ಜೆಡಿಎಸ್ ಭದ್ರಕೋಟೆ ಕೊರಟಗೆರೆ ಕ್ಷೇತ್ರದಲ್ಲಿ ಸುಧಾಕರಲಾಲ್ ಗೆಲುವು ಖಚಿತ: ಹೆಚ್.ಡಿ.ಕೆ.

ಕೊರಟಗೆರೆ:- ಪಂಚರತ್ನ ಯೋಜನೆಯಿಂದ ಕರ್ನಾಟಕ ರಾಜ್ಯದ ಅಭಿವೃದ್ದಿ ಸಾಧ್ಯ. ಗ್ರಾಮೀಣ ಜನತೆಯ ಆರ್ಥಿಕ ಸದೃಢತೆಗೆ ಶಿಕ್ಷಣ, ವಸತಿ, ಆರೋಗ್ಯ, ರೈತಚೈತನ್ಯ ಮತ್ತು ಯುವ ನವಮಾರ್ಗ, ಮಹಿಳಾ ಸಬಲೀಕರಣ ಅಗತ್ಯ. ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದ ೨೪ ಗಂಟೆಯೊಳಗೆ ಸ್ತಿçÃಶಕ್ತಿ ಸಂಘದ ಸಾಲದಿಂದ ಋಣಮುಕ್ತ ಮಾಡುತ್ತೇನೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಕೊರಟಗೆರೆ ವಿಧಾನಸಭಾ ಕ್ಷೇತ್ರದ ಪುರವಾರ, ಹೊಳವನಹಳ್ಳಿ, ಕೋಳಾಲ, ಕಸಬಾ, ತೋವಿನಕೆರೆ ಮತ್ತು ಕೊರಟಗೆರೆ ಪಟ್ಟಣದಲ್ಲಿ ಜಾತ್ಯಾತೀತ ಜನತಾ ದಳ ಪಕ್ಷದಿಂದ ಶನಿವಾರ ಏರ್ಪಡಿಸಲಾಗಿದ್ದ ಪಂಚರತ್ನ ರಥಯಾತ್ರೆ ಸಂಚಾರದ ವೇಳೆ ಮಾತನಾಡಿದರು.
ಗುಣಮಟ್ಟದ ಶಿಕ್ಷಣವೇ ಆಧುನಿಕ ಶಕ್ತಿ, ಬಡವರಿಗೆ ವಸÀತಿಯ ಆಸರೆ, ಪ್ರತಿ ಗ್ರಾಪಂಗೆ ಹೈಟೆಕ್ ಆಸ್ಪತ್ರೆ, ಆಧುನಿಕ ತಂತ್ರಜ್ಞಾನದ ಕೃಷಿ ಚೈತನ್ಯ, ಯುವ ಜನತೆಗೆ ನವಮಾರ್ಗ ಮತ್ತು ಮಹಿಳೆಯರಿಗೆ ಉದ್ಯೋಗಕ್ಕಾಗಿ ಜೆಡಿಎಸ್ ಪಕ್ಷವು ಪಂಚರತ್ನ ಯೋಜನೆ ರೂಪಿಸಿದೆ. ರಾಜ್ಯ ಸರಕಾರದಲ್ಲಿ ಹಣಕ್ಕೆ ಕೊರತೆಯಿಲ್ಲ, ಕಾರ್ಯಕ್ರಮದ ಹೆಸರಿನಲ್ಲಿ ಜನರ ಹಣವು ಲೂಟಿ ಆಗುತ್ತಿದೆ. ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೇ ಬಡವರ ಕಲ್ಯಾಣವೇ ನನ್ನ ಗುರಿ ಎಂದರು.


