ಪರಮೇಶ್ವರನ್ನ ಕಾಂಗ್ರೇಸ್ ಪಕ್ಷದವರೇ ಸೋಲಿಸ್ತಾರೇ: ಸಿಎಂ ಬೊಮ್ಮಯಿ ಕೊರಟಗೆರೆಯಲ್ಲಿ ಇತಿಹಾಸ
ಸೃಷ್ಟಿಮಾಡಿದ ಜನಸಂಕಲ್ಪ
ಸಮಾವೇಶ


ಕೊರಟಗೆರೆಯಲ್ಲಿ ಇತಿಹಾಸ ಸೃಷ್ಟಿಮಾಡಿದ ಜನಸಂಕಲ್ಪ
ಸಮಾವೇಶ
15ಸಾವಿರಕ್ಕೂ ಅಧಿಕ ಕಾರ್ಯಕರ್ತರ ಆಗಮನ.. ಕೇಸರಿಮವಾಗಿ ಕಂಗೋಳಿಸಿದ ಕೊರಟಗೆರೆ ಪಟ್ಟಣ
ಪರಮೇಶ್ವರನ್ನ ಕಾಂಗ್ರೇಸ್ಪ ಪಕ್ಷದವರೇ ಸೋಲಿಸ್ತಾರೇ
ಕೊರಟಗೆರೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೇಲ್ತಾರೇ.. ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರುತ್ತೇ: ಬಸವರಾಜು ಬೊಮ್ಮಾಯಿ
ಕೊರಟಗೆರೆ:- ಡಾ.ಜಿ.ಪರಮೇಶ್ವರನ್ನ ಕಾಂಗ್ರೇಸ್ಪ ಕ್ಷದವರೇ ವೈರಿಗಳಾಗಿ ಸೋಲಿಸ್ತಾರೇ.. ಅದು ಸ್ವತಃ ಶಾಸಕ ಡಾ.ಜಿ.ಪರಮೇಶ್ವರ್ ಅವರಿಗೂ
ಕಟುಸತ್ಯ ಗೋತ್ತಾಗಿದೆ.. ಕೊರಟಗೆರೆ ಕ್ಷೇತ್ರದಲ್ಲಿ 2023ಕ್ಕೆ ಬಿಜೆಪಿ ಪಕ್ಷದ ಅಭ್ಯರ್ಥಿಯೇ ಗೇಲ್ತಾರೇ.. ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಪಕ್ಷಕ್ಕೆ

130ಸೀಟು ಬರುವುದು ಗ್ಯಾರಂಟಿ ಎಂದು ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ತಿಳಿಸಿದರು.ಕೊರಟಗೆರೆ ಪಟ್ಟಣದ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಭಾರತೀಯ ಜನತಾ ಪಾರ್ಟಿ
ಕೊರಟಗೆರೆ ಮಂಡಲದಿAದ ಬುಧವಾರ ಏರ್ಪಡಿಸಲಾಗಿದ್ದ ಜನಸಂಕಲ್ಪ ಯಾತ್ರೆ ಸಾರ್ಥಕ ಸೇವೆ-ಯುವ ಸಬಲೀಕರಣ ವೇದಿಕೆಯ
ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತದೇಶದ 2೦ರಾಜ್ಯದಲ್ಲಿ ಬಿಜೆಪಿ ನೇತೃತ್ವದ ರಾಜ್ಯ ಸರಕಾರ ಅಧಿಕಾರದಲ್ಲಿದೆ. ಕಾಂಗ್ರೇಸ್ಪ ಪಕ್ಷವು ಕೇವಲ 2ರಾಜ್ಯದಲ್ಲಿ ಅಧಿಕಾರದಲ್ಲಿದೆ.


