ಗುಬ್ಬಿ ಕ್ಷೇತ್ರಕ್ಕೆ ಡಿ.6 ರಂದು ಬರುವ ಪಂಚರತ್ನ ರಥಯಾತ್ರೆಯ ಭವ್ಯ ಸ್ವಾಗತಕ್ಕೆ ಸಕಲ ಸಜ್ಜು : ಜೆಡಿಎಸ್ ಮುಖಂಡ ಬಿಎಸ್.ನಾಗರಾಜು

ಗುಬ್ಬಿ: ಬಡವರ ಪರ ಅಮೂಲ್ಯ ಯೋಜನೆಯನ್ನು ರೂಪಿಸಿಕೊಂಡು ಜೆಡಿಎಸ್ ಪ್ರಚಾರ ಕಾರ್ಯಕ್ಕೆ ಬರುವ ಪಂಚರತ್ನ ರಥಯಾತ್ರೆಗೆ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಅವರ ಭವ್ಯ ಸ್ವಾಗತಕ್ಕೆ ಗುಬ್ಬಿ ಕ್ಷೇತ್ರದಲ್ಲಿ ಸಕಲ ಸಿದ್ಧತೆ ಮಾಡಲಾಗಿದೆ ಎಂದು ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು ತಿಳಿಸಿದರು.

ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ತುಮಕೂರು ಮಾರ್ಗವಾಗಿ ಬರುವ ರಥವನ್ನು ತಾಲ್ಲೂಕಿನ ಕಳ್ಳಿಪಾಳ್ಯ ಬಳಿ ಎರಡು ಸಾವಿರ ಬೈಕ್ ಮೂಲಕ ಕಾರ್ಯಕರ್ತರು ಭವ್ಯವಾಗಿ ಸ್ವಾಗತ ಕೋರಲಿದ್ದಾರೆ ಎಂದು ಹೇಳಿದರು.

ಗುಬ್ಬಿ ಪಟ್ಟಣದ ಶ್ರೀ ಚನ್ನಬಸವೇಶ್ವರಸ್ವಾಮಿ ದೇವಾಲಯಕ್ಕೆ ಪೂಜೆ ಸಲ್ಲಿಸಿ ಬಹಿರಂಗ ಸಭೆ ಕುರಿತ ಮಾಜಿ ಸಿಎಂ ಕುಮಾರಸ್ವಾಮಿ ಮಾತನಾಡಲಿದ್ದಾರೆ. ನಂತರ ಕೆಜಿ ಟೆಂಪಲ್, ಕುನ್ನಾಲ ಮಾರ್ಗವಾಗಿ ಕಡಬ ತಲುಪಲಿದೆ. ನಂತರ ನಿಟ್ಟೂರು ಸರ್ಕಲ್ ಬಳಿ ಸಭೆ ನಡೆಸಿ ಎಂ.ಎನ್.ಕೋಟೆ, ಅಳಿಲುಘಟ್ಟ, ಹೊಸಕೆರೆ ಮಾರ್ಗವಾಗಿ ಚೇಳೂರು ಮುಗಿಸಿ ಅಂಕಸಂದ್ರ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಹೂಡಲಿದ್ದಾರೆ. ಅಲ್ಲಿ ಸಾರ್ವಜನಿಕರ ಅಹವಾಲು ಸ್ವೀಕಾರ ಮತ್ತು ಸಂವಾದ ನಡೆಸಲಿದ್ದಾರೆ ಎಂದು ವಿವರಿಸಿದರು.

ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಚಿಕ್ಕೀರಪ್ಪ ಮಾತನಾಡಿ ಅಂದಾಜು 20 ಸಾವಿರ ಕಾರ್ಯಕರ್ತರು ಆಗಮಿಸಿ ರಥಯಾತ್ರೆ ಯಶಸ್ವಿಗೊಳಿಸಲಿದ್ದಾರೆ. ವಿಶೇಷ ಎರಡು ಸಾವಿರ ಮಹಿಳಾ ಕಾರ್ಯಕರ್ತರು ಇಲ್ಲಿ ಭಾಗವಹಿಸಲಿದ್ದಾರೆ. ಟ್ರಾಕ್ಟರ್ ಜಾಥಾ ಕೂಡಾ ವಿಶೇಷ ಆಕರ್ಷಣೆಯಾಗಲಿದೆ. ಪಕ್ಷದ ಎಲ್ಲಾ ಮುಖಂಡರು ಡಿಸೆಂಬರ್ 6 ರಂದು ಇಡೀ ದಿನ ಶ್ರಮವಹಿಸಿ ಯಾತ್ರೆ ಯಶಸ್ಸು ಗೊಳಿಸಲಿದ್ದಾರೆ. ಪಂಚರತ್ನ ಯೋಜನೆಯ ಮೂಲಕ ಮುಂದಿನ ಚುನಾವಣೆಗೆ ಮತಯಾಚನೆ ಸಹ ಮಾಡಲಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಸದಸ್ಯ ಜಿ.ಎಂ.ಶಿವಲಿಂಗಯ್ಯ, ಪಪಂ ಮಾಜಿ ಅಧ್ಯಕ್ಷ ಜಿ.ಡಿ.ಸುರೇಶಗೌಡ, ಮುಖಂಡ ರಂಗಸ್ವಾಮಿ ಇತರರು ಇದ್ದರು.
ವರದಿ: ಜಿ.ಆರ್.ರಮೇಶ ಗೌಡ, ಗುಬ್ಬಿ.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!