೀಕರನ್ನು ಗುರುತಿಸಿ ಪಿಂಚಣಿ ವ್ಯವಸ್ಥೆ ಮಾಡಿಸಿ ಗ್ರಾಮೀಣದ ಸಮಸ್ಯೆಯ ಬೇನ್ನತ್ತಿ ಅಧಿಕಾರಿಗಳ ಜೊತೆ ಸ್ಥಳದಲ್ಲಿಯೇ ಪರಿಹಾರ ನೀಡುವಂತಹ ಇವರ ಪ್ರಯತ್ನವು ಯಶಸ್ವಿಕಂಡಿದೆ.

ಸರಳತೆಗೆ ಮತ್ತೊಂದು ಹೆಸರೇ ಲಾಲ್.
ನಾನು ಜನರಿಂದ ಬೆಳೆದು ಬಂದವನು ಅಧಿಕಾರದಲ್ಲಿ ಇರಲಿ ಇಲ್ಲದಿರಲಿ ಸದಾ ಸರಳವಾಗಿಯೇ ಜನರಿಗೆ ಹತ್ತಿರದಲ್ಲಿಯೇ ಇರುತ್ತೇನೆಂದು ದೃಡ ಸಂಕಲ್ಪ ಮಾಡಿದವನಂತೆ ಬದುಕುತ್ತೀದ್ದಾರೆ ಸುಧಾಕರಲಾಲ್. ೨೨೪ಶಾಸಕರಲ್ಲಿ ಇವರಷ್ಟು ಸರಳತೆಯಿಂದ ಇರುವ ಮತ್ತೋಬ್ಬ ಶಾಸಕರನ್ನು ನಾವು ಕಾಣಲು ಸಾಧ್ಯವೇ ಇಲ್ಲ. ತಾನು ಶಾಸಕನಾಗಿ ಯಾವುದೇ ಹಮ್ಮುಬಿಮ್ಮು ಇಲ್ಲದೇ ಒಬ್ಬ ಚಿಕ್ಕ ಹುಡುಗ ತನ್ನ ಕಾರಿಗೆ ಅಡ್ಡಕಟ್ಟಿದರೂ ಸಹ ತಮ್ಮ ಕಾರನ್ನು ನಿಲ್ಲಿಸಿ ತುಂಬಾ ತಾಳ್ಮೆಯಿಂದ ಸಮಸ್ಯೆಯನ್ನು ಆಲಿಸುವ ಸರಳತೆಯ ಜನನಾಯಕ ಲಾಲ್ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ.ಆರೋಗ್ಯ ಕ್ಷೇತ್ರಕ್ಕೆ ಸದಾ ಮಿಡಿವ ಹೃದಯ ಇಡೀ ಪ್ರಪಂಚವನ್ನೇ ಬೆಂಬಿಡದAತೆ ಆವರಿಸಿರುವ ಕೊರೊನಾ ಮಹಾಮಾಹೆಯ ಸಂಕಷ್ಟದ ಸಂದರ್ಭದಲ್ಲಿ ಸುಧಾಕರಲಾಲ್ ಕ್ಷೇತ್ರದಾಧ್ಯಂತ ಸಂಚರಿಸುತ್ತಾ ಸೊಂಕಿತರಿಗೆ ಧೈರ್ಯವನ್ನು ತುಂಬುತ್ತಾ ವಿದ್ಯಾರ್ಥಿಗಳಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಿಸಿ ಕೊರೊನಾ ರೋಗ ಹರಡುವಿಕೆ ತಡೆಯುವಲಿ ಎಲೆಮರಿ ಕಾಯಿಯಂತೆ ಕಾಲಿಗೆ ಚಕ್ರಕಟ್ಟಿಕೊಂಡು ಸುತ್ತಿದ್ದಾರೆ.

