ಕೊರಟಗೆರೆ: ಕ್ಯಾಂಟರ್, ಆಟೋ ನಡುವೆ ಅಪಘಾತ 2ಸಾವು-3ಜನರಿಗೆ ಗಂಭೀರ ಗಾಯ


ಕೊರಟಗೆರೆ:- ಕ್ಯಾಂಟರ್ ಮತ್ತು ಆಟೋ ನಡುವೆ ಮುಖಾಮುಖಿ ಅಪಘಾತವಾಗಿ ಇಬ್ಬರು ಮಹಿಳೆಯರು ಸ್ಥಳದಲ್ಲಿಯೇ ಮೃತಪಟ್ಟರೇ ಆಟೋ ಚಾಲಕನ ಜೊತೆ ಆತನ ಇಬ್ಬರು ಮಕ್ಕಳಿಗೆ ಗಂಭೀರ ಗಾಯಗಳಾಗಿ ಗೌರಿಬಿದನೂರು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿರುವ ಘಟನೆ ಭಾನುವಾರ ನಡೆದಿದೆ.
ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಅರಸಾಪುರ ಗ್ರಾಪಂ ವ್ಯಾಪ್ತಿಯ ಕಾಶಾಪುರ ಗೇಟ್ಸ ಮೀಪದ ಮುಖ್ಯರಸ್ತೆಯಲ್ಲಿ ಕ್ಯಾಂಟರ್ಮ ತ್ತು ಆಟೋ ನಡುವೆ ಮುಖಾಮುಖಿ ಅಪಘಾತವಾಗಿ ಇಬ್ಬರು ಮಹಿಳೆಯರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಆಟೋ ಚಾಲಕನ ಜೊತೆಯಲ್ಲಿ ಆತನ ಇಬ್ಬರು ಪುಟಾಣಿ ಮಕ್ಕಳಿಗೆ ಗಂಭೀರ ಗಾಯವಾಗಿವೆ.

ಕೊರಟಗೆರೆಯಿಂದ ಗೌರಿಬಿದನೂರಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಲ್ಲಿ ಭೀಕರ ಅಪಘಾತ ನಡೆದಿದೆ. ಅರಸಾಪುರ ಮತ್ತು ಕಾಶಾಪುರ ಗೇಟ್ ಬಳಿ ಈಗಾಗಲೇ ಅಪಘಾತ ವಲಯ ಎಂದು ಗುರುತಿಸಲಾಗಿದೆ. ಇದೇ ಸ್ಥಳದಲ್ಲಿ ಹತ್ತಾರು ಅಪಘಾತ ನಡೆದಿದ್ದು ತಿರುವಿನಲ್ಲಿ ರಸ್ತೆಉಬ್ಬು ನಿರ್ಮಾಣಕ್ಕೆ ಸ್ಥಳೀಯರು ಆಗ್ರಹ ಮಾಡಿದ್ದಾರೆ. ಕೊರಟಗೆರೆ ಪಟ್ಟಣದ ವಾಸಿಯಾದ ಮೀಲಾನಿ(25), ಜೈರಾಭಿ(7೦) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಆಟೋ ಚಾಲಕ ಕಲಂಧರ್(36), ಅರ್ಪ(5), ಅಸೀತಾ(3)ಗೆ ಗಂಭೀರ ಗಾಯಗಳಾಗಿ ಗೌರಿಬಿದನೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತೀದ್ದಾರೆ. ಸ್ಥಳಕ್ಕೆ ಗೌರಿಬಿದನೂರು ಪೊಲೀಸರು ಬೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!