ಬಿಜೆಪಿ ಜನಸಂಕಲ್ಪ ಯಾತ್ರೆಗೂ ಮುನ್ನ ಪಾವಗಡ, ಕೊರಟಗೆರೆ, ಮಧುಗಿರಿ ಬಿಜೆಪಿ ಘಟಕದಲ್ಲಿ ಭುಗಿಲೆದ್ದ ಆಕ್ರೋಶ

ದಿನೇ ದಿನೇ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳ ರಾಜೀನಾಮೆ ಬಿಜೆಪಿಯಲ್ಲಿ ಆತಂಕ ಸೃಷ್ಟಿ ಮಾಡಿದೆ ಕಾರ್ಯಕರ್ತರ ಕೂಗಿಗೆ ಬಿಜೆಪಿಯಲ್ಲಿ ಬೆಲೆಯೇ ಇಲ್ಲದಂತೆ ಆಗಿದೆ, ಹಣವಿರುವವನಿಗೆ ಮಣೆ ಹಾಕುತ್ತಿದ್ದಾರೆ, ದುಡ್ಡು ಇದ್ದವನಿಗೆ ಪದಾಧಿಕಾರಿ ಪೋಸ್ಟ್, ನಾಮಿನಿ ಸದಸ್ಯ, ಎಂಎಲ್ ಎ ಟಿಕೆಟ್ ಸಿಗುತ್ತದೆ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತನಿಗೆ ಹೇಳೋರು ಕೇಳೋರು ಯಾರು ಇಲ್ಲ , ಕಾರ್ಯಕರ್ತರ ಪಕ್ಷ ಬಿಜೆಪಿ ಎನ್ನುತ್ತಿದ್ದ ಕಾಲ ಹೋಗಿ ದುಡ್ಡು, ಜಾತಿ ಇದ್ದರೆ ಸಾಕು ಬಿಜೆಪಿಯಲ್ಲಿ ಎಲ್ಲ ಸ್ಥಾನ ಮಾನ ಸಿಗುತ್ತದೆ.

ಮತ್ತೆ ಅಧಿಕಾರಕ್ಕೆ ಬರಲು ಜನಗಳ ಹತ್ತಿರ ಹೋಗಲು ಜನಸಂಕಲ್ಪ ಯಾತ್ರೆ ಪಕ್ಷ ಸಂಘಟಿಸುತ್ತಿದ್ದಾರೆ ಮಧುಗಿರಿ ವಿಭಾಗ ಜಿಲ್ಲೆಯಲ್ಲಿ ಪಾವಗಡ,ಮಧುಗಿರಿ, ಕೊರಟಗೆರೆ, ಶಿರಾ ಭಾಗಗಳಲ್ಲಿ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರನ್ನು ಮೂಲೆ ಗುಂಪು ಮಾಡಿ ನೆನ್ನೆ ಮೊನ್ನೆ ಬಂದವರಿಗೆ ಅಧಿಕಾರ, ಜವಾಬ್ದಾರಿ, ಸರ್ಕಾರದ ನಾಮಿನಿ ಸದಸ್ಯತ್ವ, ನಿಗಮಗಳಲ್ಲಿ ಸ್ಥಾನ ಕೊಡುತ್ತಿದ್ದಾರೆ. ನಿಷ್ಟವಂತ ಕಾರ್ಯಕರ್ತರಿಗೆ ಜೀತಾದ ಆಳಿನ ತರ ಪಕ್ಷದಲ್ಲಿ ದುಡಿಯಬೇಕಾಗಿದೆ ಎಂದು ಹಿರಿಯ ಕಾರ್ಯಕರ್ತರೊಬ್ಬರು ತಿಳಿಸಿದರು.

ಇನ್ನೂ ವಿದಾನಸಭೆ ಚುನಾವಣೆಗೆ ಆಕಾಂಕ್ಷಿಗಳು ಕಾರ್ಯಕರ್ತರು ಹಾಗೂ ಪದಾಧಿಕಾರಿಗಳನ್ನು ಲೆಕ್ಕಕ್ಕೆ ಇಟ್ಟುಕೊಂಡಿಲ್ಲ ತಮ್ಮ ಹಿಂಬಾಲಕರಿಂದ ಕಾರ್ಯಕ್ರಮ ರೂಪಿಸುತ್ತಿದ್ದಾರೆ. ಪಕ್ಷದ ಸಿದ್ದಾಂತವೇ ಗೊತ್ತಿಲ್ಲದವರನ್ನ ತಂದರೆ ಇನ್ನೇನು ಆಗುತ್ತೇ ಹಣವಂತರಿಗೆ ಟಿಕೆಡ್ ನೀಡಿ ಗೆಲ್ಲಬೇಕೇನ್ನುವುದು ಪಕ್ಷದ ಸಿದ್ದಾಂತವಾದಂತೆ ಇದೆ ಎಂದು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿದೆ.