ತನ್ನ ಕುಟುಂಬದವರು ತೀರಿಕೊಂಡಾಗ ಸಾಮಾಜಿಕ ಬದ್ದತೆಯಿಂದ ಕೆಲಸ ಮಾಡಿ ತೊರಿಸಿದ್ದಾರೆ. ಆಸ್ಪತ್ರೆಯ ಸಿಬ್ಬಂದಿಗಳಿಗೆ ಬೇಕಾದ ವೈದ್ಯಕೀಯ ಕಿಟ್, ರೋಗಿಗಳಿಗೆ ಬೇಕಾದ ಔಷಾಧಿ ಮತ್ತು ಸಾವಿರಾರು ಬಡಜನರಿಗೆ ಅವಶ್ಯಕತೆ ಇರುವ ಆಹಾರದ ಕಿಟ್‌ಗಳನ್ನು ವಿತರಣೆ ಮಾಡಿದ್ದಾರೆ. 3ನೇ ಅಲೆಗೆ
ಅವಶ್ಯಕತೆ ಇರುವ ಆಮ್ಲಜನಕದ ಪರಿಕರವನ್ನು ಆಸ್ಪತ್ರೆಗೆ ಈಗಾಗಲೇ ಹಸ್ತಾಂತರ ಮಾಡಿರುವ ಕೀರ್ತಿ ಲಾಲ್‌ರವರದ್ದಾಗಿದೆ.
ಕೊರಟಗೆರೆ ಕ್ಷೇತ್ರದ ನಾಲ್ಕು ದಿಕ್ಕಿನಲ್ಲಿಯು 3ಸಲ ಜಿಪಂ ಸದಸ್ಯನಾಗಿ ಸೇವೆ ಸಲ್ಲಿಸಿದ ಅನುಭವ ಇರುವಂತಹ ಸರಳತೆಯ ಸ್ನೇಹಜೀವಿ ಪಿ.ಆರ್.ಸುಧಾಕರಲಾಲ್ 2013ರಲ್ಲಿ ಗೆಲುವು ಸಾಧಿಸಿದಾಗ 72,229ಸಾವಿರ ಮತ ಪಡೆದು 18ಸಾವಿರ ಅಂತರದ ಜಯ ಗಳಿಸಿದ್ದರು. 2018ರಲ್ಲಿ ಮತ್ತೇ ಸ್ಪರ್ಧಿಸಿ ಸೋತಾಗ 73,979ಸಾವಿರ ಮತ ಪಡೆದು ಸೋಲಿನಲ್ಲೂ ಗೆಲುವು ದಾಖಲಿಸಿದ್ದಾರೆ. 2023ರ ವಿಧಾನಸಭಾ ಚುನಾವಣೆಯಲ್ಲಿ 25ಸಾವಿರಕ್ಕೂ ಅಧಿಕ ಮತ ಪಡೆದು ಗೆಲುವು ಸಾಧಿಸಲಿದ್ದಾರೆ ಎಂಬುದು ಮತದಾರರ ಮನದಾಳದ ಮಾತಾಗಿದೆ.

ಸ್ನೇಹಜೀವಿ ರಾಜಕೀಯ ಹೆಜ್ಜೆ ಗುರುತು..
ವಿದ್ಯಾರ್ಥಿ ಜೀವನದಲ್ಲೇ ನಾಯಕತ್ವದ ಗುಣ ಬೆಳೆಸಿಕೊಂಡ ಸುಧಾಕರಲಾಲ್ ಎನ್‌ಐಸಿಯು ಜಿಲ್ಲಾ ಅಧ್ಯಕ್ಷರಾಗಿ 1992ರಲ್ಲೇ ಆಯ್ಕೆ. 2000-01ರಲ್ಲಿ ಹೊಳವನಹಳ್ಳಿ ಜಿಪಂಯಿAದ ಆಯ್ಕೆಯಾಗಿ ತುಮಕೂರು ಜಿಪಂಯ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷನಾಗಿ ಸೇವೆ. ಸಿ.ಎನ್.ದುರ್ಗ ಕ್ಷೇತ್ರದಿಂದ 2005ರಲ್ಲಿ 2ನೇ ಸಲ ಜಿಪಂ ಸದಸ್ಯನಾಗಿ ಆಯ್ಕೆ. ಹುಲೀಕುಂಟೆ ಜಿಪಂ ಸದಸ್ಯನಾಗಿ ಮತ್ತೇ 2010ರಲ್ಲಿ ಆಯ್ಕೆಯಾಗಿ ಹಾಟ್ರೀಕ್ ಸಾಧನೆ. ನಂತರ
2013-14ರಲ್ಲಿ ಕೊರಟಗೆರೆ ವಿಧಾನಸಭೆಗೆ ಸ್ಪರ್ಧಿಸಿ ಬಹುಮತದ ಅಂತರದ ಗೆಲುವು. 2018ರಲ್ಲಿ ಅತಿಹೆಚ್ಚು ಮತ ಪಡೆದು ಸೋತ ನಂತರವು ಸತತವಾಗಿ ಕ್ಷೇತ್ರದಲ್ಲಿ ಬಡವರ ಕೆಲಸ ಮಾಡುತ್ತೀರುವ ಹೆಮ್ಮೆಯ ಜನನಾಯಕ.