2023ಕ್ಕೆ ಅದು ಕಳೆದುಕೊಂಡು ಕಾಂಗ್ರೇಸ್ಮು ಮುಕ್ತ ಹಾರಾಷ್ಟ ಆಗಲಿದೆ. ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಪಕ್ಷದ ಸುನಾಮಿ ಎದ್ದು ನಿಂತಿದೆ. ಕಾಂಗ್ರೇಸ್ಪ ಕ್ಷವು ಈಗಾಗಲೇ ಕೊಚ್ಚಿಹೋಗಿ ರಾಜಕೀಯ
ಅಸ್ತೀತ್ವ ಕಳೆದುಕೊಂಡಿದೆ. 2023ಕ್ಕೆ ಜನಸಂಕಲ್ಪ ಯಾತ್ರೆಯು ವಿಜಯ ಸಂಕಲ್ಪ ಯಾತ್ರೆ ಆಗುವ ಭರವಸೆ ನನಗಿದೆ ಎಂದು ಹೇಳಿದರು.
ಕರ್ನಾಟಕ ಸರಕಾರದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಾತನಾಡಿ ಭಾರತ ದೇಶದಲ್ಲಿ ರಾಹುಲ್‌ಗಾಂಧಿಯ ಭಾರತ ಜೋಡೋ ನಾಟಕ ನಡೇಯೊಲ್ಲ. ದಲಿತರ ಮತಕ್ಕಾಗಿ ಹತ್ತಾರು
ರೀತಿಯ ಡ್ರಾಮಗಳು ಚುನಾವಣೆ ವೇಳೆ ಪ್ರಾರಂಭ ಆಗಿವೆ. 5೦ವರ್ಷದಿಂದ ಕಾಂಗ್ರೇಸ್ ಪಕ್ಷ ಮಾಡದಿರುವ ಮೀಸಲಾತಿ ಹೆಚ್ಚಳದ ಕೆಲಸವನ್ನು ನಮ್ಮ ಸಿಎಂ ಮಾಡಿದ್ದಾರೆ. ನರೇಂದ್ರ ಮೋದಿಯ
ಅಲೆಗೆ ಕಾಂಗ್ರೇಸ್ ಪಕ್ಷವು ಮೂಲೆಗುಂಪಾಗಿದೆ. 2023ಕ್ಕೆ ಕಾಂಗ್ರೇಸ್ ಮುಕ್ತ ಮೋದಿಯ ಕನಸು

ನನಸಾಗಲಿದೆ. ಕೊರಟಗೆರೆ ಕ್ಷೇತ್ರದ ಬಿಜೆಪಿ ಪಕ್ಷದ ಧ್ವಜ ಹಾರಬೇಕಿದೆ ಎಂದು ತಿಳಿಸಿದರು.ಕರ್ನಾಟಕ ಸರಕಾರದ ಗೃಹಸಚಿವ ಅರಗ
ಜ್ಞಾನೇಂದ್ರ ಮಾತನಾಡಿ 25ವರ್ಷದಿಂದ ಕಾಂಗ್ರೇಸ್ಪ ಕ್ಷವು ದಲಿತರನ್ನು ಬಿಕ್ಷಕರನ್ನಾಗಿ ಮಾಡಿದೆ.ಸಂವಿಧಾನ ಶಿಲ್ಪಿ ಅಂಬೇಡ್ಕರ್ ಸತ್ತಾಗ ದೆಹಲಿಯಲ್ಲಿ 1ಅಡಿಜಾಗವನ್ನು ನೀಡದೇ ಅವಮಾನ ಮಾಡಿದೆ.
