ಹೊಸಕೆರೆ : ಮೆದುಳು ಜ್ವರ ಮಕ್ಕಳಲ್ಲಿ ಅತಿವೇಗವಾಗಿ ಹರಡುವುದರಿಂದ ಮಕ್ಕಳಿಗೆ ಹರಡದಂತೆ ಈಗಿನಿಂದಲೇ ಜೆಇ ಲಸಿಕೆಯನ್ನು ಹಾಕುವುದರ ಮೂಲಕ ಮೆದಳು ಜ್ವರವನ್ನು ಮಕ್ಕಳಿಂದ ರಕ್ಷಿಸಬೇಕಾಗಿದೆ ಎಂದು ಅಳಿಲುಘಟ್ಟ ತಾಲ್ಲೂಕ್ ಪಂಚಾಯಿತಿ ಮಾಜಿ ಸದಸ್ಯ ಅ.ನ.ಲಿಂಗಪ್ಪ ತಿಳಿಸಿದರು.
ಹಾಗಲವಾಡಿ ಹೋಬಳಿಯ ಹೊಸಕೆರೆಯ ಸನ್ ರೈಸ್ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಕ್ಕಳಿಗೆ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮೆದುಳು ಜ್ವರ ವೈರಸ್ ತಡೆಗೆ ಜೆಇ ಲಸಿಕೆಯನ್ನು ಒಂದು ವರ್ಷದ ಮಗುವಿನಿಂದ ಹದಿನೈದು ವರ್ಷದ ಮಕ್ಕಳಿಗೆ ಹಾಕುವುದರಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿ, ಮೆದಳು ಜ್ವರ ಬರುವುದನ್ನು ತಡೆಯಲು ಸಹಕಾರಿಯಾಗುತ್ತದೆ, ಜೆ ಇ ಲಸಿಕೆ ಹಾಕಿಸುವಲ್ಲಿ ಭಯಬೇಡ, ಹಿಂದೆ ರಾಜ್ಯದಲ್ಲಿ ಕರೋನಾ ಕಾಣಿಸಿಕೊಂಡಾಗ ಲಸಿಕೆ ಪಡೆಯಲು ಜನರು ಪ್ರಾರಂಭದಲ್ಲಿ ಹಿಂದೇಟು ಹಾಕಿದರು ನಂತರ ದಿನಗಳಲ್ಲಿ ಮುಗಿ ಬಿದ್ದು ಲಸಿಕೆ ಹಾಕಿಸಿಕೊಳುವುದನ್ನು ಕಂಡಿದೇವೆ ಆದ್ದರಿಂದ ಮಕ್ಕಳ ಉತ್ತಮ ಆರೋಗ್ಯಕ್ಕೆ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಿಕೊಂಡು ರೋಗಗಳಿಂದ ರಕ್ಷಿಸಿಕೊಳುವುದು ನಮ್ಮೆಲ್ಲರ ಜವಬ್ದಾರಿಯಾಗಿದೆ ಎಂದರು.
ಅಳಿಲಘಟ್ಟ ಪ್ರಾಥಮಿಕ ಆರೋಗ್ಯಕೇಂದ್ರದ ವೈಧ್ಯಾಧಿಕಾರಿ ಡಾ.ನಾರಾಯಣಗೌಡ ಮಾತನಾಡಿ ಮೆದುಳು ಜ್ವರ ಮಕ್ಕಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದು ಬಹುಬೇಗ ಮೆದುಳು ನಿಷ್ಕ್ರಿಯೆಗೊಳ್ಳಲಿದೆ. ಜೀವಕ್ಕೆ ಅಪಾಯ ತರುವ ಈ ಮಾರಕ ರೋಗ ವಿಪರೀತ ತಲೆ ನೋವು, ಜ್ವರ, ವಾಂತಿ ಹೀಗೆ ಅನೇಕ ಲಕ್ಷಣ ಕಾಣುತ್ತದೆ ಪೋಷಕರು ಮಕ್ಕಳಿಗೆ ಯಾವುದೇ ಭಯವಿಲ್ಲದೆ ಲಸಿಕೆಯನ್ನು ಹಾಕಿಸಬೇಕು ಇದರಿಂದ ಮಕ್ಕಳ ಆರೋಗ್ಯವನ್ನು ಕಾಪಾಡಿಕೊಳಬೇಕು, ಕೊರೋನ ವೈರಸ್ ಗಿಂತಲೂ ಅಪಾಯಕಾರಿ ಇದಾಗಿದ್ದು, ಈ ವೈರಸ್ ತಡೆಯಲು ರೋಗ ಬರುವ ಮೊದಲೇ ಮುಂಜಾಗ್ರತೆ ವಹಿಸುವುದು ಮುಖ್ಯವೆಂದು ಸರ್ಕಾರ ಮಕ್ಕಳಿಗೆ ಉಚಿತವಾಗಿ ನೀಡುತ್ತಿದೆ, ಪೋಷಕರು ಸಹಕರಿಸುವಂತೆ ಮನವಿ ಮಾಡಿದರು. ಮೊದಲ ಹಂತದ ಜೆಇ ಲಸಿಕೆಯನ್ನು ಹಾಕುತ್ತಿದ್ದು ಒಂದರಿಂದ 15 ವರ್ಷದ ವರೆಗೂ ಈ ಲಸಿಕೆಯನ್ನು ಹಾಕಲಾಗುತ್ತಿದೆ, ಮೆದಳು ಜ್ವರ ತಡೆಯಬೇಕಾದರೆ ಪ್ರತಿಯೊಬ್ಬರೂ ಸಹಾ ಲಸಿಕೆ ಹಾಕಿಸಿಕೊಳಬೇಕು ಎಂದು ತಿಳಿಸಿದರು.
ಸಂಸ್ಥೆ ಕಾರ್ಯದರ್ಶಿ ಬಸವರಾಜು , ಆರೋಗ್ಯ ಸಿಬ್ಬಂದಿಗಳಾದ ಮಧುಸೂದನ್ , ಸುಮ ಹಾಗೂ ಶಾಲಾ ಸಿಬ್ಬಂದಿ ಹಾಗೂ ಮಕ್ಕಳು ಇದ್ದರು.