ಕೊರಟಗೆರೆ ಕ್ಷೇತ್ರದ ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್ ಮಾತನಾಡಿ, ನವ ಕರ್ನಾಟಕ ನಿರ್ಮಾಣಕ್ಕಾಗಿ ಕುಮಾರಣ್ಣ ಪಂಚರತ್ನ ಯೋಜನೆ ರೂಪಿಸಿ ಸ್ತಿçÃಶಕ್ತಿ ಸಂಘದ ಸಾಲಮನ್ನಾ ಮಾಡುವ ಭರವಸೆ ನೀಡಿದ್ದಾರೆ. ಕುಮಾರಣ್ಣ ನೀಡಿರುವ ರೈತಪರ ಯೋಜನೆಯೇ ನನಗೇ ಶ್ರೀರಕ್ಷೆ ಆಗಲಿದೆ. ಪಂಚರತ್ನ ರಥಯಾತ್ರೆ ವೇಳೆ ಕೊರಟಗೆರೆ ಕ್ಷೇತ್ರದ ರೈತಾಪಿವರ್ಗ ಮತ್ತು ಕಾರ್ಯಕರ್ತರು ತೋರಿದ ಪ್ರೀತಿ, ವಿಶ್ವಾಸಕ್ಕೆ ನಾನು ಚಿರಋಣಿ ಆಗಿದ್ದೇನೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಅಂಜೀನಪ್ಪ, ಪ್ರಧಾನ ಕಾರ್ಯದರ್ಶಿ ಮಹಾಲಿಂಗಪ್ಪ, ಕೊರಟಗೆರೆ ಕಾರ್ಯಧ್ಯಕ್ಷ ಲಕ್ಷö್ಮಣ್, ವಕ್ತಾರ ಲಕ್ಷಿö್ಮÃಶ್, ಯುವ ಅಧ್ಯಕ್ಷ ವೆಂಕಟೇಶ್, ಜಿಪಂ ಸದಸ್ಯರಾದ ಶಿವರಾಮಯ್ಯ, ಮಾಜಿ ತಾಪಂ ಸದಸ್ಯ ಪ್ರಕಾಶ್, ಮುಖಂಡರಾದ ಕಾಮರಾಜು, ಸಿದ್ದಮಲ್ಲಪ್ಪ, ಮಂಜುನಾಥ, ನಾಗರಾಜು, ಕಾಂತರಾಜು, ರಮೇಶ್, ಶಶಿಕುಮಾರ್, ಪಾರುಕ್, ಅಮರ್ ಸೇರಿದಂತೆ ಇತರರು ಇದ್ದರು.
ಪಂಚರತ್ನ ರಥಯಾತ್ರೆ ಸಂಚಾರದ ವೇಳೆ ಶಾಲೆಗೆ ತೆರಳಲು ಬಸ್ಸಿನ ವ್ಯವಸ್ಥೆ ಇಲ್ಲ, ಕೊಠಡಿಗಳು ಸೋರುತ್ತೀವೆ ಎಂದ ಮಕ್ಕಳು. ನನಗೇ ಒಂದು ಕಾಲು ಇಲ್ಲ, ಕೃತಕ ಕಾಲಿನಲ್ಲಿ ಓಡಾಡುತ್ತಿದ್ದೇನೆ. ಒಂದು ಬೈಕ್ ಕೊಡಿಸಿ ಎಂದು ವಿಶೇಷ ಚೇತನ. ಹತ್ತಾರು ಕಡೆಗಳಲ್ಲಿ ಸೇತುವೆ ದುರಸ್ಥಿ ಮತ್ತು ರಸ್ತೆಗಳು ಕಡಿತವಾಗಿವೆ ಎಂದು ತೀತಾ ಜನರ ಅಳಲು. ಶಾಲೆಗೆ ಬರಲು ಕರಡಿ ಕಾಟವಿದೆ ಎಂದು ಕುಮಾರಸ್ವಾಮಿ ಮುಂದೆ ಕಣ್ಣೀರಿಟ್ಟ ಪುರವಾರದ ವಿದ್ಯಾರ್ಥಿನಿ. ಹೀಗೆ ನೂರಾರು ಜನರು ತಮ್ಮ ಗ್ರಾಮಗಳ ಸಮಸ್ಯೆಗಳನ್ನು ಮಾಜಿ ಸಿಎಂ ಮುಂದೆ ತೋಡಿಕೊಂಡರು.

..
ರೈತರಿಂದ ಅದ್ದೂರಿ ಸ್ವಾಗತ..
ಪುರವಾರ ಗ್ರಾಮದ ರೈತರಿಂದ ಕಡಲೆಕಾಯಿ ಹಾರ, ಬೈರೇನಹಳ್ಳಿಯ ಕಾರ್ಯಕರ್ತರಿಂದ ಸೇಬಿನ ಹಾರ, ಹೊಳವನಹಳ್ಳಿಯ ರೈತರಿಂದ ಅಡಿಕೆಯ ಹಾರ, ಕೊರಟಗೆರೆ ಪಟ್ಟಣದ ಕಾರ್ಯಕರ್ತರಿಂದ ಉದ್ದಿನಹೊಡೆ, ಲಿಂಬೆಹಣ್ಣು ಹಾರ, ಜಿ.ನಾಗೇನಹಳ್ಳಿಯ ಸ್ಥಳೀಯರಿಂದ ತುಳಸಿ ಪತ್ರೆಯ ಹಾರ, ಮತ್ತು ಕೆಸ್ತೂರು -ತೋವಿನಕೆರೆ ಮುಖಂಡರಿAದ ಮುಸುಕಿನ ಜೋಳ ಮತ್ತು ಸೇಬಿನ ಹಾರ ಹಾಕುವ ಮೂಲಕ ಮಾಜಿ ಸಿಎಂ ಕುಮಾರಸ್ವಾಮಿಗೆ ಕೊರಟಗೆರೆ ಕ್ಷೇತ್ರದ ಸಾವಿರಾರು ರೈತರು ಅದ್ದೂರಿ ಸ್ವಾಗತ ಕೋರಿದರು.

