ಜನಸಂಕಲ್ಪ ಯಾತ್ರೆಗೆ 20ಸಾವಿರ ಕಾರ್ಯಕರ್ತರು ಸೇರುವ ನಿರೀಕ್ಷೆ..
ಕೊರಟಗೆರೆ ಕ್ಷೇತ್ರದಲ್ಲಿ ಶಕ್ತಿ ಪದರ್ಶನಕ್ಕೆ ಸಜ್ಜಾದ ಬಿಜೆಪಿ ಪಕ್ಷ
ರಾಜ್ಯ ಸರಕಾರದ ಸಾಧನೆಯ ಅನಾವರಣವೇ ಜನಸಂಕಲ್ಪ ಯಾತ್ರೆ
ಜನಸಂಕಲ್ಪ ವೇದಿಕೆಯಲ್ಲಿ ೧೦ಸಾವಿರ ಕಾರ್ಯಕರ್ತರಿಗೆ ಆಸನದ ವ್ಯವಸ್ಥೆ..
ಕೊರಟಗೆರೆ ಪಟ್ಟಣದ ನಾಲ್ಕು ದಿಕ್ಕಿನಲ್ಲೂ ಪೊಲೀಸರಿಂದ ಬಂದೋಬಸ್ತ್
ಕೊರಟಗೆರೆ:- ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಗಳ ಅನುಷ್ಠಾನದ ಸಾಧನೆಯ ಅನಾವರಣವೇ ಜನಸಂಕಲ್ಪ ಯಾತ್ರೆ.. ಜನಸಂಕಲ್ಪ ಯಾತ್ರೆಯ ಬೃಹತ್ ವೇದಿಕೆಯ ಸಮಾವೇಶಕ್ಕೆ ಕೊರಟಗೆರೆ ಕ್ಷೇತ್ರದ 242ಬೂತ್ ಮಟ್ಟದಿಂದ 25ಸಾವಿರಕ್ಕೂ ಅಧಿಕ ಕಾರ್ಯಕರ್ತರು ಆಗಮಿಸುವ ನಿರೀಕ್ಷೆ ಇದೆ. ಜನಸಂಕಲ್ಪ ಯಾತ್ರೆಯ ಸಮಾವೇಶ ಆಯೋಜನೆಯ ಮೂಲಕ ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷವು ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದೆ.
ಕೊರಟಗೆರೆ ಪಟ್ಟಣದ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಭಾರತೀಯ ಜನತಾ ಪಾರ್ಟಿಯಿಂದ ಜನಸಂಕಲ್ಪ ಯಾತ್ರೆಯ ಬೃಹತ್ ಸಮಾವೇಶದ ವೇದಿಕೆ ಕಾರ್ಯಕ್ರಮ ಡಿ.7ರ ಬುಧವಾರ ನಡೆಯಲಿದೆ. ಬೃಹತ್ ವೇದಿಕೆಯಲ್ಲಿ 15ಕ್ಕೂ ಅಧಿಕ ಕಾರ್ಯಕರ್ತರು ಕುಳಿತುಕೊಳ್ಳಲು ಆಸನದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ವೇದಿಕೆಯ ಸುತ್ತಮುತ್ತಲು ನಾಯಕರು ಕಟೌಟ್‌ಗಳು ರಾರಾಜಿಸುತ್ತೀವೆ. ಕೊರಟಗೆರೆ ಪಟ್ಟಣದ ನಾಲ್ಕು ದಿಕ್ಕಿನಲ್ಲಿಯು ಪೊಲೀಸ್ ಪಹರೆಯ ಮೂಲಕ ವಿಶೇಷವಾದ ಬಂದೋಬಸ್ತ್ ಮಾಡಲಾಗಿದೆ.