ಕೊರಟಗೆರರೆಯ ಬಿಜೆಪಿ ಕಾರ್ಯಕರ್ತರು ತಮ್ಮ ಪದಾಧಿಕಾರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಇನ್ನೂ ಅನೇಕ ಮಧುಗಿರಿ, ಪಾವಗಡ, ಕೊರಡಗೆರೆಯಲ್ಲಿ ಇಂದು ಮತ್ತು ನಾಳೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ

ದಾವಣಗೆರೆ ವಿಭಾಗದ ಸಂಘಟನಾ ಕಾರ್ಯದರ್ಶಿ ಜೇಷ್ಟ, ವಿಕಾಸ್ ಪುತ್ತೂರು ಹಣದ ದಹಕ್ಕೆ ಬೇಸತ್ತು
ಬಿಜೆಪಿ ಪಧಾದಿಕಾರಿಗಳಿಂದ ರಾಜೀನಾಮೆ

. ಶೂನ್ಯ ಹಂತದಿಂದ ಪಕ್ಷ ಸಂಘಟನೆ ಮಾಡುತ್ತ ಬಂದಿದ್ದೇನೆ. ಆದರೆ ಈಚೆಗೆ ಕೊರಟಗೆರೆ ಕ್ಷೇತ್ರದಲ್ಲಿ ನಿಷ್ಠಾವಂತರಿಗೆ ಗೌರವ ಸಿಗುತ್ತಿಲ್ಲ. ನನ್ನ ಸ್ಥಾನಕ್ಕೆ ರಾಜಿನಾಮೆ ನೀಡಿ ಸಾಮಾನ್ಯ ಕಾರ್ಯಕರ್ತನಾಗಿರಲಿದ್ದೇನೆ. ಕ್ಷೇತ್ರದಲ್ಲಿ ದಾವಣಗೆರೆ ವಿಭಾಗದ ಸಂಘಟನಾ ಕಾರ್ಯದರ್ಶಿ ಜೇಷ್ಟ ಹಾಗೂ ವಿಕಾಸ್ ಪುತ್ತೂರು ಅವರನ್ನು ಕ್ಷೇತ್ರದಲ್ಲಿ ಸಂಘಟನೆಗೆ ಕಳುಹಿಸಲಾಗಿದೆ. ಆದರೆ ಅವರು ಸಂಘಟನೆ ಮಾಡದೆ, ಟಿಕೆಟ್ ಆಕಾಂಕ್ಷಿಗಳಿಂದ ಹಣ ವಸೂಲಿಗೆ ಮುಂದಾಗಿದ್ದಾರೆ. ಇದು ಬೇಸರ ತರಿಸಿದೆ’ ಎಂದರು. ಹಿಂದುಳಿದ ಸಮುದಾಯವನ್ನು ಕಡೆಗಣಿಸಲಾಗುತ್ತಿದೆ ಎಂದು ಇತ್ತಿಚೆಗೆ ಜಿಲ್ಲಾ ಪ್ರಧಾನಕಾರ್ಯದರ್ಶಿ ತಿಮ್ಮಜ್ಜ ತಿಳಿಸಿದ್ದರು.