ಚುನಾವಣೆ ವೇಳೆ ಕಾಂಗ್ರೇಸ್ ಪಕ್ಷ ನೀಡುವ 5೦೦ರೂ ನಮಗೇ ಬೇಡ. ಕೇಂದ್ರದಿಂದ 6ಸಾವಿರ,ರಾಜ್ಯದಿಂದ 4ಸಾವಿರ ಸೇರಿ ಪ್ರತಿವರ್ಷ 10ಸಾವಿರ ರೈತರ ಖಾತೆಗಳಿಗೆ ಜಮಾವಾಗುತ್ತೀದೆ.ಬಿಜೆಪಿಯೇ ಗೆಲ್ಲದಿರುವ ಕೊರಟಗೆರೆ ಕ್ಷೇತ್ರದಲ್ಲಿ ಜನಸಾಗರವೇ ತುಂಬಿದೆ. ೨೦೨೩ಕ್ಕೆ
ಬಿಜೆಪಿ ಪಕ್ಷದ ಅಭ್ಯರ್ಥಿ ಗೆಲ್ಲುವುದು ಖಚಿತವಾಗಿದೆ ಎಂದು ಭರವಸೆ ನೀಡಿದರು.
ವೇದಿಕೆಯಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಸಂಸದ ಬಸವರಾಜು, ಎಂಎಲ್‌ಸಿ ರಮೇಶ್‌ಕುಮಾರ್, ಚೀದಾನಂದಗೌಡ, ಶಿರಾ ಶಾಸಕ ರಾಜೇಶ್‌ಗೌಡ, ಮಾಜಿ ಎಂಎಲ್‌ಸಿ ಹುಲಿನಾಯ್ಕರ್, ಮಾಜಿ ಸಂಸದ ಮುದ್ದಹನುಮೇಗೌಡ, ದಾವಣಗೆರೆ ಉಸ್ತುವಾರಿ ನವೀನ್, ರೈತಮೋರ್ಚ ಕಾರ್ಯದರ್ಶಿ ಶಿವಪ್ರಸಾದ್, ಕೊರಟಗೆರೆ ಬಿಜೆಪಿ ಪಕ್ಷದ ಆಕಾಂಕ್ಷಿಗಳಾದ ಬಿ.ಹೆಚ್.ಅನಿಲ್‌ಕುಮಾರ್, ಗಂಗಹನುಮಯ್ಯ,ವೈ.ಹೆಚ್.ಹುಚ್ಚಯ್ಯ, ಡಾ.ಲಕ್ಷಿö್ಮಕಾಂತ, ಮುನಿಯಪ್ಪ ಸೇರಿದಂತೆ ಇತರರು ಇದ್ದರು.
ಕಾರ್ಯಕ್ರಮದಲ್ಲಿ ತುಮಕೂರು ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕರವಿ, ಪ್ರಧಾನ ಕಾರ್ಯದರ್ಶಿ ಸ್ವಾಮಿ, ಮಧುಗಿರಿ ಜಿಲ್ಲಾಧ್ಯಕ್ಷ ಟಿ.ಕೆ.ಮಂಜುನಾಥ,

ಪ್ರಭಾರಿ ವಿಕಾಸ್‌ಪುತ್ತೂರು, ಕೊರಟಗೆರೆ ಮಂಡಲ ಅಧ್ಯಕ್ಷ ಪವನಕುಮಾರ್, ಯುವಧ್ಯಕ್ಷ ಗುರುಧತ್ ಮುಖಂಡರಾದ ವೆಂಕಟಾಚಲಯ್ಯ, ಹೇಮಾಲತಾ, ಸುಶಿಲಮ್ಮ, ಮಮತಾ, ದಾಡಿವೆಂಕಟೇಶ್, ಹನುಮಂತರಾಯಪ್ಪ, ರಘು, ಲೊಕೇಶ್, ಸಂಜೀವರೆಡ್ಡಿ, ಸೇರಿದಂತೆ ಇತರರು ಇದ್ದರು.

.
..
ಜನಸಂಕಲ್ಪ ಸಮಾವೇಶಕ್ಕೆ ಜನಸಾಗರ..
ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಸಾರಥ್ಯದಲ್ಲಿ
ಕೊರಟಗೆರೆ ಪಟ್ಟಣದಲ್ಲಿ ನಡೆದ ಜನಸಂಕಲ್ಪ ಯಾತ್ರೆಗೆ
೧೫ಸಾವಿರಕ್ಕೂ ಅಧಿಕ ಬಿಜೆಪಿ ಪಕ್ಷದ ಕಾರ್ಯಕರ್ತರು
ಆಗಮಿಸುವ ಮೂಲಕ ಇತಿಹಾಸ ಸೃಷ್ಟಿಸಿದೆ. ವೇದಿಕೆಯ
೫ಸಾವಿರಕ್ಕೂ ಅಧಿಕ ಆಸನಗಳು ಭರ್ತಿಯಾಗಿ ಸುತ್ತಮುತ್ತಲು ಸಾವಿರಾರು ಸಂಖ್ಯೆಯಲ್ಲಿ ನೆರದಿದ್ದ ಕಾರ್ಯಕರ್ತರು ಬಿಜೆಪಿ ಪಕ್ಷದ ಪರವಾಗಿ ಘೋಷಣೆಯನ್ನು ಮುಳುಗಿಸಿದರು. ಇತಿಹಾಸದ ಮೊದಲ ಸಲ ಕೊರಟಗೆರೆ ಪಟ್ಟಣವು ಕೇಸರಿಮಯವಾಗಿ ಕಂಗೊಳಿಸುತ್ತೀತ್ತು. ರಸ್ತೆಯುದ್ದಕ್ಕೂ ಬಿಜೆಪಿ ನಾಯಕರ ಸಾವಿರಾರು ಕಟೌಟ್, ಬ್ಯಾನರ್ ಮತ್ತು ಬಿಜೆಪಿ ಪಕ್ಷದ ಬಾವುಟಗಳು ರಾರಾಜಿಸುತ್ತಿದ್ದರು.
ಡಾ.ಲಕ್ಷ್ಮಿಕಾಂತ ಬೆಂಬಲಿಗರ ಹೈಡ್ರಾಮ..
ಜನಸಂಕಲ್ಪ ಸಮಾವೇಶದ ವೇಳೆ ಬಿಜೆಪಿ ಆಕಾಂಕ್ಷಿ
ಡಾ.ಲಕ್ಷಿö್ಮಕಾಂತ ಬೆಂಬಲಿಗರ ಹೈಡ್ರಾಮವೇ ನಡೆದಿದೆ. ಸಿಎಂ ಬಸವರಾಜು ಬೊಮ್ಮಾಯಿ ಮತ್ತು ಸಚಿವ ಗೋವಿಂದ ಕಾರಜೋಳ ಭಾಷಣದ ವೇಳೆ ಡಾ.ಲಕ್ಷಿö್ಮಕಾಂತ ಬೆಂಬಲಿಗರು ಭಾವಚಿತ್ರ ಹಿಡಿದು
ಯುವಕರು ಘೋಷಣೆಗಳು ಕೂಗಿದ್ದಾರೆ.ಭಾಷಣಕ್ಕೆ ಅಡ್ಡಿಯಾದ ವೇಳೆ ಗೋವಿಂದ ಕಾರಜೋಳ ಸುಮ್ಮನಿರಲು 5ಬಾರಿ ಮನವಿ
ಮಾಡಿದ್ದಾರೆ. ನಂತರವು ಸಹ ಘೋಷಣೆ ಹೆಚ್ಚಾದ
ಹಿನ್ನಲೆ ವೇದಿಕೆ ಮೇಲೆಯೇ ಮುಖ್ಯಮಂತ್ರಿ ಲಕ್ಷಿö್ಮಕಾಂತ್ ಕೆರೆದು ಕ್ಲಾಸ್ ತೆಗೆದುಕೊಂಡು ಬೆಂಬಲಿಗರನ್ನು ಸುಮ್ಮನಿರುವಂತೆ ಖಡಕ್ ಎಚ್ಚರಿಕೆ ನೀಡಿದ ಘಟನೆ ನಡೆಯಿತು.