ಮಧುಗಿರಿ ಸಂಘಟನಾ ಜಿಲ್ಲೆಯ 4 ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳೇ ಗೆಲುವು ಸಾಧಿಸಲಿದ್ದಾರೆ. ಅದರಲ್ಲಿ ಕೊರಟಗೆರೆ ಕ್ಷೇತ್ರವು ನಮಗೆ ಅತಿಮುಖ್ಯವಾದ ಕ್ಷೇತ್ರ. ಕೇಂದ್ರ ಮತ್ತು ರಾಜ್ಯ ಸರಕಾರದ ಸಾಧನೆಯನ್ನು ಮನೆಮನೆಗೆ ತಲುಪಿಸುವ ಜವಾಬ್ದಾರಿ ನಮ್ಮದಾಗಿದೆ. ಕೊರಟಗೆರೆಯಲ್ಲಿ ನಡೆಯುವ ಡಿ.7ರ ಜನಸಂಕಲ್ಪ ಯಾತ್ರೆಗೆ ೨೫ಸಾವಿರ ಬಿಜೆಪಿ ಕಾರ್ಯಕರ್ತರು ಸೇರುವ ನಿರೀಕ್ಷೆ ಇದೆ.
.ಕೆ.ಮಂಜುನಾಥ. ಜಿಲ್ಲಾಧ್ಯಕ್ಷ. ಮಧುಗಿರಿ ಸಂಘಟನಾ ಜಿಲ್ಲೆ.
ಜನಸಂಕಲ್ಪ ಯಾತ್ರೆಗೆ ರಾಜ್ಯದ ಜನರಿಂದ ಉತ್ತಮ ಸ್ಪಂಧನೆ ಸಿಕ್ಕಿದೆ. ಡಿ.೭ರಂದು ತುಮಕೂರು ಜಿಲ್ಲೆಯ ಕುಣಿಗಲ್ ಮತ್ತು ಕೊರಟಗೆರೆಯಲ್ಲಿ ಜನಸಂಕಲ್ಪ ಯಾತ್ರೆಯ ಬೃಹತ್ ಸಮಾವೇಶ ನಡೆಯಲಿದೆ. ತುಮಕೂರು ಜಿಲ್ಲೆಯ 11ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಅಧ್ಯರ್ಥಿಗಳೇ ಗೆಲ್ತಾರೇ. ೨೦೨೩ರ ಚುನಾವಣೆ ಎದುರಿಸಲು ತಲಾಮಟ್ಟದಿಂದ ಬಿಜೆಪಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಬೃಹತ್ ಪಡೆಯು ಈಗಾಗಲೇ ಸಜ್ಜಾಗಿದೆ.
ಕೆ.ಎಸ್.ನವೀನ್. ಪ್ರಭಾರಿ. ದಾವಣಗೆರೆ ವಿಭಾಗ.
ಸರಕಾರದ ಸಾಧನೆಗಳ ಅನಾವರಣ..
ಪರಿಶಿಷ್ಟರ ಮೀಸಲು ಏರಿಕೆ, ಬಡಮಕ್ಕಳ ಶಿಕ್ಷಣಕ್ಕೆ ವಿದ್ಯಾನಿಧಿ, ಬಡವರು ಮತ್ತು ರೈತರಿಗೆ ಸಂಜೀವಿನಿ ಯಶಸ್ವಿನಿ, ಅಮೃತ ಯೋಜನೆ, ಜನರ ಮನೆಬಾಗಿಲಿಗೆ ಸರಕಾರ ಗ್ರಾಮ ಒನ್, ಪೌರ ಕಾರ್ಮಿಕರ ಕಾಯಂ, ನಿಮ್ಮ ಆರೋಗ್ಯಕ್ಕೆ ನಮ್ಮ ಕ್ಲಿನಿಕ್, ಕೆಂಪೇಗೌಡರ ಪ್ರತಿಮೆ, ಅಕ್ರಮ ಮತಾಂತರಕ್ಕೆ ಪುಲ್‌ಸ್ಟಾಪ್, ಪುಣ್ಯಕೋಟಿ ದತ್ತು, ಕರೆ ಮಾಡಿದ್ರೆ ಮನೆಗೇ ಪಶು ತುರ್ತುವಾಹನ, ದಲಿತ ಯುವಕರಿಗೆ ಸ್ವಯಂ ಉದ್ಯೋಗ ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ಹತ್ತಾರು ಸಾಧನೆಯ ಅನಾವರಣ ಕಾರ್ಯಕ್ರಮವೇ ಜನ ಸಂಕಲ್ಪಯಾತ್ರೆ.