ದಾವಣಗೆರೆ ವಿಭಾಗದ ಸಂಘಟನಾ ಕಾರ್ಯದರ್ಶಿ ಜೇಷ್ಟ ಹಾಗೂ ವಿಕಾಸ್ ಪುತ್ತೂರು ಇಬ್ಬರು ಪಕ್ಷದ ಸಂಘಟನೆ ಮಾಡದೆ ಕಾರ್ಯಕರ್ತರಲ್ಲೇ ಬಿರುಕು ತರುತ್ತಿದ್ದಾರೆ, ಎಂ.ಎಲ್ ಎ ಟಿಕೆಟ್ ಆಕಾಂಕ್ಷಿಗಳಿಗೆ ನಾವು ಹೇಳಿದವರಿಗೆ ಪಕ್ಷ ಟಿಕೆಟ್ ನೀಡುತ್ತದೆ ಎಂದು ಆಕಾಂಕ್ಷಿಗಳಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಇಂಥವರಿಂದ ಪಕ್ಷದ ಮೇಲೆ ಕೆಟ್ಟ ಹೆಸರು ಬರುತ್ತೇ ಹಾಗೂ ಕಾರ್ಯಕರ್ತರು ಇವರ ಮಾತು ಕೇಳದಿದ್ದರೆ ಕಿರುಕುಳ ತಪ್ಪಿದಲ್ಲ ಇಂಥವರು ಸಂಘಟನೆಯಲ್ಲಿದ್ದಾರೆ ಪಕ್ಷ ನೆಲಕಚ್ಚುವುದು ಗ್ಯಾರಂಟಿ ಇವರಿಬ್ಬರನ್ನು ಜವಾಬ್ದಾರಿಯಿಂದ ತೆಗೆದರೆ ಪಕ್ಷಕ್ಕೆ ಅನುಕೂಲ

ಇನ್ನೂ ಪಾವಗಡದಲ್ಲಿ ಮತ್ತೊಂದು ಸಮಸ್ಯೆ:- ಇಷ್ಟು ದಿನಗಳ ಕಾಲ ಪಾವಗಡ ತಾಲೂಕಿನ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಲ್ಲಿ ಮುಖಂಡರುಗಳು ಮತ್ತು ನಾಯಕರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದರು ಆದರೆ ಬಿಜೆಪಿಯ ಯಾವೊಬ್ಬ ಮುಖಂಡರು ಸಹ ತಮ್ಮ ಅಸಮಾಧಾನವನ್ನು ಹೊರಹಾಕುತ್ತಿರಲಿಲ್ಲ, ಆದರೆ ಇಂದು ಪಾವಗಡ ಪಟ್ಟಣದ ತುಮಕೂರು ರಸ್ತೆಯ ರಾಯಲ್ ಹೆರಿಟೇಜ್ ಸಭಾಂಗಣದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿನ ಉದ್ದೇಶಿಸಿ ಮಾತನಾಡಿದ ಪಾವಗಡ ಬಿಜೆಪಿ ಮಂಡಲದ ಉಪಾಧ್ಯಕ್ಷರಾದ ಉಮೇಶ್, ಹಿರಿಯ ಮುಖಂಡರಾದ ಗಿರೀಶ್, ಸೂರ್ಯನಾರಾಯಣ್, ಪುರುಷೋತ್ತಮ್ ರೆಡ್ಡಿ ಓಬಿಸಿ ಜಿಲ್ಲಾ ಖಜಾಂಚಿ ರಾಜಕುಮಾರ, ಓಬಿಸಿ ಅಧ್ಯಕ್ಷರಾದ ಅಲ್ಕುಂದಿರಾಜ್, ಎಸ್ ಟಿ ಮೋರ್ಚಾದ ಮಲ್ಲಿಕಾರ್ಜುನ್ ರಾಘವೇಂದ್ರ, ಮಂಗಳವಾಡ ರಂಗಣ್ಣ, ತಿಪ್ಪೇಸ್ವಾಮಿ, ದವಡಬೆಟ್ಟ ಪೂಜಾರಪ್ಪ ಪೋತಗನಹಳ್ಳಿಯ ಚೈತನ್ಯ ಪ್ರಭು ಸೇರಿದಂತೆ ಹಲವರು ಪಾವಗಡ ತಾಲೂಕು ಬಿಜೆಪಿ ಮಂಡಲ ಮತ್ತು ಮಧುಗಿರಿ ಜಿಲ್ಲಾ ಬಿಜೆಪಿ ತಮಗಾದ ಅನ್ಯಾಯದ ಬಗ್ಗೆ ಅಸಮಾಧಾನವನ್ನು ಹೊರಹಾಕಿದ್ದಾರೆ. ಜೊತೆಗೆ ತಮಗೆ ನೀಡಿದಂತಹ ಪದವಿಗಳಿಗೆ ಸಾಮೂಹಿಕ ರಾಜೀನಾಮೆ ನೀಡುವುದಾಗಿ ಬಿಜೆಪಿ ಕಲಿಗಳು ಪ್ರಕಟಿಸಿದ್ದಾರೆ.

