ಹೊಸಕೆರೆ : ಕರ್ನಾಟಕ ಮೋಟರ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಕರ್ನಾಟಕ K1000 ಕಾರು ರ್ಯಲಿಯನ್ನು ಗುಬ್ಬಿ ತಾಲ್ಲೂಕಿನ ವಿರೂಪಾಕ್ಷಿ ಪುರ ಬಳಿ ಶನಿವಾರ ಹಾಗೂ ಭಾನುವಾರ ಯಶಸ್ವಿಯಾಗಿ ನಡೆಯಿತು, ಪ್ರತಿ ವರ್ಷದಂತೆ ಈ ವರ್ಷವೂ ವಿವಿಧ ರಾಜ್ಯಗಳಿಂದ ಸ್ಪರ್ಧಿಗಳು ಭಾಗವಹಿಸಿದ್ದರು, ಪ್ರೇಕ್ಷಕರಿಗೆ ಎರಡು ದಿನ ಮನರಂಜನೆ ನೀಡಿತು.
ರಸ್ತೆ ಉದ್ದಕ್ಕೂ ಧೂಳು, ವಿಶೇಷ ಶಬ್ದ ರಸ್ತೆ ಇಕ್ಕೆಲಗಳಲ್ಲಿ ನಿಂತಿದ್ದ ಜನ ಆಕರ್ಷಿತರಾಗಿ ಕಾರ್ ಗಳು ವೇಗಕ್ಕೆ ಹರ್ಷೋದ್ಗಾರ ಮಾಡುತ್ತಿದ್ದರು.
ರೇಸ್ ಹಾದು ಹೋಗುವ ಗ್ರಾಮಸ್ಥರು ಎರೆಡೂ ದಿನಗಳಲ್ಲಿ ಕೆಲಸ ಕಾರ್ಯಗಳನ್ನು ತೊರೆದು ಕಣ್ತುಂಬಿಕೊಂಡರು.
ಅದಲಗೆರೆ , ನಾಗಲಾಪುರ , ಬೊಮ್ಮರಸನಹಳ್ಳಿ , ಎತ್ತಿನಹೊಳೆ ಭಾಗ ಶಿವಸಂದ್ರ , ಹತ್ಯಾಳ್ , ಕೊಂಡ್ಲಿ , ಭೋಗಸಂದ್ರದ ಮೂಲಕ ಕಾರುಗಳು ಹಾದು ಹೋದವು. ರಸ್ತೆಯ ತಿರುವುಗಳಲ್ಲಿ ಹೆಚ್ಚು ಜನ ಕಾತರದಿಂದ ನೋಡುತ್ತಿದ್ದರು.
ಪ್ರೇಕ್ಷಕರು ರಸ್ತೆಯ ಬದಿಯಲ್ಲಿ ತೋಟಗಳಲ್ಲಿ ನಿಂತು ವೀಕ್ಷಣೆ ಮಾಡಿದರು, ರಸ್ತೆಯ ತಿರುವಿನಲ್ಲಿ ದೂಳ್ ಎಬ್ಬಿಸಿಕೊಂಡು ಹೋಗುತ್ತಿರುವ ದೃಶ್ಯ ಅದ್ಭುತವಾಗಿ ಕಾಣುತ್ತಿತ್ತು. ಜೋರಾಗಿ ಕೂಗುತ್ತಾ ಹುರಿದುಂಬಿಸುತ್ತಿದ್ದರು. ರ್ಯಾಲಿಯಲ್ಲಿ ಸುಮಾರು 72 ಕಾರುಗಳು ಭಾಗವಹಿಸಿದ್ದವು ವಿಶೇಷವಾಗಿ ಮಹಿಳೆಯರು ಸಹ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಸ್ಪರ್ಧೆಯಲ್ಲಿ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗಿಯಾದವರು ಸಹ ಇಲ್ಲಿ ಭಾಗವಹಸಿದ್ದು ವಿಶೇಷ.
ವಿನ್ನರ್ ಆಗಿ ಕರ್ಣಕಡೂರ್, ಫಸ್ಟ್ ರನ್ನರ್ ಅಪ್ ಆಗಿ ಆರೂರ್ ಅರ್ಜುನ್ ರಾವ್, ಸೆಕೆಂಡ್ ರನ್ನರ್ ಅಪ್ ಆಗಿ ಫಿಲಿಪ್ ಮತ್ತೈ ಬಹುಮಾನ ಪಡೆದರು.
ಅಹಿತಕರ ಘಟನೆ ನಡೆಯದಂತೆ ಸೂಕ್ತ ಪೋಲಿಸ್ ಬಂದೂಬಸ್ತ್, ಆರೋಗ್ಯ ವ್ಯವಸ್ಥೆ ಮಾಡಲಾಗಿತ್ತು.
ಸಚಿವ ಜೆ,ಸಿ,ಮಾಧುಸ್ವಾಮಿ ವಿಜೇತರಿಗೆ ಬಹುಮಾನ ವಿತರಿಸಿದರು ಕರ್ನಾಟಕ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಗೌತಮ್ ಉಪಾಧ್ಯಕ್ಷ ಭಾಸ್ಕರಗುಪ್ಪ ಗ್ರಾಮ ಪಂಚಾಯಿತಿ ಸದಸ್ಯ ಜಗದೀಶ್ ಮುಖಂಡರಾದ ನಂದೀಶ್. ಸತ್ಯವ್ರತ. ಪ್ರಕಾಶ್. ಜಗದೀಶ್. ಶಿವು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಇದ್ದರು.