ಎಂ ಎನ್ ಕೋಟೆ : ಕರ್ನಾಟಕ ಮೋಟರ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಕರ್ನಾಟಕ ಕೆ. 1000 ಕಾರು ರಾಲಿಯನ್ನು ಗುಬ್ಬಿ ತಾಲ್ಲೂಕಿನ ವಿರೋಪಾಕ್ಷಿ ಪುರ ಬಳಿ ಶನಿವಾರ ಹಾಗೂ ಭಾನುವಾರ ಕಾರ್ ರಾಲಿ ಬಹಳ ಯಶಸ್ವಿಯಾಗಿ ನಡೆಯಿತ್ತು. ಪ್ರತಿ ವರ್ಷ ಕಾರು ರೇಸ್ ನಡೆದುಕೊಂಡು ಬರುತ್ತಿದ್ದು ಈ ಭಾರಿಯು ಸಹ ಈ ಪ್ರೇಕ್ಷಕರಿಗೆ ಎರಡು ದಿನ ಮನರಂಜನೆ ನೀಡಲಾಯಿತ್ತು. ಜಗ ಜಗಿಸುವ ಕಾರ್ ಗಳು
ರಸ್ತೆ ಉದ್ದಕ್ಕೂ ದೂಳು ಎಬ್ಬಿಸಿಕೊಂಡು ಸೌಂಡ್ ಮಾಡಿಕೊಂಡು ಪ್ರೇಕ್ಷಕರನ್ನು ಆಕರ್ಷಿಸಲಾಯಿತ್ತು. ಶನಿವಾರ ಆರಂಭವಾದ ಕಾರ್ ರೇಸ್ ಅದಲಗೆರೆ , ನಾಗಲಾಪುರ , ಭೋಮ್ಮರಸನಹಳ್ಳಿ , ಎತ್ತಿನಹೊಳೆ , ಶಿವಸಂದ್ರದ , ಹತ್ಯಾಳ್ , ಕೊಂಡ್ಲಿ , ಭೋಗಸಂದ್ರದ ಮೂಲಕ ಕಾರುಗಳು ಚಲಿಸಿದವು.ರಸ್ತೆಯ ತಿರುವಿನಲ್ಲಿ ಕಾರುಗಳು ತಿರುವು ನೋಡುವುದೇ ಬಹಳ ವಿಶೇಷವಾಗಿತ್ತು. ಕಾರು ರೇಸ್ ನೋಡಲು ಪ್ರೇಕ್ಷಕರು ರಸ್ತೆಯ ಬದಿಯಲ್ಲಿ ತೋಟಗಳಲ್ಲಿ ನಿಂತು ವೀಕ್ಷಣೆ ಮಾಡಿದರು. ರಸ್ತೆಯ ಉದ್ದಕ್ಕೂ ಕಾರುಗಳ ಶಬ್ದ ಜೋರಾಗಿ ಕೇಳಿ ಬರುತ್ತಿದವು , ರಸ್ತೆಯ ತಿರುವಿನಲ್ಲಿ ದೂಳ್ ಎಬ್ಬಿಸಿಕೊಂಡು ಹೋಗುತ್ತಿರುವ ದೃಶ್ಯ ಜೋರಾಗಿ ಕಂಡುಬರುತ್ತಿತ್ತು. ಅಲ್ಲಲ್ಲಿ ಪ್ರೇಕ್ಷಕರು ಕಾರುಗಳು ಹೋಗುವುದನ್ನ ವೀಕ್ಷಣೆ ಮಾಡಿ ಕಾರುಗಳು ಬರುವಾಗ ಜೋರಾಗಿ ಕೋಗಿ ಉರಿದುಬ್ಬಿಸಿದರು. ಕಾರು ರಾಲಿಯಲ್ಲಿ ಸುಮಾರು 72 ಕಾರುಗಳು ಭಾಗವಹಿಸಿದ್ದವು ವಿಶೇಷವಾಗಿ ಮಹಿಳೆಯರು ಸಹ ಸ್ಪರ್ಧೆಯಲ್ಲಿ ಭಾಗವಹಿಸಿರುವುದು ವಿಶೇಷವಾಗಿತ್ತು.ಸ್ಪರ್ಧೆಯಲ್ಲಿ ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗಿಯಾದವರು ಸಹ ಇಲ್ಲಿ ಭಾಗವಹಸಿದ್ದರು.
ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಬಂದೂಬಸ್ತ್ ವಹಿಸಿದ್ದರು.