.
ಶಾಸಕರ ನಿರ್ಲಕ್ಷದಿಂದ ಕೊರಟಗೆರೆ ಕ್ಷೇತ್ರದ
ಅಭಿವೃದ್ದಿಯು ಕುಂಠಿತವಾಗಿದೆ. ಕೊರಟಗೆರೆ
ಕ್ಷೇತ್ರದ ಅಭಿವೃದ್ದಿಯ ಬಗ್ಗೆ ಸಿಎಂ ಬೊಮ್ಮಾಯಿ
ಸಾಹೇಬ್ರು ಭರವಸೆ ನೀಡಿದ್ದಾರೆ. ಕೊರಟಗೆರೆಯಲ್ಲಿ
ಜನಸಂಕಲ್ಪ ಯಾತ್ರೆಯ ಸಮಾವೇಶವು ಯಶಸ್ವಿಕಂಡಿದೆ. 2023ಕ್ಕೆ ಬಿಜೆಪಿ ಪಕ್ಷವು ಕೊರಟಗೆರೆ ಕ್ಷೇತ್ರದಲ್ಲಿ ಜಯಬೇರಿ ಭಾರಿಸಲಿದೆ.
ಸಮಾವೇಶ ಯಶಸ್ವಿಗೆ ಕಾರಣರಾದ ಮುಖಂಡರು
ಮತ್ತು ಕಾರ್ಯಕರ್ತರಿಗೆ ತುಂಬು ಹೃದಯದ ಧನ್ಯವಾದ.
ಬಿ.ಹೆಚ್.ಅನಿಲ್‌ಕುಮಾರ್. ಬಿಜೆಪಿ ಆಕಾಂಕ್ಷಿ. ಕೊರಟಗೆರೆ
ನಾವು ಎತ್ತಿನಹೊಳೆ ಯೋಜನೆ ಪ್ರಾರಂಭ ಮಾಡಿದ್ವಿ
ಕಾಂಗ್ರೇಸ್-ಜೆಡಿಎಸ್ ಪಕ್ಷದವ್ರು ನಿಲ್ಲಿಸಿದ್ರು.
ಪ್ರಧಾನಿಮೋದಿ ಸಂಕಲ್ಪದಂತೆ 2ವರ್ಷದಲ್ಲಿ 10ಕೋಟಿ ಮನೆಗಳಿಗೆ ನೀರು ಕೊಟ್ಟಿದ್ದೇವೆ. ಎಸ್ಸಿ- ಎಸ್ಟಿಗೆ ಮೀಸಲಾತಿ ಹೆಚ್ಚಳ ಮತ್ತು ರೈತರ ಮಕ್ಕಳಿಗೆ ವಿದ್ಯಾನಿಧಿ ಪ್ರಾರಂಭ ಮಾಡಿದ್ದೇವೆ.
ಜನವರಿ ಮಾಹೆಯಲ್ಲಿ 18ಕ್ಷ ಉದ್ಯೋಗ ಸೃಷ್ಟಿ ಮಾಡ್ತೀವಿ. ಕಾಂಗ್ರೇಸ್ ಪಕ್ಷದ್ದು ಸೋನಿಯಾ ಗಾಂಧಿಕೀ ಜೈ. ಬಿಜೆಪಿ ಪಕ್ಷದ್ದೂ ಭಾರತ್ ಮಾತಾಕೀ ಜೈ. ಯಾವ ಪಕ್ಷ ನಿಮಗೇ ಬೇಕೊ ನೀವೇ ಯೋಚನೆ ಮಾಡಿ.
ಬಸವರಾಜು ಬೊಮ್ಮಾಯಿ. ಸಿಎಂ. ಕರ್ನಾಟಕ

ವರದಿ :-ಹರೀಶ್ ಬಾಬು ಬಿ. ಹೆಚ್ ಕೊರಟಗೆರೆ..

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!