ಗಾಳಿ ಬೆಳಕು ನೀರು ಎಷ್ವು ಮುಖ್ಯವು ಮಣ್ಣು ಪರೀಕ್ಷೆ ಅಷ್ಠೇ ಮುಖ್ಯ

ಎಂ ಎನ್ ಕೋಟೆ : ಗಾಳಿ , ಬೆಳಕು ನೀರು ಎಷ್ವು ಮುಖ್ಯವು ಮಣ್ಣು ಪರೀಕ್ಷೆ ಮಾಡುವುದು ಅಷ್ಠೇ ಮುಖ್ಯವಾಗಿದೆ ರೈತರು ಮಣ್ಣು ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಬೇಕೆಂದು ಮಂಗಳೂರು ಮಂಗಳ ಕೆಮಿಕಲ್ಸ್ ಫರ್ಟಿಲೈಜರ್ ಲಿಮಿಟೆಡ್ ಕಂಪನಿಯ ವ್ಯವಸ್ಥಾಪಕ ಸತೀಶ್ ತಿಳಿಸಿದರು.

ಗುಬ್ಬಿ ತಾಲ್ಲೂಕಿನ ಸೋಮಲಾಪುರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಮಣ್ಣು ದಿನಾಚಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಣ್ಣು ಆಹಾರದ ಮೂಲ ಆದ್ದರಿಂದ ಎಲ್ಲರೂ ಪರೀಕ್ಷೆ ಮಾಡಿಸಿ ಅದರ ಆಧಾರದ ಮೇಲೆ ರೈತರು ಗೊಬ್ಬರಗಳನ್ನು ಹಾಕಿ ಹೆಚ್ಚು ಇಳುವರಿ ಪಡೆದು ಲಾಭದಾಯಕವಾಗಬೇಕು.ಇತ್ತೀಚಿನ ದಿನಗಳಲ್ಲಿ ರೈತರು ರಾಸಾಯನಿಕ ಗೊಬ್ಬರಗಳಿಗೆ ಮೋರು ಹೋಗುತ್ತಿದ್ದಾರೆ ಇದರಿಂದ ಹಿಳುವರಿ ಪಡೆಯಲು ಸಾಧ್ಯವಗುತ್ತಿಲ್ಲ ರೈತರು ಸಾವಯುವ ಗೊಬ್ಬರ ಹಾಕಿ ಹೆಚ್ಚು ಇಳುವರಿ ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಕಂಪನಿಯ ವ್ಯವಸ್ಥಾಪಕ ಶ್ರೀಕಾಂತ್ ಮಾತನಾಡಿ ರೈತರು ಜಮೀನಿನಲ್ಲಿ ಲಾಭದಾಯಕ ಬೆಳೆಗಳನ್ನು ಪಡೆಯಲು ಹೆಚ್ಚು ಸಾವಯುವ ಗೊಬ್ಬರದ ಜೂತೆಗೆ ಕೊಟ್ಟಿಗೆ ಗೊಬ್ಬರವನ್ನು ಹಾಕುವುದರಿಂದ ಹೆಚ್ಚು ಫಲವತ್ತತ್ತೆ ಬರುತ್ತದೆ.ಮಣ್ಣುನ್ನು ಪರೀಕ್ಷೆ ಮಾಡಿಸಿ ಲಾಭದಾಯಕ ಬೆಳೆಗಳನ್ನು ಬೆಳೆದು ಆರ್ಥಿಕವಾಗಿ ಸ್ವಾವಲಂಭಿಗಳಾಗಬೇಕು ಎಂದ ಅವರು ಈ ಭಾಗದಲ್ಲಿ ಅಡಿಕೆ ,ತೆಂಗು ಹೆಚ್ಚುತ್ತವಾಗಿ ಬೆಳೆಯುವುದರಿಂದ ಸಾವಯುವ ಗೊಬ್ಬರವನ್ನು ಬಳಸವುದರಿಂದ ಹಚ್ಚು ಇಳುವರಿ ಪಡೆಯಲು ಸಾಧ್ಯವಾಗುತ್ತದೆ. ಮುಂದಿನ ಪೀಳಿಗೆಗೆ ಮಣ್ಣು ಅತ್ಯವಶ್ಯಕವಾಗಿ ಬೇಕಾಗಿದೆ ಮಣ್ಣಿನ ಫಲವತ್ತೆತ್ತೆಯನ್ನು ಹೆಚ್ಚು ಮಾಡಬೇಕಾದರೆ ಸಾವಯುವ ಗೊಬ್ಬರವನ್ನು ಬಳಸಬೇಕು ಎಂದು ತಿಳಿಸಿದರು.

ಇದೇ ಸಂಧರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಯೋಗೀಶ್ , ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾರನಹಳ್ಳಿ ಎಸ್.ಸಿ. ಪ್ರಭಾಕರ್ , ಟಿಎಪಿಎಂಸಿ ಮಾಜಿ ಅಧ್ಯಕ್ಷ ಕಿಡಿಗಣ್ಣಪ್ಪ , ವಿ ಎಸ್ ಎಸ್ ಎನ್ ಅಧ್ಯಕ್ಷ ಶಿವರುದ್ರಯ್ಯ , ಕಾರ್ಯದರ್ಶಿ ಬಸವರಾಜು , ಗ್ರಾಮ ಪಂಚಾಯಿತಿ ಸದಸ್ಯರಾದ ಲೋಕೇಶ್ , ಸಿದ್ದಗಂಗಯ್ಯ , ಕಾಂತರಾಜು , ನರಸಯ್ಯ , ಮುಖಂಡರಾದ ಹೇಮಂತ್ , ನಟರಾಜು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!