ತಾವು ಬಿಜೆಪಿ ಮಂಡಲದಲ್ಲಿ ಹುದ್ದೆಗಳನ್ನು ವಹಿಸಿಕೊಂಡಿದ್ದರು ಸಹ ತಮಗೆ ಯಾವುದೇ ರೀತಿಯಾದಂತ ಸೂಕ್ತ ಸ್ಥಾನಮಾನ ಇಲ್ಲ ಮತ್ತು ಪಾವಗಡದ ರವಿ ಮತ್ತು ಕೇಂದ್ರ ಸಚಿವ ಎ ನಾರಾಯಣಸ್ವಾಮಿಯರಿಂದ ನಾವು ಬೇಸತ್ತು ಈ ರಾಜೀನಾಮೆಯನ್ನು ಸಲ್ಲಿಸುತ್ತಿದ್ದೇವೆ. ಕಳೆದ ಮೂರು ವರ್ಷಗಳಿಂದ ನಾವು ಇವರ ಆಟಗಳನ್ನು ಸಹಿಸಿಕೊಂಡು ಬಂದಿದ್ದೇವೆ ಆದರೆ ಕೇಂದ್ರ ಸಚಿವರಾದ ಎ ನಾರಾಯಣಸ್ವಾಮಿ ಪಾವಗಡ ಮಂಡಲದ ಪದಾಧಿಕಾರಿಗಳು ನಮ್ಮ ಮಾತಿಗೆ ಕಿವಿ ಕೊಡುತ್ತಿಲ್ಲ ಸದ್ಯ ನಾವು 20 ಮಂಡಲದ ಪದಾಧಿಕಾರಿಗಳು ರಾಜೀನಾಮೆ ನೀಡುತ್ತಿದ್ದು ಮುಂದಿನ ದಿನಗಳಲ್ಲಿ 70ಕ್ಕೂ ಅಧಿಕ ವಿವಿಧ ಹುದ್ದೆಗಳನ್ನು ಅಲಂಕರಿಸಿರುವ ಬಿಜೆಪಿ ಮಂಡಲದ ಮುಖಂಡರುಗಳು ರಾಜೀನಾಮೆ ಸಲ್ಲಿಸುತ್ತಿದ್ದಾರೆ ಎಂದು ಇದೇ ವೇಳೆ ಜಿಟಿ ಗಿರೀಶ್ ಉಮೇಶ್ ಪುರುಷೋತ್ತಮರೆಡ್ಡಿ ರಾಜಕುಮಾರ್ ಆಲ್ಕುಂದರಾಜ್ ಮತ್ತಿತರರು ಪ್ರಕಟಿಸಿದ್ದಾರೆ

ಮೂರುಕ್ಷೇತ್ರದಲ್ಲಿ ಒಂದರಲ್ಲೂ ಗೆಲ್ಲುವುದು ಅನುಮಾನವಾಗಿರುವಾಗ ಈಗ ಸಾಲು ಸಾಲು ಕಾರ್ಯಕರ್ತರ ರಾಜೀನಾಮೆ ಬೇರೆ ರೀತಿಯ ಸಂದೇಶ ಕೊಡುತ್ತಿದ್ದೆ ಅದಷ್ಟು ಬೇಗ ವರಿಷ್ಟರು ಎಚ್ಚೆತ್ತುಕೊಂಡು ಪಕ್ಷ ಸಂಘಟಿಸಬೇಕಾಗಿದೆ ಹಾಗೂ ಕೆಲವರನ್ನು ಬದಲಾವಣೆ ಮಾಡಿ ಬಿನ್ನಾಬಿಪ್ರಾಯವನ್ನು ಶಮನಗೊಳಿಸಿದೃರೆ ಚುನಾವಣಾ ಅಖಾಡದಲ್ಲಿ ತನ್ನ ಬಲ ಪ್ರದರ್ಶಿಸಬಹುದು ಪಕ್ಷಕ್ಕೆ ದುಡಿದ ಕಾರ್ಯಕರ್ತರ ಹಿತ ಕಾಪಾಡುತ್ತಾರಾ ಕಾದು ನೋಡ ಬೇಕಾಗಿದೆ.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!