ಗುಬ್ಬಿ ಚಿದಂಬರಾಶ್ರಮದಲ್ಲಿ ದತ್ತ ಜಯಂತಿ ಸಪ್ತಾಹ ಮಹೋತ್ಸವ – ಡಿ: 7 ರಂದು ಸಾಮೂಹಿಕ ಶ್ರೀ ಲಲಿತಾ ಪೂಜೆ

ಗುಬ್ಬಿ: ಗುಬ್ಬಿಯ ಶ್ರೀ ಚಿದಂಬರಾಶ್ರಮದಲ್ಲಿ ದತ್ತ ಜಯಂತಿ ಸಪ್ತ ಮಹೋತ್ಸವವನ್ನು ಶ್ರೀ ಗುರು ಚರಿತ ಪಾರಾಯಣ, ಗೀತಾ ಜಯಂತಿ ಮೂಲಕ ಆರಂಭಿಸಲಾಗಿದ್ದು, ಇದೇ ತಿಂಗಳ 7 ರ ಬುಧವಾರ ಸಾಮೂಹಿಕ ಶ್ರೀ ಲಲಿತಾ ಪೂಜೆಯನ್ನು ಏರ್ಪಡಿಸಲಾಗಿದೆ. ಈ ಪೂಜಾ ವಿಧಿ ಕಾರ್ಯಕ್ರಮಕ್ಕೆ ಎಲ್ಲಾ ಮಹಿಳೆಯರು ಪಾಲ್ಗೊಂಡು ಸ್ವತಃ ಪೂಜೆ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಚಿದಂಬರಾಶ್ರಮದ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲ ಶ್ರೀರಾಮ ಶಂಕರ್ ತಿಳಿಸಿದರು.

ಸಪ್ತಾಹ ಕಾರ್ಯಕ್ರಮದಲ್ಲಿ 5 ನೇ ತಾರೀಖು ಶ್ರೀ ಹನುಮ ಜಯಂತಿ, 6 ರಂದು ಪವಮಾನ ಹೋಮ, 8 ರಂದು ದತ್ತ ಜಯಂತಿ ಅಂಗವಾಗಿ ಬೆಳಿಗ್ಗೆ ಕಾಕಡಾರತಿ ಮಹಾನ್ಯಾಸ ಪೂರ್ವಕ ಶತರುದ್ರಾಭಿಷೇಕ ಜೊತೆಗೆ 12 ಗಂಟೆಗೆ ಮಹಾ ರಥೋತ್ಸವ ಜರುಗಿ ಪ್ರಸಾದ ವಿನಿಯೋಗ ನಡೆಯಲಿದೆ. 9 ರಂದು ಶ್ರೀ ದತ್ತ ಹೋಮ ನಡೆದು ಸಪ್ತಾಹ ಮಹೋತ್ಸವ ಸಂಪನ್ನಗೊಳ್ಳಲಿದೆ ಎಂದರು.

ಏಳು ದಿನದ ಧಾರ್ಮಿಕ ಕಾರ್ಯಕ್ರಮಗಳಲ್ಲಿ 7 ನೇ ತಾರೀಖು ಆಯೋಜಿಸಿರುವ ಸಾಮೂಹಿಕ ಶ್ರೀ ಲಲಿತಾ ಪೂಜೆಯಲ್ಲಿ ಸಹಸ್ರಾರು ಮಹಿಳೆಯರು ಪಾಲ್ಗೊಂಡು ಸ್ವತಃ ಪೂಜೆ ಸಲ್ಲಿಸಲು ಅವಕಾಶ ಮಾಡಲಾಗಿದೆ. ಆಸಕ್ತರು ಭಾಗಹಿಸಲು ಮನವಿ ಮಾಡಿದ ಅವರು ದತ್ತ ಜಯಂತಿ ಆಚರಣೆ ದಿನದಂದು ವಿಶೇಷ ಅತಿಥಿಯಾಗಿ ಬ್ರಾಹ್ಮಣ ಅಭಿವೃದ್ದಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಆಗಮಿಸಲಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳು ಬರುವ ಈ ಸಪ್ತಾಹ ಕಾರ್ಯಕ್ರಮದಲ್ಲಿ ಕೇಂದ್ರದ ಸಚಿವರನ್ನು ಸಹ ಆಹ್ವಾನಿಸಿದ್ದೇವೆ. ಎಲ್ಲಾ ಕಾರ್ಯಕ್ರಮ ಆಶ್ರಮದ ಅಧ್ಯಕ್ಷ ಶಿವಚಿದಂಬರಶರ್ಮ ಅವರ ನೇತೃತ್ವದಲ್ಲಿ ನಡೆಯಲಿದೆ ಎಂದರು.

ಈ ಸಂದರ್ಭದಲ್ಲಿ ಸೇವಾ ಸದನ ಪ್ರೌಢಶಾಲೆ ಮುಖ್ಯ ಶಿಕ್ಷಕ ಜಗದೀಶ್, ಶಿಕ್ಷಕಿ ರಶ್ಮಿ ಇತರರು ಇದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!