ಪೂಜೆಯ ನೆಪದಲ್ಲಿ ಚುನಾವಣೆ ಸಿದ್ಧತೆಯೆ ಮಾಜಿ ಶಾಸಕ ಸೋಮ್ಲಾ ನಾಯ್ಕ ಪುತ್ರಿ ಗಾಯಿತ್ರಿ ಬಾಯಿ?

ಪಾವಗಡ ತಾಲೂಕಿನ ಮಾಜಿ ಶಾಸಕರು ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಪುತ್ರಿ ಗಾಯತ್ರಿ ಬಾಯಿಯವರು ಪಾವಗಡ ಕಲ್ಯಾಣದುರ್ಗ ರಸ್ತೆಯಲ್ಲಿರುವ ತಮ್ಮ ತೋಟದಲ್ಲಿ ನೂತನ ಕೋಳಿ ಪೌಲ್ಟ್ರಿ ಫಾರಂ ಪ್ರಾರಂಭೋತ್ಸವದ
ಪೂಜ್ಯ ಕಾರ್ಯಕ್ರಮದ ಮೂಲಕ ಪಕ್ಷಾತೀತವಾಗಿ ಸಾವಿರಾರು ಜನರನ್ನು ಸೇರಿಸಿ 2023ರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಆಕಾಂಕ್ಷಿಯಾಗಿ ಅರ್ಜಿ ಸಲ್ಲಿಸಿದ್ದು ತೆರೆಮರೆಯಲ್ಲಿ ಚುನಾವಣೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆಂದು ಅವರ ಅಭಿಮಾನಿಗಳು ಹಾಗೂ ಸಾರ್ವಜನಿಕರ ಅಭಿಪ್ರಾಯವಾಗಿದೆ

ಈ ಸಂದರ್ಭದಲ್ಲಿ ಪಕ್ಷಾತೀತವಾಗಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಮಾಜಿ ತಾಲೂಕು ಪಂಚಾಯಿತಿ ಸದಸ್ಯರು ಗ್ರಾಮ ಪಂಚಾಯಿತಿ ಹಾಲಿ ಮಾಜಿ ಅಧ್ಯಕ್ಷರುಗಳು ಸದಸ್ಯರುಗಳು ವಿವಿಧ ಸಮುದಾಯಗಳ ಮುಖಂಡರುಗಳು ಮಾಜಿ ಶಾಸಕ ಸೋಮ್ಲಾ ನಾಯ್ಕ ಹಾಗೂ ಗಾಯತ್ರಿ ಬಾಯಿ ಅಭಿಮಾನಿಗಳು ಹಾಜರಿದ್ದರು

ಈ ಸಮಾರಂಭಕ್ಕೆ ಶಾಸಕರಾದ ವೆಂಕಟಪ್ಪನವರು ಮಾಜಿ ಸಂಸದರಾದ ಚಂದ್ರಪ್ಪ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!