ತಾಕತ್ತಿದ್ದರೆ ಶಾಸಕರಿಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ತಪ್ಪಿಸಿ : ಗುಬ್ಬಿ ಕಾಂಗ್ರೆಸ್ ಮುಖಂಡರಿಗೆ ಸವಾಲೆಸದ ಲಿಂಗಾಯಿತ ಸಮುದಾಯದ ವಾಸಣ್ಣ ಅಭಿಮಾನಿಗಳು

ಗುಬ್ಬಿ: ವಕೀಲ ವೃತ್ತಿಯ ಪ್ರಸನ್ನಕುಮಾರ್ ಅವರು ನಾಲಿಗೆ ಮೇಲೆ ಹಿಡಿತವಿಲ್ಲ. ಐದು ವರ್ಷಕ್ಕೊಮ್ಮೆ ಬಂದು ಕಾಂಗ್ರೆಸ್ ನಮ್ಮದು ಎನ್ನುವ ಅವರು ಶಾಸಕರ ತಾಕತ್ತು ಬಗ್ಗೆ ಮಾತನಾಡುವ ಬದಲು ನಿಮಗೆ ತಾಕತ್ತು ಇದ್ದರೆ ಶಾಸಕರಿಗೆ ಟಿಕೆಟ್ ತಪ್ಪಿಸಿ ನೋಡೋಣ ಎಂದು ಕೊಪ್ಪ ಗ್ರಾಪಂ ಸದಸ್ಯ ಕೋಣನಕೆರೆ ರಮೇಶ್ ನೇರ ಸವಾಲೆಸೆದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ವೀರಶೈವ ಸಮಾಜದ ವಾಸಣ್ಣ ಅಭಿಮಾನಿಗಳ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಚುನಾವಣೆ ಹಿನ್ನಲೆ ಬಂದು ಆಕಾಂಕ್ಷಿ ಎನ್ನುವ ಪ್ರಸನ್ನಕುಮಾರ್ ಅವರು ಸ್ಥಳೀಯ ಚುನಾವಣೆ ಎದುರಿಸಿ ಗೆಲುವು ಸಾಧಿಸುವ ಶಕ್ತಿ ಅವರಲ್ಲಿಲ್ಲ ಎಂದು ವ್ಯಂಗ್ಯವಾಡಿದರು.

ವೀರಶೈವ ಸಮಾಜಕ್ಕೆ ಶಾಸಕರ ಕೊಡುಗೆ ಏನು ಎಂದು ಕೇಳುವ ಮುನ್ನ ನಿಮ್ಮ ಕೊಡುಗೆ ಏನಿದೆ ತಿಳಿಸಿ. ಶಾಸಕರು ವೀರಶೈವ ಲಿಂಗಾಯತ ಸಮುದಾಯದ ಗ್ರಾಮಗಳಲ್ಲಿ ಮಾಡಿರುವ ಕೆಲಸದ ಶ್ವೇತ ಪತ್ರವನ್ನು ಶಾಸಕರ ಅಭಿಮಾನಿಗಳಾದ ನಾವುಗಳು ಹೊರಡಿಸುತ್ತೇವೆ. ಬಹಿರಂಗ ವೇದಿಕೆಗೆ ಪ್ರಸನ್ನಕುಮಾರ್ ಬರಲಿ ಅವರ ಕೊಡುಗೆ ತಿಳಿಸಲಿ ಎಂದ ತಿಳಿಸಿದ ಅವರು ಶಾಸಕರ ಕೊಡುಗೆ ತಾಲ್ಲೂಕಿನಲ್ಲಿ ಅಪಾರವಿದೆ. ನಾಲ್ಕು ಬಾರಿ ಶಾಸಕರಾದವರ ಬಗ್ಗೆ ಹಗುರವಾಗಿ ಮಾತನಾಡುವುದು ನಿಲ್ಲಿಸಿ ಗೌರವವಾಗಿ ನಡೆದುಕೊಂಡು ನೀವು ಮರ್ಯಾದೆ ಉಳಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಜಿ.ಹೊಸಹಳ್ಳಿ ಗ್ರಾಪಂ ಉಪಾಧ್ಯಕ್ಷ ಹರ್ಷನ್ ಮಾತನಾಡಿ ನಮ್ಮ ದೊಡ್ಡಪ್ಪ ಸಂಸದ ಬಸವರಾಜು ಕಾಂಗ್ರೆಸ್ ಬಿಟ್ಟರೂ ನಾನು ಕಾಂಗ್ರೆಸ್ ಬಿಡಲಿಲ್ಲ ಎನ್ನುವ ಇವರು ಕೆಪಿಸಿಸಿ ಸದಸ್ಯತ್ವ ನೋಂದಣಿ ಮಾಡಲು ಸೂಚಿಸಿದರೆ ಟಿಕೆಟ್ ನೀಡುವುದಾದರೆ ನೋಂದಣಿ ಕಾರ್ಯ ಮಾಡುವ ಮಾತುಗಳಾಡಿದ್ದ ನಿಮ್ಮಲ್ಲಿ ಬದ್ಧತೆ ಇದೆಯೇ ಎಂದು ಪ್ರಶ್ನಿಸಿ ದೇವಸ್ಥಾನ ಒಂದರಲ್ಲಿ ಕಮಲದ ಕೆತ್ತನೆ ಬದಲು ಕೈ ಚಿತ್ರ ಕೆತ್ತಿಸಿರುವ ಕಟ್ಟು ಕಥೆ ಹೇಳುತ್ತಾರೆ. ಇಲ್ಲೇ ತಿಳಿಯುತ್ತೆ ಇವರ ವಾಕ್ಚಾತುರ್ಯ. ಇವರ ದೊಡ್ಡಪ್ಪ ದೊಡ್ಡ ಸುಳ್ಳೇಶ್ವರ, ಇವರು ಸಣ್ಣ ಸುಳ್ಳೇಶ್ವರ ಎಂದು ಪ್ರಸನ್ನಕುಮಾರ್ ವಿರುದ್ದ ಹರಿಹಾಯ್ದರು.