ಜನಸಂಕಲ್ಪ ಯಾತ್ರೆಗೆ ವಿಶೇಷ ಅತಿಥಿಗಳು..
ಸನ್ಮಾನ್ಯ ಸಿಎಂ ಬಸವರಾಜು ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಅರಗ ಜ್ಞಾನೇಂದ್ರ, ಕೆಂದ್ರ ಸಚಿವ ಎ.ನಾರಾಯಣಸ್ವಾಮಿ, ರಾಜ್ಯ ಸಚಿವರಾದ ಅಶ್ವತ್ಥನಾರಾಯಣ, ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜು, ಗೋವಿಂದ ಕಾರಜೋಳ, ಮಾಧುಸ್ವಾಮಿ, ಬಿ.ಸಿ.ನಾಗೇಶ್, ಸಂಸದ ಬಸವರಾಜು, ತುಮಕೂರು ಜಿಲ್ಲೆಯ ಹಾಲಿ ಶಾಸಕರು ಮತ್ತು ಮಾಜಿ ಶಾಸಕರು ಕೊರಟಗೆರೆಯ ಜನ ಸಂಕಲ್ಪ ಯಾತ್ರೆಯ ಸಮಾವೇಶಕ್ಕೆ ಆಗಮಿಸಲಿದ್ದಾರೆ.
242ಬೂತ್‌ಗಳಿಗೆ 4೦೦ವಾಹನ..
ಜನಸಂಕಲ್ಪ ಯಾತ್ರೆಯ ಸಮಾವೇಶ ಯಶಸ್ವಿಗಾಗಿ ಬಿಜೆಪಿ ಪಕ್ಷದಿಂದ ಕೊರಟಗೆರೆ ಕ್ಷೇತ್ರದ 242ಬೂತ್‌ಗಳಿಗೆ 40೦ಕ್ಕೂ ಅಧಿಕ ಬಸ್ ಮತ್ತು ಕಾರಿನ ಸೌಲಭ್ಯ ಕಲ್ಪಿಸಲಾಗಿದೆ. ಸಮಾವೇಶ ಯಶಸ್ವಿಗಾಗಿ ಮಧುಗಿರಿಯ ಮಂಡಲ ಜಿಲ್ಲಾಧ್ಯಕ್ಷ ಮಂಜುನಾಥ, ಕೊರಟಗೆರೆ ಅಧ್ಯಕ್ಷ ಪವನ್‌ಕುಮಾರ್ ನೇತೃತ್ವದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರ ತಂಡ ಸ್ಥಳದಲ್ಲಿಯೇ ಮೊಕ್ಕಾಂ ಹೋಡುವ ಮೂಲಕ ಸಮಾವೇಶ ಯಶಸ್ವಿಗೆ ಹಗಲುರಾತ್ರಿ ಪ್ರಯತ್ನಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ತುಮಕೂರು ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕರವಿ, ಮಧುಗಿರಿ ಜಿಲ್ಲೆಯ ಪ್ರಭಾರಿ ವಿಕಾಸ್ ಪುತ್ತೂರು, ಜಿಲ್ಲಾಧ್ಯಕ್ಷ ಮಂಜುನಾಥ, ಕೊರಟಗೆರೆ ಮಂಡಲ ಅಧ್ಯಕ್ಷ ಪವನಕುಮಾರ್, ಯುವಮೋರ್ಚ ಕಾರ್ಯದರ್ಶಿ ಸ್ವಾಮಿ, ಮಂಡಲ ಕಾರ್ಯದರ್ಶಿ ಗುರುಧತ್, ಕೊರಟಗೆರೆ ಕ್ಷೇತ್ರದ ಆಕಾಂಕ್ಷಿತ ಅಭ್ಯರ್ಥಿಯಾದ ಬಿ.ಹೆಚ್.ಅನಿಲ್‌ಕುಮಾರ್, ಸೇರಿದಂತೆ ಇತರರು ಇದ್ದರು.
ವರದಿ :-ಹರೀಶ್ ಬಾಬು ಬಿ. ಹೆಚ್ ಕೊರಟಗೆರೆ