ಜಿಪಂ ಕ್ಷೇತ್ರದಲ್ಲಿ ಪ್ರಚಾರದ ಅಬ್ಬರ..
ಕೊರಟಗೆರೆ ಕ್ಷೇತ್ರದ ಪುರವಾರ, ಹೊಳವನಹಳ್ಳಿ, ಕೋಳಾಲ, ಕಸಬಾ, ತೋವಿನಕೆರೆ ಮತ್ತು ಕೆಸ್ತೂರು ಕ್ಷೇತ್ರಗಳಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಮಾಜಿ ಶಾಸಕ ಸುಧಾಕರಲಾಲ್ ಅಬ್ಬರ ಪ್ರಚಾರ ನಡೆಸಿದರು. ಪಂಚರತ್ನ ಯೋಜನೆಯ ಪ್ರಚಾರದ ವಾಹನ ಮತ್ತು ಸಾವಿರಾರು ಜೆಡಿಎಸ್ ಕಾರ್ಯಕರ್ತರು ದ್ವಿಚಕ್ರ ವಾಹನಗಳ ಮೂಲಕ ೫೦ಕ್ಕೂ ಅಧಿಕ ಗ್ರಾಮಗಳಲ್ಲಿ ಸಂಚರಿಸಿ ಜೆಡಿಎಸ್ ಪಕ್ಷದ ಪಂಚರತ್ನ ಯೋಜನೆಯ ಬಗ್ಗೆ ಪ್ರಚಾರ ನಡೆಸಿದರು.


ಪಂಚರತ್ನ ಯೋಜನೆಯಿಂದ ಕರ್ನಾಟಕ ಮತ್ತು ಕೊರಟಗೆರೆ ಕ್ಷೇತ್ರದ ಅಭಿವೃದ್ದಿ ಸಾಧ್ಯ. ನಿಮ್ಮೆಲ್ಲರ ಪ್ರೀತಿ-ಹಾರೈಕೆ ಸದಾ ರೈತ ನಾಯಕ ಕುಮಾರಣ್ಣನ ಮೇಲಿರಲಿ. ನಾನು ೨೫ ವರ್ಷದಿಂದ ಕೊರಟಗೆರೆ ಕ್ಷೇತ್ರದ ಜನತೆಯ ಸೇವೆ ಮಾಡಿದ್ದೇನೆ. ನಾನು ನಿಮ್ಮ ಕೊರಟಗೆರೆ ಕ್ಷೇತ್ರದ ಮನೆಯ ಮಗ. ೨೦೨೩ಕ್ಕೆ ಮತ್ತೆ ಜಯಗಳಿಸಿ ಕೊರಟಗೆರೆ ಕ್ಷೇತ್ರದ ಬಡಜನರ ಸೇವೆ ಮಾಡುತ್ತೇನೆ.

  • ಪಿ.ಆರ್.ಸುಧಾಕರಲಾಲ್. ಮಾಜಿ ಶಾಸಕ

ಜೆಡಿಎಸ್ ಭದ್ರಕೋಟೆ ಕೊರಟಗೆರೆ ಕ್ಷೇತ್ರದಲ್ಲಿ ಸುಧಾಕರಲಾಲ್ ಗೆಲುವು ಖಚಿತ. 2013ಕ್ಕಿಂತ 2018ರಲ್ಲಿ ಹೆಚ್ಚು ಮತ ಪಡೆದು ಸೋತಿದ್ದಾರೆ. ಆದರೆ ಅದು ಸೋಲಲ್ಲ. ಸುಧಾಕರಲಾಲ್‌ಗೆಕೊರಟಗೆರೆ ಬಡಜನರ ಆರ್ಶಿವಾದ ಇದೆಅವರು 2023ಕ್ಕೆ ಗೆದ್ದು ಬರ್ತಾರೆ. ಕೊರಟಗೆರೆ ಕ್ಷೇತ್ರದ ಅಭಿವೃದ್ದಿ ಮತ್ತು ಬಡವರ ಕಲ್ಯಾಣಕ್ಕಾಗಿ ಲಾಲ್‌ಗೆ ನಿಮ್ಮೆಲ್ಲರ ಆರ್ಶಿವಾದ ಅಗತ್ಯ.

  • ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ
  • ಹರೀಶ್‌ಬಾಬು ಬಿ.ಹೆಚ್

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!