ವಿಧಾನ ಪರಿಷತ್ ಚುನಾವಣೆಯಲ್ಲಿ ಶಾಸಕರ ತಾಕತ್ತು ಎಲ್ಲರೂ ಕಂಡಿದ್ದಾರೆ ಎಂದು ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿ ಐದು ವರ್ಷದ ಹಿಂದೆ ರಂಗೋಲಿ ಸ್ಪರ್ಧೆ ಮಾಡಿ ಕಾಣೆಯಾಗಿದ್ದ ಈ ಪ್ರಸನ್ನಕುಮಾರ್ ಅವರು ಗೋಶಾಲೆ ನಡೆಸುವುದಾಗಿ ಹೇಳಿಕೊಂಡು ಹಸುಗಳನ್ನು ಕಟುಕರಿಗೆ ಮಾರಾಟ ಮಾಡಿರುವ ಉದಾಹರಣೆ ಇದ್ದು. ಇವರ ಮೇಲೆ ಕೇಸು ಕೂಡ ದಾಖಲಾಗಿದೆ. ಈ ರೀತಿಯ ನೀವು ಕಾಂಗ್ರೆಸ್ ಪಕ್ಷ ನಮ್ಮದು ಎನ್ನುತ್ತಾ ಶಾಸಕರ ಬಗ್ಗೆ ಸಣ್ಣದಾಗಿ ಮಾತನಾಡಿದರೆ ವೀರಶೈವ ಲಿಂಗಾಯತ ಸಮುದಾಯದ ವಾಸಣ್ಣ ಅಭಿಮಾನಿಗಳಾದ ನಾವುಗಳು ನಿಮ್ಮ ವಿರುದ್ದ ನಿಂತು ಹೋರಾಟ ಮಾಡಬೇಕಾದೀತು ಎಂದು ಪ್ರಸನ್ನ ಕುಮಾರ್ ಅವರನ್ನು ಎಚ್ಚರಿಕೆ ನೀಡಿದರು.

ಗ್ರಾಪಂ ಸದಸ್ಯ ಹೊದಲೂರು ಶಿವಪ್ಪ, ಮಾಜಿ ಸದಸ್ಯ ಕೊಪ್ಪ ಹರ್ಷ, ಮುಖಂಡರಾದ ಪವನ್, ಮಾರುತಿ, ಕಿರಣ್, ಚನ್ನಬಸವಯ್ಯ ಇತರರು ಇದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!