ಸುಧಾಕರ್‌ಲಾಲ್ ಬಾಲ್ಯದ ಜೀವನ..
ಕೊರಟಗೆರೆ ತಾಲೂಕು ಕಸಬಾ ಹೋಬಳಿ ತುಂಬಾಡಿ
ಗ್ರಾಪಂಯ ಪಕ್ಕಿರಪ್ಪನಪಾಳ್ಯ ತಾಂಡದ ರೂಪ್ಲನಾಯ್ಕ ಮತ್ತು ಲಕ್ಷಿö್ಮಬಾಯಿ ಮಗನಾದ ಪಿ.ಆರ್.ಸುಧಾಕರಲಾಲ್ 1966ರ ಆಗಸ್ಟ್ 18ರಂದು ಜನಿಸಿದ್ದಾರೆ. ತುಮಕೂರು ನಗರದ ಸೆಂಟ್ ಮೇರಿಸ್ ಶಾಲೆಯಲ್ಲಿ 1ರಿಂದ 7ನೇ ತರಗತಿಯ ಬಾಲ್ಯದ ವ್ಯಾಸಂಗ. ಸಿದ್ದಗಂಗಾ ಹೈಸ್ಕೂಲ್‌ನಲ್ಲಿ 8ರಿಂದ 10ನೇ ತರಗತಿ. ಸರ್ವೋದಯ ಕಾಲೇಜಿನಲ್ಲಿ ಪ್ರಥಮ ಮತ್ತು ದ್ವಿತೀಯ ಪಿಯುಸಿ. ಸಿದ್ದಗಂಗಾ ಇನ್ಸ್ಟ್ಯೂಟ್ ಆಪ್ ಟೇಕ್ನಾಲಜಿಯಲ್ಲಿ 4ವರ್ಷ ಮೇಕಾನಿಕಲ್ ಇಂಜಿನಿಯರ್.
ವಿದ್ಯೋಧಯ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿದ್ದಾರೆ.
ಮಳೆನೀರು ತಡೆದು ಕೆರೆಕಟ್ಟೆ ನಿರ್ಮಿಸಿದರೇ ಮಾತ್ರ ಅಂತರ್ಜಲ ಅಭಿವೃದ್ದಿ ಸಾಧ್ಯ. ನಾನು ಶಾಸಕನಾಗಿ ಮಾಡಿದ ಕೆಲಸಗಳೇ ಇಂದು ರೈತರಿಗೆ ಶ್ರೀರಕ್ಷೆಯಾಗಿವೆ. ಸುವರ್ಣಮುಖಿ ಮತ್ತು ಜಯಮಂಗಲಿ ನದಿಪಾತ್ರದ ರೈತರೇ ಇದಕ್ಕೆ ಸಾಕ್ಷಿ. ವಿಶೇಷ ಚೇತರ ರಕ್ಷಣೆ ನಮ್ಮೇಲ್ಲರ ಹೊಣೆ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆಧ್ಯತೆ
ನೀಡಿದ್ದೇನೆ. ಗಂಗಾಕಲ್ಯಾಣ ಮತ್ತು ಸಾಗುವಳಿ ನೀಡಿದ ಹೆಮ್ಮೆ ನನಗಿದೆ. ಕೊರಟಗೆರೆ ಕ್ಷೇತ್ರದ ಮನೆಮಗನಾಗಿ ಜೀವನ ಕೊನೆಯ ಉಸಿರು ಇರುವವರೇಗೆ ಬಡಜನರ ಸೇವೆ ಮಾಡುತ್ತೇನೆ.
ಪಿ.ಆರ್.ಸುಧಾಕರಲಾಲ್. ಮಾಜಿ ಶಾಸಕ. ಕೊರಟಗೆರೆ
ಕ್ಷೇತ್ರ