ತುಮಕೂರು : ಭಾರತದ ಭಾಗವಾದ ಅರುಣಾಚಲದ ಗಡಿಯ ಎಲ್.ಒ.ಸಿ. ತವಾಂಗ್ ಪ್ರದೇಶದಲ್ಲಿ ಇದೇ ಡಿಸೆಂಬರ್ 9 ರಂದು ಕಮ್ಯೂನಿಷ್ಟ್ ನೇತೃತ್ವದ ಆಡಳಿತದ ಡ್ರ್ಯಾಗನ್ ಚೀನಾದ 300-400 ಸೈನಿಕರು ಗಡಿ ಉಲ್ಲಂಘಿಸಿ, ಗುಂಡಿನ ಸುರುಮಳೆಗೈದು ಸಂಘರ್ಷ ಮಾಡಿರುವುದನ್ನು ಭಾರತದ ಸೈನಿಕರು ಶೌರ್ಯ ಪ್ರದರ್ಶಿಸಿ, ಯಶಸ್ವಿಯಾಗಿ ಹಿಮ್ಮಟ್ಟಿಸಿದ್ದಾರೆ. ಪದೇ ಪದೇ ಡ್ರ್ಯಾಗನ್ ಚೈನಾ ಭಾರತದ ಭೂಪ್ರದೇಶಕ್ಕೆ ಬಂದು ಅನಿರೀಕ್ಷಿತ ಬಲವಂತದ ಅತಿಕ್ರಮಣಕ್ಕೆ ಮುಂದಾಗುವುದನ್ನು ಬಿಜೆಪಿ ತುಮಕೂರು ಜಿಲ್ಲಾ ಘಟಕದ ವಕ್ತಾರ ಕೆ.ಪಿ.ಮಹೇಶ ತೀವ್ರವಾಗಿ ವಿರೋಧ ವ್ಯಕ್ತಪಡಿಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಭಾರತ-ಚೈನಾ ಸಮರದಲ್ಲಿ ಅಂದಿನ ಕಾಂಗ್ರೆಸ್ ಆಡಳಿತ ಮಾಡಿದ ತಪ್ಪಿಗೆ, ಸಾವಿರಾರು ಚದುರ ಕಿ.ಮಿ. ಭೂಮಿ ಕಳೆದುಕೊಂಡೆವು. ಪದೇ ಪದೇ ಕಾಲು ಕೆರೆದು, ಅನಾವಶ್ಯಕ ಗಡಿ ತಂಟೆ ಮಾಡುವ ಚೀನಾ, ಇತ್ತೀಚಿಗೆ ತವಾಂಗ್ ಗಡಿ ಪ್ರದೇಶದಲ್ಲೂ ಗಲಭೆ ಸೃಷ್ಠಿಸಿ ಅತಿಕ್ರಮಣಕ್ಕೆ ಮುಂದಾಗಿದ್ದಾಗ, ಭಾರತ ಸೈನಿಕರು ಯಶಸ್ವಿಯಾಗಿ ಹಿಂದಕ್ಕೆ ಅಟ್ಟಿದ್ದರು. ಇದೀಗ ಮತ್ತೆ ಡ್ರ್ಯಾಗನ್ ಚೀನಾ ಯೋಧರು ಅರುಣಾಚಲ ಗಡಿಯಲ್ಲಿ ಗಡಿ ಉಲ್ಲಂಘಿನೆ ಮಾಡಿ ಕೈ-ಕೈ ಮಿಲಾಯಿಸುವುದನ್ನು ಕೆ.ಪಿ.ಮಹೇಶ ಖಂಡಿಸಿದ್ದಾರೆ. ಚೈನಾ ಸೈನಿಕರಿಗೆ ಭಾರತದ ಸಮರ್ಥ-ಬಲಿಷ್ಟ ವೀರ ಯೋಧರು ತಕ್ಕ ಪಾಠ ಕಲಿಸಿ, ಹಿಮ್ಮೆಟ್ಟಿಸಿದ್ದಕ್ಕೆ ಭಾರತದ ಸೈನಿಕರಿಗೆ ಬಿಜೆಪಿ ಅಭಿನಂದಿಸಿದೆ. ಘರ್ಷಣೆಯಲ್ಲಿ ಗಾಯಾಳು ಭಾರತೀಯ ಯೋಧರಿಗೆ ಸೂಕ್ತ ಚಿಕಿತ್ಸೆಯನ್ನಯ ಭಾರತೀಯ ಸೇನೆ ನೀಡುತ್ತಿರುವುದಕ್ಕೆ ಬಿಜೆಪಿ ಧನ್ಯವಾದ ಅರ್ಪಿಸಿದೆ.
ಮೋದಿ ಕೊಲ್ಲಬೇಕು ಎಂಬ ಹೇಳಿಕೆ : ಖಂಡನೆ
ಪ್ರಧಾನಿ ನರೇಂದ್ರಮೋದಿಯವರನ್ನು ಕೊಲ್ಲಬೇಕು ಎಂಬ ಮಧ್ಯಪ್ರದೇಶ ಮಾಜಿ ಗೃಹ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ರಾಜಾ ಪಟೇರಿಯಾರವರ ಹೇಳಿಕೆಯನ್ನು ಬಿಜೆಪಿ ವಕ್ತಾರ ಕೆ.ಪಿ.ಮಹೇಶ ಖಂಡಿಸಿದ್ದಾರೆ. ಪದೇ ಪದೇ ಕಾಂಗ್ರೆಸ್‌ನ ಮುಖಂಡರು, ಪ್ರಮುಖರು ಪ್ರಧಾನಿ ನರೇಂದ್ರಮೋದಿರವರ ಮೇಲೆ ಅನಾವಶ್ಯಕ ಆರೋಪ ಮಾಡುತ್ತಿರುವುದಲ್ಲದೇ, ಕೀಳು ಮಟ್ಟದ ಶಬ್ದಗಳಲ್ಲಿ ಮಾತನಾಡುವುದು ಸರ್ವತಾ ಖಂಡನೀಯ. ಇದರಿಂದ ಗುಜರಾತ್ ಮಹಾ ಚುನಾವಣೆಯ ಕಳೆದ ೪ ಚುನಾವಣೆಗಳಲ್ಲೂ ಕಾಂಗ್ರೆಸ್ ಹೀನಾಮಾನವಾಗಿ ಸೋತಿದೆ ಎಂದು ವಿವರಿಸಿರುವ ಕೆ.ಪಿ.ಮಹೇಶ, ರಾಜಾ ಪಟೇರಿಯಾರವರನ್ನು ಮಧ್ಯಪ್ರದೇಶ ಪೂವೈ ಠಾಣೆಯಲ್ಲಿ ಪೋಲೀಸರು ಎಫ್.ಐ.ಆರ್. ದಾಖಲಿಸಿದ್ದಾರೆ. ಪ್ರಧಾನಿಗೆ ಅವಹೇಳನ ಮಾಡಿದ ರಾಜಾ ಪಟೇರಿಯಾಗೆ ಉಗ್ರ ಶಿಕ್ಷೆಯಾಗಬೇಕೆಂದು ಬಿಜೆಪಿ ತುಮಕೂರು ಜಿಲ್ಲಾ ಘಟಕ ಒತ್ತಾಯಿಸಿದೆ.