ತಿನ್ನುವ ಅನ್ನಕ್ಕೂ ಜಿಎಸ್ಟಿ ವಿಧಿಸಿದ ಬಿಜೆಪಿ ತಿರಸ್ಕರಿಸಿ


ಹೊಸಕೆರೆ : ಸುಳ್ಳು ಭರವಸೆಗಳನ್ನು ನೀಡುತ್ತಾ ತಿನ್ನುವ ಅನ್ನಕ್ಕೂ ಜಿ.ಎಸ್‌.ಟಿ. ಬರೆ ಎಳೆಯುತ್ತಿರುವ ಭ್ರಷ್ಟ ಬಿಜೆಪಿ ಸರ್ಕಾರವನ್ನು 2023ರ ಚುನಾವಣೆಯಲ್ಲಿ ರಾಜ್ಯಾದ್ಯಂತ ತಿರಸ್ಕರಿಸಬೇಕೆಂದು ಕಿಡಿ ಕಾರಿದ ವಾಸಣ್ಣ ಅಭಿಮಾನಿ ಬಳಗದ ಮುಖಂಡ ಕೆ ಆರ್ ವೆಂಕಟೇಶ್.
ಹಾಗಲವಾಡಿ ಹೋಬಳಿಯ ಶಿವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಕ್ಕಲಗಟ್ಟೆ ಗ್ರಾಮದ ರಾಜೀನಾಮೆ ಪರ್ವ ಕಾರ್ಯಕ್ರಮದಲ್ಲಿ ವಾಸಣ್ಣ ಅಭಿಮಾನಿ ಬಳಗದ ಯುವ ಮುಖಂಡ ಕೆ ಆರ್ ವೆಂಕಟೇಶ್ ಮಾತನಾಡಿದರು. ಭರವಸೆಗಳನ್ನು ನೀಡುತ್ತಾ ತಿನ್ನುವ ಅನ್ನಕ್ಕೂ ಜಿ.ಎಸ್‌.ಟಿ. ಬರೆ ಎಳೆಯುತ್ತಿರುವ ಭ್ರಷ್ಟ ಬಿಜೆಪಿ ಸರ್ಕಾರವನ್ನು 2023ರ ಚುನಾವಣೆಯಲ್ಲಿ ರಾಜ್ಯಾದ್ಯಂತ ತಿರಸ್ಕರಿಸಬೇಕೆಂದು ಕಿಡಿಕಾರಿದ ಅವರು, ವಾಸಣ್ಣನಂತಹ ಪ್ರಾಮಾಣಿಕ ಶಾಸಕರು ಕೇವಲ ಬೆರಳೆಣಿಕೆ ಯಷ್ಟಿದ್ದು ಅಧಿಕಾರಕ್ಕಾಗಿ ಯಾವ ಪಕ್ಷಕ್ಕೆ ಬೇಕಾದರೂ ಮತ್ತು ಆಮಿಷಗಳಿಗೆ ಬಲಿಯಾಗುತ್ತಿರುವ ಇಂತಹ ರಾಜಕೀಯ ಪರಿಸ್ಥಿತಿಯಲ್ಲಿ ಜೆ.ಡಿ.ಎಸ್ ಪಕ್ಷದ ಅಭ್ಯರ್ಥಿಯಾಗಿ ಸತತ ನಾಲ್ಕು ಬಾರಿ ಗೆಲುವು ಸಾಧಿಸುವುದರ ಜೊತೆಗೆ ಪಕ್ಷದ ಬೆನ್ನೆಲುಬಾಗಿದ್ದ ವಾಸಣ್ಣ ರನ್ನು ಪಕ್ಷದಿಂದ ಹೊರದಬ್ಬಿದ ನೀಚ ಕುಟುಂಬ ರಾಜಕಾರಣ ಮಾಡುತ್ತಿರುವ ಜೆಡಿಎಸ್ ಪಕ್ಷಕ್ಕೆ ತಿರುಗೇಟು ನೀಡಲು ನಾವೆಲ್ಲರೂ ಕಟಿ ಬದ್ಧರಾಗಿ, ವಾಸಣ್ಣನವರ ಅಭಿಮಾನಿಗಳ ಪ್ರಬಲ ಶಕ್ತಿಯ ಬಗ್ಗೆ 2023 ರ ಚುನಾವಣೆಯಲ್ಲಿ ವಾಸಣ್ಣನವರನ್ನು ಗೆಲ್ಲಿಸುವ ಮುಖಾಂತರ ವಾಸಣ್ಣ ಏನು ಎಂಬುದನ್ನು ಮತ್ತೊಮ್ಮೆ ದೃಢಪಡಿಸೋಣ ಎಂದರು.
ಕಾರ್ಯಕ್ರಮದಲ್ಲಿ ಶಿವಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಕದರಯ್ಯ ಸದಸ್ಯರಾದ ಭೂಮಿರಾಜು.ಬಸವರಾಜು. ರಾಘವೇಂದ್ರ.ಕೆಂಪರಾಜಮ್ಮ. ರತ್ನಮ್ಮ ಮುಖಂಡರಾದ ಗುರುರೇಣುಕಾರಾಧ್ಯ. ಕರಿಬಸವಯ್ಯ. ಗುಂಡೀರಯ್ಯ. ಕೊಟ್ಟಯ್ಯ. ಈಶ್ವರಯ್ಯ. ಉಮೇಶ್. ವಜೀರ್ ಸಾಬ್. ಈರಣ್ಣ, ಕದರಯ್ಯ, ಪ್ರಸನ್ನ ಹಾಗೂ ವಾಸಣ್ಣ ಅಭಿಮಾನಿ ಬಳಗದ ಮುಖಂಡರುಗಳು ಹಾಜರಿದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!